Spiritual: ಕೆಲವರಿಗೆ ಎಲ್ಲಾದರೂ ಹೋಗುವಾಗ ಪರ್ಫ್ಯೂಮ್ ಹಾಕಿಕೊಂಡು ಹೋಗುವ ಅಭ್ಯಾಸವಿರುತ್ತದೆ. ಬೇಸಿಗೆ ಗಾಲದಲ್ಲಿ ಬೆವರಿನ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಪರ್ಫ್ಯೂಮ್ ಹಾಕಲಾಗುತ್ತದೆ. ಆದರೆ ಹಲವರು ಪ್ರತಿದಿನ ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ. ಆದರೆ ಕೆಲ ನಂಬಿಕೆಗಳ ಪ್ರಕಾರ, ರಾತ್ರಿಯ ಹೊತ್ತು ಪರ್ಫ್ಯೂಮ್, ಬಾಡಿ ಸ್ಪ್ರೇ, ಸೆಂಟ್ ಬಳಸಬಾರದು. ಇದರಿಂದ ಅಡ್ಡ ಪರಿಣಾಮವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ ಬೀರುತ್ತದೆ ಅಂತಾ ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ರಾತ್ರಿ ಹೊತ್ತಲ್ಲಿ ಪರ್ಫ್ಯೂಮ್ ಬಳಸಿದರೆ, ನಕಾರಾತ್ಮಕ ಶಕ್ತಿ ನಮ್ಮತ್ತ ಆಕರ್ಷಿತವಾಗುತ್ತದೆ. ಅದರ ಕೆಟ್ಟ ಪ್ರಭಾವ ನಮ್ಮ ಮೇಲೆ ಬೀಳುತ್ತದೆ. ಕೆಲವೊಮ್ಮೆ ನಮಗೆ ತೊಂದರೆಯಾಗುವ ರೀತಿ, ಆ ನಕಾರಾತ್ಮಕ ಶಕ್ತಿ ಪ್ರಭಾವ ಬೀರುತ್ತದೆ. ಹಾಗಾಗಿಯೇ ರಾತ್ರಿ ಹೊತ್ತು ಸೆಂಟ್ ಹಾಕಬಾರದು ಅಂತಾ ಹೇಳಲಾಗುತ್ತದೆ.
ಧಾರ್ಮಿಕತೆಯಲ್ಲಿ ಏಕಾಗೃತೆ ಇರುವುದಿಲ್ಲ. ಸುಗಂಧ ದ್ರವ್ಯ ಬಳಸುವುದರಿಂದ ಧಾರ್ಮಿಕತೆಗೆ ಧಕ್ಕೆ ಬರುತ್ತದೆ. ಆಧ್ಯಾತ್ಮಿಕತೆಗೆ ಅಡ್ಡಿಯಾಗುತ್ತದೆ ಎನ್ನುತ್ತಾರೆ. ಇದಕ್ಕೆ ಕಾರಣವೇನು ಎಂದರೆ, ಸುಗಂಧ ದ್ರವ್ಯದಿಂದ ಹೊರಹೊಮ್ಮುವ ಸುಂಗಂಧ ಅದರೆಡೆಗೆ ಸೆಳೆಯುತ್ತದೆ. ಇದರಿಂದ ಪೂಜೆ ಪುನಸ್ಕಾರಗಳಲ್ಲಿ ಭಕ್ತಿಯಿಂದ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ನಿದ್ರೆ, ಕನಸುಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ರಾತ್ರಿ ಸುಗಂಧ ದ್ರವ್ಯ ಬಳಸುವುದರಿಂದ ಯಾವ ರೀತಿ ನಕಾರಾತ್ಮಕ ಶಕ್ತಿಗಳು ನಮ್ಮ ಬಳಿ ಬರುತ್ತದೆಯೋ, ಆ ರೀತಿ ಅವುಗಳಿಂದ ನಮಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನಾವಿರುವ ಸ್ಥಳದಲ್ಲಿ ದೇವರ ಪೂಜೆ ಇಲ್ಲ, ಅದೊಂದು ನಾಸ್ತಿಕತೆಯ ಜಾಗವಾಗಿದ್ದಲ್ಲಿ, ಅಲ್ಲಿ ಆತ್ಮಗಳ ಇರುವಿಕೆ ಇದ್ದರೆ, ನಿಮ್ಮ ನಿದ್ರೆಗೂ ಅದು ಭಂಗ ತರಬಹುದು. ಹಾಗಾಗಿ ರಾತ್ರಿ ಹೊತ್ತು ಸುಗಂಧ ದ್ರವ್ಯ ಬಳಸಬಾರದು.