Spiritual: ನೀವು ಸಣ್ಣ ವಯಸ್ಸಿಗೆ ತೀರಿಹೋದ ಕೆಲವರನ್ನು ನೋಡಿರುತ್ತೀರಿ. ಅದನ್ನು ಅಕಾಲ ಮೃತ್ಯು ಎನ್ನುತ್ತಾರೆ. ವಯಸ್ಸಲ್ಲದ ವಯಸ್ಸಿಗೆ ಸಾಯುವುದು, ಅಸಹಜ ಸಾವುಗಳೇ ಅಕಾಲ ಮೃತ್ಯು. ಹಾಗಾದ್ರೆ ಈ ಅಕಾಲ ಮೃತ್ಯು ಬರಲು ಕಾರಣವೇನು..? ಅಂತಾ ತಿಳಿಯೋಣ ಬನ್ನಿ..
ಸದಾ ಬೇರೆಯವರು ಬಳಸಿದ ವಸ್ತುವನ್ನೇ ನಾವು ಬಳಸುವುದು: ಬೇರೆಯವರು ಬಳಸಿದ ವಸ್ತುಗಳನ್ನು ಬಳಸಬಾರದು. ವಸ್ತ್ರ, ಚಪ್ಪಲಿ, ಆಭರಣ ಇದರಲೆಲ್ಲ ಅವರ ದೇಹದ ಅಂಶವಿರುತ್ತದೆ. ಅವರ ದೇಹದ ಬೆವರು, ಕೀಟಾಣು, ಸ್ಪರ್ಶ ಎಲ್ಲವೂ ಆ ಉಡುಪು, ಚಪ್ಪಲಿ, ಆಭರಣಗಳಿಗೆ ತಾಕಿರುತ್ತದೆ. ಅಂಥ ವಸ್ತುಗಳನ್ನು ಧರಿಸಿದರೆ, ಅವರ ದೇಹದ ಅಂಶವೆಲ್ಲ ನಮ್ಮ ದೇಹಕ್ಕೆ ಸೇರಿ, ಅನಾರೋಗ್ಯ ಉಂಟಾಗುತ್ತದೆ.
ಅಕ್ರಮ ಸಂಬಂಧ: ಮನೆಯಲ್ಲಿ ಪತ್ನಿ ಸರಿ ಇಲ್ಲ, ಪತಿ ಸರಿ ಇಲ್ಲವೆಂದು ಕಾರಣ ನೀಡಿ ಆಚೆ ಅಕ್ರಮ ಸಂಬಂಧ ಇರಿಸಿಕ“ಳ್ಳುವ ಜನ ಎಂದಿಗೂ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ. ತೋರಿಕೆಗೆ ತಾನು ಆರಾಮವಾಗಿದ್ದೇನೆ ಎಂದರೂ, ಆತ ಮುಂಚೆಗಿಂತಲೂ ಹೆಚ್ಚು ಅಸಮಾಧಾನವಾಗಿ, ಅನಾರೋಗ್ ಪೀಡಿತನಾಗಿಯೇ ಇರುತ್ತಾನೆ. ಮತ್ತು ಮೃತ್ಯುವಿಗೆ ಹತ್ತಿರವಾಗುತ್ತಾನೆ.
ಸೂರ್ಯಾಸ್ತದ ಸಮಯದಲ್ಲಿ ಮಾಡಬಾರದ ಕೆಲಸ ಮಾಡುವುದು: ಹಿಂದೂ ಧರ್ಮದ ಪ್ರಕಾರ ಸೂರ್ಯಾಸ್ತ ಎನ್ನುವುದು ಲಕ್ಷ್ಮೀ ಬರುವ ಸಮಯ. ಅಸ್ತು ದೇವತೆಗಳು ಅಸ್ತು ಅಸ್ತು ಎನ್ನುವ ಸಮಯ. ಹಾಗಾಗಿಯೇ ಈ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ, ಭಜನೆ ಮಾಡಬೇಕು, ದೇವರ ಧ್ಯಾನ ಮಾಡಬೇಕು ಎಂದು ಹೇಳೋದು.
ಆದರೆ ಈ ಸಮಯದಲ್ಲಿ ಕೆಲವರು ನಿದ್ರಿಸುವುದು, ಊಟ ಮಾಡುವುದು, ಲೈಂಗಿಕ ಕ್ರಿಯೆ ಮಾಡುವುದು, ಬಿಡುವಿಲ್ಲದೇ ಮನೆಗೆಲಸಗಳನ್ನೇ ಮಾಡುತ್ತ ಕೂರುತ್ತಾರೆ. ಈ ಸಮಯ ಮಾನಸಿಕ ವಿಶ್ರಾಂತಿಯ ಸಮಯವಾಗಿರುವ ಕಾರಣ ಈ ಸಮಯದಲ್ಲಿ ದೇವರ ಧ್ಯಾನ ಮಾಡಬೇಕು. ಆದರೆ ಇಂಥ ಕೆಲಸಗಳನ್ನು ಮಾಡುವುದರಿಂದ ನಮ್ಮ ಆರೋಗ್ಯ ಕ್ಷೀಣಸಿ, ಆಯಸ್ಸು ಕಡಿಮೆಯಾಗುತ್ತದೆ.
ಭಕ್ತಿ ಭಾವ ಇಲ್ಲದಿರುವುದು: ದೇವರಲ್ಲಿ ಯಾರು ನಿಜವಾದ ಭಕ್ತಿ ಮಾಡುತ್ತಾರೋ, ಅಂಥವರಿಗೆ ಪಾಪ ಪುಣ್ಯದ ಅರಿವಿರುತ್ತದೆ. ಯಾವುದಾದರೂ ಕೆಟ್ಟ ಕೆಲಸ ಮಾಡುವ ಮುನ್ನ, ಪಾಪದ ಅರಿವಾಗುತ್ತದೆ. ಅಂಥ ಕೆಲಸ ಮಾಡಿದರೆ, ದೇವರು ಕ್ಷಮಿಸಲಾರ ಎಂದು ತಿಳಿದಿರುತ್ತದೆ. ಆದರೆ ದೇವರ ಮೇಲೆ ಭಕ್ತಿ ಭಾವವಿಲ್ಲದ ನಾಸ್ತಿಕ ಸದಾಕಾಲ, ತಪ್ಪು ಕೆಲಸವನ್ನೇ ಮಾಡುತ್ತಾನೆ. ಏಕೆಂದರೆ, ಅವನಿಗೆ ಯಾವುದೇ ಕೆಲಸ ಮಾಡಲು ಭಯ ಎನ್ನುವುದು ಇರುವುದಿಲ್ಲ.
ಹಿರಿಯರ ಬಗ್ಗೆ ಗೌರವವಿಲ್ಲದಿರುವುದು: ಕಿರಿಯರಿಗೆ ಅಥವಾ ಹಿರಿಯರಿಗೆ ಬೇರೆಯವರ ಬಗ್ಗೆ ಸದಾ ಗೌರವವಿರಬೇಕು. ಕಿರಿಯರಿಗೆ ಹೇಗೆ ಹಿರಿಯರ ಮೇಲೆ ಪ್ರೀತಿ, ಗೌರವವಿರಬೇಕೋ, ಅದೇ ರೀತಿ ಹಿರಿಯರಿಗೂ ಕಿರಿಯರ ಬಗ್ಗೆ ಪ್ರೀತಿ, ಕಾಳಜಿ ಇರಬೇಕು. ಯಾರು ಇನ್ನ“ಬ್ಬರಿಗೆ ಪ್ರೀತಿ, ಗೌರವ, ಕಾಳಜಿ ತೋರುವುದಿಲ್ಲವೋ, ಅಂಥವರ ಮಾನಸಿಕ ನೆಮ್ಮದಿಯೇ ಹಾಳಾಗುತ್ತದೆ. ಮತ್ತು ಮಾನಸಿಕ ನೆಮ್ಮದಿ ಇಲ್ಲದ ಮನುಷ್ಯ ಹೆಚ್ಚು ಜೀವನ ನಡೆಸಲಾರ.
ಅಸೂಯೆ: ನಮ್ಮ ಜೀವನದಲ್ಲಿ ಅಸೂಯೆ ಅನ್ನುವ ಪದಕ್ಕೆ ಜಾಗವೇ ಇರಬಾರದು. ಏಕೆಂದರೆ ಬೇರೆಯವರ ಬಳಿ ಇರುವ ವಸ್ತು, ಸಂಬಂಧ ಅಥವಾ ಬೇರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಾವು ಅಸೂಯೆ ಪಟ್ಟರೆ, ಅದು ನಮ್ಮ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಆ ವಸ್ತು, ಸಂಬಂಧ, ವಿಷಯದ ಬಗ್ಗೆ ನಮಗೂ ಆಸೆ ಇದ್ದಲ್ಲಿ, ಅದನ್ನು ಪಡೆಯುವ, ಸರ್ವ ಪ್ರಯತ್ನವನ್ನು ನಾವು ಸರಿಯಾದ ರೀತಿಯಲ್ಲಿ ಮಾಡಬೇಕು.
ಆ ರೀತಿ ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡಿ, ಗಳಿಸಿದ ವಸ್ತು, ಸಂಬಂಧದಿಂದಲೇ ನಮಗೆ ನೆಮ್ಮದಿ ಸಿಗುತ್ತದೆ. ಅದನ್ನು ಬಿಟ್ಟು ಅಸೂಯೆ ಮಾಡುತ್ತ ಹೋದರೆ, ನಮ್ಮ ನೆಮ್ಮದಿ ಹಾಳಾಗಿ, ಅನಾರೋಗ್ಯಕ್ಕೀಡಾಗಿ ನಾವು ಸಾವು ಕಾಣಬೇಕಾಗುತ್ತದೆ.

