Spiritual: ಬೆಳಿಗ್ಗೆ ಕೆಲಸಕ್ಕೆ ಹೋಗುವ ಎಷ್ಟೋ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯಲು, ಮನೆ ಕ್ಲೀನ್ ಮಾಡಲು, ಇನ್ನುಳಿದ ಕೆಲಸ ಮಾಡಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಅವರು ಸಂಜೆ ಕೆಲಸದಿಂದ ಬಂದ ಬಳಿಕ, ಆ ಕೆಲಸಗಳನ್ನೆಲ್ಲ ಮಾಡಲು ಶುರು ಮಾಡುತ್ತಾರೆ. ಆದರೆ ಹಿಂದೂಗಳಲ್ಲಿ ಹೇಳಿರುವ ಪ್ರಕಾರ, ಸಂಜೆ ಬಳಿಕ ಮನೆ ಕ್ಲೀನ್ ಮಾಡಬಾರದು. ದೇವರ ದೀಪ ಹಚ್ಚಿದ ಬಳಿಕ, ಬಟ್ಟೆ ತೊಳೆಯಬಾರದು, ಕಸ ಗುಡಿಸಬಾರದು, ಮನೆ ಕ್ಲೀನ್ ಮಾಡಬಾರದು. ಇವೆಲ್ಲವೂ ಮನೆಗೆ ದರಿದ್ರ ತರುವ ಕೆಲಸವೆಂದು ಹೇಳಿದ್ದಾರೆ. ಹಾಗಾದ್ರೆ ಯಾಕೆ ರಾತ್ರಿ ಹೊತ್ತು ಬಟ್ಟೆ ಒಗೆಯಬಾರದು, ಬಟ್ಟೆ ಒಣಗಿಸಬಾರದು ಅಂತಾ ತಿಳಿಯೋಣ ಬನ್ನಿ.
ವೈಜ್ಞಾನಿಕ ಕಾರಣ ಹೇಳುವುದಾದರೆ, ರಾತ್ರಿ ಹೊತ್ತು ಗಾಳಿಯಿಂದ ಬಟ್ಟೆ ಒಣಗುತ್ತದೆ. ಮತ್ತು ಹೀಗೆ ಒಣಗಿದ ಬಟ್ಟೆ ಧರಿಸಿ ಯಾವುದೇ ಲಾಭವಾಗುವುದಿಲ್ಲ. ಇದರಿಂದ ಚರ್ಮ ರೋಗ ಬರುವ ಸಾಧ್ಯತೆ ಇರುತ್ತದೆ. ಏಕೆಂದರೆ, ಬಟ್ಟೆಗಳು ಎಂದಿಗೂ ಸೂರ್ಯನ ಬಿಸಿಲು ತಾಗಿಯೇ ಒಣಗಬೇಕು. ಸೂರ್ಯನ ಬಿಸಿಲಿಗೆ ಹಾಕದೇ ಒಣಗುವ ಬಟ್ಟೆ ಧರಿಸುವುದರಿಂದ ಚರ್ಮ ರೋಗ ಬರುವ ಸಾಧ್ಯತೆ ಇರುತ್ತದೆ.
ಇನ್ನು ಕೆಲ ನಂಬಿಕೆಗಳ ಪ್ರಕಾರ, ರಾತ್ರಿ ಬಟ್ಟೆ ಒಣಗಿಸಿದರೆ, ಅದರಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಜೋರಾಗಿರುತ್ತದೆ. ಅಂಥ ಬಟ್ಟೆ ಧರಿಸುವುದರಿಂದ ನಿಮ್ಮ ಆರೋಗ್ಯ ಸದಾಕಾಲ ಹಾಳಾಗಿಯೇ ಇರುತ್ತದೆ. ಇನ್ನೊಂದು ವಿಚಾರವೆಂದರೆ, ಇನ್ನೊಬ್ಬರ ಕೈಗೆ ನಿಮ್ಮ ಬಟ್ಟೆ ಸಿಗುವ ಹಾಗೆ ನೀವು ಒಣಗಿಸಿದ್ದಲ್ಲಿ, ಅದರಲ್ಲೂ ರಾತ್ರಿ ಹೊತ್ತು ಬಟ್ಟೆ ಒಣಗಿಸಿದ್ದಲ್ಲಿ, ನಿಮ್ಮ ಬಟ್ಟೆಯನ್ನು ಮಾಟ ಮಂತ್ರದ ಕೆಲಸಕ್ಕಾಗಿ ಬಳಸಬಹುದು. ಹಾಗಾಗಿ ರಾತ್ರಿ ಹೊತ್ತು ಬಟ್ಟೆ ಒಗೆದು, ಒಣಗಿಸಬಾರದು. ಅದರಲ್ಲೂ ಪುಟ್ಟ ಮಕ್ಕಳ ಬಟ್ಟೆಯನ್ನು ಎಂದಿಗೂ ರಾತ್ರಿ ಒಗೆದು, ಹೊರಗೆ ಒಣಗಿಸಬೇಡಿ.