Spiritual: ಇನ್ನು ಕೆಲವೋ ದಿನಗಳಲ್ಲಿ ಶಿವರಾತ್ರಿ ಬರುತ್ತಿದೆ. ನಾವು ವರ್ಷದ 364 ದಿನ ಹೇಗೆ ಕಳೆಯುತ್ತೇವೋ ಗೊತ್ತಿಲ್ಲ. ಆದರೆ ಅಷ್ಟು ದಿನಗಳಿಗೆ ಸಮವಾಗಿರುವ ಶಿವರಾತ್ರಿಯಂದು ಮಾತ್ರ ನಾವು ಶಿವನನ್ನು ನೆನೆದು, ಶಿವನಾಮಸ್ಮರಣೆ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಡಾ.ವಿಷ್ೞುದತ್ತ ಗುರೂಜಿ ಅವರು ಶಿವರಾತ್ರಿಯಂದು ನಾವು ಯಾವ ರೀತಿ ಶಿವನ ಪೂಜೆ ಮಾಡಬೇಕು ಎಂದು ವಿವರಿಸಿದ್ದಾರೆ.
ಗುರುಗಳು ಹೇಳಿರುವ 5 ಕೆಲಸಗಳು ಯಾವುದು ಎಂದರೆ, ಶಿವನಾಮಸ್ಮರಣೆ, ಉಪವಾಸ, ಜಾಗರಣೆ, ಅಭಿಶೇಕ, ಬಿಲ್ವಪತ್ರೆ ಸಮರ್ಪಣೆ. ಇವಿಷ್ಟನ್ನು ಮಾಡಿದರೆ, ಶಿವರಾತ್ರಿ ಆಚರಣೆ ಪೂರ್ಣವಾದಂತೆ. ಶಿವರಾತ್ರಿಯ ದಿನ ನಿಮ್ಮಿಂದ ಸಾಧ್ಯವಾದಷ್ಟು ಉಪವಾಸ ಮಾಡಬೇಕು. ಶಿವನ ಸ್ತೋತ್ರ, ಜಪ ಮಾಡಬೇಕು. ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ಶಿವನಿಗೆ ಬಿಲ್ವಪತ್ರೆ ಸಮರ್ಪಿಸಬೇಕು. ಕೊನೆಯದಾಗಿ ರಾತ್ರಿಯಿಡೀ ಶಿವರಾತ್ರಿ ಜಾಗರಣೆ ಮಾಡಬೇಕು.
ಹಾಗಾದ್ರೆ ಯಾಾವ ರೀತಿ ಅಭಿಷೇಕ, ನಾಮಸ್ಮರಣೆ, ಪೂಜೆ, ಬಿಲ್ವಾರ್ಪಣೆ, ಜಾಗರಣೆ ಮಾಡಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ ನೋಡಿ. ಪೂರ್ತಿ ಮಾಹಿತಿಗಾಗಿ ಈ ವೀಡಿಯೋ ನೋಡಿ.