Tuesday, December 3, 2024

Latest Posts

Spiritual: ಹಿಂದೂ ಧರ್ಮದ ಸಪ್ತ ಚಿರಂಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು..?: ಭಾಗ 2

- Advertisement -

Spiritual: ಹಿಂದೂ ಧರ್ಮದಲ್ಲಿ ಇರುವ ಸಪ್ತ ಚಿರಂಜೀವಿಗಳಲ್ಲಿ ಮೂವರ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಇನ್ನುಳಿನ ನಾಲ್ವರ ಬಗ್ಗೆ ಈ ಭಾಗದಲ್ಲಿ ತಿಳಿಯೋಣ.

ಕೃಪಾಚಾರ್ಯ: ಕೃಪಾಚಾರ್ಯರನ್ನು ಬ್ರಹ್ಮನ ನಾಲ್ಕನೇಯ ಅವತಾರವೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿ ಬದುಕುಳಿದ ಕೌರವರಲ್ಲಿ ಕೃಪಾಚಾರ್ಯರೂ ಒಬ್ಬರಾಗಿದ್ದಾರೆ. ಯುದ್ಧದ ಬಳಿಕ ಪಾಂಡವರಿಗೆ ಶರಣಾಗಿ, ಹಸ್ತಿನಾಪುರಕ್ಕೆ ತೆರಳಿ, ಅರ್ಜುನನ ಮಗ ಪರೀಕ್ಷಿತನಿಗೆ ಗುರುವಾದರು.

ವೇದವ್ಯಾಸ: ವೇದದ ವರ್ಗೀಕರಣ ಮಾಡುವವರನ್ನು ವೇದವ್ಯಾಸ ಎನ್ನುತ್ತಾರೆ. ವಿಷ್ಣುವಿನ ಅವತಾರದಲ್ಲಿ ವೇದವ್ಯಾಸರ ಅವತಾರವೂ ಒಂದು ಎಂದು ಹೇಳಲಾಗುತ್ತದೆ. ಮಹಾಭಾರತದ ಲೇಖಕರಾದ ವೇದವ್ಯಾಸರು ಬುದ್ಧಿಮತ್ತೆ, ಜ್ಞಾನದ ಪ್ರತೀಕವಾಗಿದ್ದಾರೆ. ಇವರು ಕೂಡ ಸಪ್ತ ಚಿರಂಜೀವಿಗಳಲ್ಲಿ ಒಬ್ಬರು.

ರಾಜಾ ಬಲಿಂದ್ರ : ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿ ಶ್ರೀ ವಿಷ್ಣುವಿನ ಭಕ್ತ. ರಾಕ್ಷಸ ವಂಶದವನಾದರೂ, ಉತ್ತಮ ಆಡಳಿತಗಾರ. ಈತ ಯಾಗವೊಂದನ್ನು ಕೈಗೊಂಡಾಗ, ಆ ಯಾಗ ಲೋಕಕ್ಕೆ ಒಳ್ಳೆಯದಲ್ಲವೆಂಬ ಸೂಚನೆ ಸಿಗುತ್ತದೆ. ಆಗ ವಿಷ್ಣು ವಾಮನಮೂರ್ತಿಯ ರೂಪ ಧರಿಸಿ, ಬಲೀಂದ್ರ ನಡೆಸುತ್ತಿದ್ದ ಯಾಗದಲ್ಲಿ ಭಾಗಿಯಾಗಿ, ತನ್ನ ಪಾದದ ಮೂರು ಪಟ್ಟು ಭೂಮಿ ತನಗೆ ದಾನವಾಗಿ ಬೇಕೆಂದು ಕೇಳುತ್ತಾನೆ.

ಬರೀ ಮೂರು ಪಟ್ಟಲ್ಲ ಕೊಟ್ಟರಾಯಿತು ಎಂದು ಬಲೀಂದ್ರ, ವಾಮನನಿಗೆ ದಾನ ನೀಡಲು ಒಪ್ಪುತ್ತಾನೆ. ವಾಮನ ಮೂರ್ತಿ ಆಕಾಶದೆತ್ತರದಷ್ಟು ಬೆಳೆದು, ಮೂರು ಪಾದಗಳಲ್ಲಿ ತ್ರಿಲೋಕಗಳನ್ನು ಆವರಿಸಿ, ಬಲೀಂದ್ರನ ಅಷ್ಟು ಸಾಾಮ್ರಾಜ್ಯವನ್ನೇ ಪಡೆದುಕೊಳ್ಳುತ್ತಾನೆ. ಮೂರನೇ ಹೆಜ್ಜೆ ಇಡಲು ಜಾಗವಿಲ್ಲದಾಗ, ಬಲೀಂದ್ರ ತನ್ನ ತಲೆಯ ಮೇಲೆ ಹೆಜ್ಜೆಯನ್ನಿಡಲು ಹೇಳುತ್ತಾನೆ. ಬಲೀಂದ್ರನ ಈ ಮಾತಿಗೆ ಮೆಚ್ಚಿ ಶ್ರೀ ವಿಷ್ಣು ಅಮರತ್ವದ ವರ ನೀಡುತ್ತಾನೆ.

ವಿಭಿಷಣ: ರಾವಣ ರಾಮನ ಪರಮಶತ್ರುವಾಗಿದ್ದ. ಶಿವನನ್ನು ಕುರಿತು ಪ್ರಾರ್ಥಿಸಿ, ವಾನರ ಮತ್ತು ಮನುಷ್ಯನನ್ನು ಬಿಟ್ಟು, ತನಗೆ ಯಾರಿಂದಲೂ ಸಾವು ಬರಬಾರದು ಎಂದು ಬೇಡಿಕೊಂಡಿದ್ದ. ಏಕೆಂದರೆ, ವಾನರರು ಮತ್ತು ಮನುಷ್ಯರು ತುಚ್ಛರು ಎಂದು ಆತ ಭಾವಿಸಿದ್ದ. ಹಾಗಾಗಿ ರಾಮನನ್ನು ಸಾಮಾನ್ಯನೆಂದು ತಿಳಿದಿದ್ದ. ಆದರೆ ವಿಭಿಷಣನಿಗೆ ರಾಮನ ಅಪಾರ ಶಕ್ತಿಯ ಬಗ್ಗೆ ಮನವರಿಕೆ ಇತ್ತು. ಹಾಗಾಗಿ ರಾವಣನ ನಾಭಿಗೆ ಬಾಣವಿಟ್ಟರೆ, ಆತನ ಸಾವು ಸಂಭವಿಸುತ್ತದೆ ಎಂದು ಸ್ವತಃ ವಿಭಿಷಣನೇ ರಾಮನಿಗೆ ಹೇಳಿದ್ದ. ವಿಭೀಷಣ ಇಂದಿಗೂ ಜೀವಂತವಾಗಿದ್ದು, ಲಂಕೆಯನ್ನು ಪ್ರಾಮಾಣಿಕವಾಗಿ ಕಾಯುತ್ತಿದ್ದಾನೆಂದು ಹೇಳಲಾಗುತ್ತದೆ.

- Advertisement -

Latest Posts

Don't Miss