Spiritual: ಜೀವನದಲ್ಲಿ ಉದ್ಧಾರವಾಗಬೇಕು ಅಂತಲೇ ಎಲ್ಲರೂ ದುಡಿಯುವುದು. ಆದರೆ ದುಡಿದ ದುಡ್ಡು ಮಾತ್ರ ಎಲ್ಲರ ಬಳಿ ನಿಲ್ಲುವುದಿಲ್ಲ. ಇದಕ್ಕೆ ಕಾರಣ ನಾವಿರುವ ರೀತಿ. ನಾವು ಯಾವ ರೀತಿ ಮನೆಯಲ್ಲಿ ಇರುತ್ತೇವೆ. ಯಾವ ಯಾವ ನಿಯಮಗಳನ್ನು ಅನುಸರಿಸುತ್ತೇವೆ ಅಂತಾ ಅನ್ನೋದರ ಮೇಲೆ ನಮ್ಮ ಆರ್ಥಿಕ ಪರಿಸ್ಥಿತಿ ನಿಂತಿರುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ಲಕ್ಷ್ಮೀ ನಿಲ್ಲಬೇಕು ಅಂದ್ರೆ, ನಾವು ಮುಸ್ಸಂಜೆ ವೇಳೆ ಕೆಲ ಕೆಲಸಗಳನ್ನು ಮಾಡಬಾರದು.
ಮುಸ್ಸಂಜೆ ವೇಳೆ ನಿದ್ರಿಸಬಾರದು: ಮುಸ್ಸಂಜೆ ವೇಳೆ ನಿದ್ರಿಸುವುದರಿಂದ ನಿಮ್ಮಲ್ಲಿ ಕೋಪ, ತಾಪ ಹೆಚ್ಚುತ್ತದೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇದರಿಂದಲೇ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಹಾಗಾಗಿ ಮುಸ್ಸಂಜೆ ವೇಳೆ ನಿದ್ರಿಸಬಾರದು.
ಮುಸ್ಸಂಜೆ ವೇಳೆ ಕೂದಲು, ಉಗುರು ಕತ್ತರಿಸಬಾರದು: ಮುಸ್ಸಂಜೆ ವೇಳೆ ಕೂದಲು ಮತ್ತು ಉಗುರು ಕತ್ತರಿಸಬಾರದು. ಇದು ಮನೆಗೆ ದರಿದ್ರ ತರುತ್ತದೆ. ನಿಮಗೆ ಆರ್ಥಿಕ ಸಮಸ್ಯೆ ತರುತ್ತದೆ.
ಮುಸ್ಸಂಜೆ ವೇಳೆ ಊಟ ಮಾಡಬೇಡಿ: ಮುಸ್ಸಂಜೆ ವೇಳೆ ಊಟ ಮಾಡುವುದು, ಮುಸುರೆ ಪದಾರ್ಥ ತಿನ್ನುವುದು ತಪ್ಪು ಎನ್ನಲಾಗುತ್ತದೆ. ಲಕ್ಷ್ಮೀ ದೇವಿ ಬರುವ ವೇಳೆ ನೀವು ಊಟ, ಆಹಾರ ಸೇವಿಸಿದರೆ, ಲಕ್ಷ್ಮೀಗೆ ಅಗೌರವ ತೋರಿದಂತೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಮುಸ್ಸಂಜೆ ವೇಳೆ ಆಹಾರ ಸೇವನೆ ಬೇಡ. ಮುಸ್ಸಂಜೆಯಾಗುವುದಕ್ಕೂ ಮುನ್ನ ಮತ್ತು ರಾತ್ರಿ ಆಹಾರ ಸೇವಿಸಿ.
ಮುಸ್ಸಂಜೆ ವೇಳೆ ಕಸ ಗುಡಿಸಬೇಡಿ: ಮುಸ್ಸಂಜೆ ವೇಳೆ ಮನೆಯಲ್ಲಿ ಕಸ ಗುಡಿಸುವುದರಿಂದ ಲಕ್ಷ್ಮೀ ದೇವಿರ ಅವಕೃಪೆಗೆ ಪಾತೃವಾಗಬೇಕಾಗುತ್ತದೆ. ಹಾಗಾಗಿ ಮುಸ್ಸಂಜೆ ವೇಳೆ ಕಸ ಗುಡಿಸಬಾರದು ಅಂತಾರೆ. 5 ಗಂಟೆಯ“ಳಗೇ ಕಸ ಗುಡಿಸಿ, ಕ್ಲೀನ್ ಮಾಡಿದರೆ ಉತ್ತಮ.
ಮುಸ್ಸಂಜೆ ವೇಳೆ ಜಗಳವಾಡಬೇಡಿ: ಮುಸ್ಸಂಜೆ ವೇಳೆ ಅಸ್ತು ದೇವತೆಗಳು ಅಸ್ತು ಅಸ್ತು ಅಂತಾ ಹೇಳುತ್ತಿರುತ್ತದೆ ಎಂಬ ನಂಬಿಕೆ ಇದೆ. ಈ ವೇಳೆ ಜಗಳವಾಡಿ, ಬಾಯಿ ಬಂದ ಹಾಗೆ ಮಾತನಾಡಿದ್ದಲ್ಲಿ, ಈ ವೇಳೆ ಅಸ್ತು ದೇವತೆಗಳು ಅಸ್ತು ಎಂದರೆ, ನಿಮ್ಮ ಜೀವನದ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ಮುಸ್ಸಂಜೆ ವೇಳೆ ಜಗಳವಾಡಬಾರದು.