Spiritual: ದ್ವಾಪರ ಯುಗದಲ್ಲೇ ಶ್ರೀಕೃಷ್ಣ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆ ಎಂದು ಹೇಳಿದ್ದನಂತೆ. ಭಗವದ್ಗೀತೆಯಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಹಾಗಾದ್ರೆ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆಂದು ಶ್ರೀಕೃಷ್ಣ ಹೇಳಿದ್ದ.? ಅವನ ಮಾತು ಈಗೆಷ್ಟು ಸತ್ಯವಾಗಿದೆ ಅಂತಾ ತಿಳಿಯೋಣ ಬನ್ನಿ..
ಮಹಿಳೆಯರು ಮದುವೆಯಾಗುವಾಗ ಪುರುಷನ ಗುಣಕ್ಕಿಂತ ಶ್ರೀಮಂತಿಕೆಗೆ ಬೆಲೆ ನೀಡುತ್ತಾರೆ: ಈ ಮಾತಂತೂ ಅಕ್ಷರಶಃ ಸತ್ಯವಾಗಿದೆ. ಇಂದಿನ ಕಾಲದ ಕೆಲವು ಹೆಣ್ಣು ಮಕ್ಕಳು ವರನ ಗುಣಕ್ಕಿಂತ, ಹಣಕ್ಕೆ ಬೆಲೆ ನೀಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಮಾತ್ರ, ವರನ ಗುಣ ನೋಡುತ್ತಿದ್ದಾರೆ. ಅದೇ ರೀತಿ ಹಣ ನೋಡಿ ಮದುವೆಯಾದವರು, ಅದೇ ಹಣಕ್ಕಾಗಿ ವಿಚ್ಛೇದನದ ದಾರಿಯನ್ನೂ ಹಿಡಿದಿದ್ದಾರೆ.
ಪುರುಷ ಮಹಿಳೆಯನ್ನು ಕೀಳಾಗಿ ನೋಡುತ್ತಾನೆ: ಇಂದಿನ ಸೋಶಿಯಲ್ ಮೀಡಿಯಾ ನೋಡಿದರೇನೇ ನಮಗೆ ಈ ಮಾತಿನ ಅರ್ಥ ಅರಿವಾಗುತ್ತದೆ. ಹೆಣ್ಣು ಮಕ್ಕಳನ್ನು ತಮಗೆ ಬೇಕಾದ ರೀತಿಯಲ್ಲಿ ಟ್ರೋಲ್ ಮಾಡಿ, ಆಕೆ ಜೀವ ಕಳೆದುಕ~`ಳ್ಳುವ ಹಂತಕ್ಕೆ ಹೋಗುವ ತನಕವೂ ಆಕೆಯನ್ನು ಬಿಡುತ್ತಿಲ್ಲ. ಅಂಥ ಮನಸ್ಥಿತಿ ಇಂದಿನ ಕಾಲದ ಹಲವು ಪುರುಷರಲ್ಲಿದೆ.
ಪುರುಷರಿಗೆ ಮಹಿಳೆಯರು ಭೋಗದ ವಸ್ತುಗಳಾಗುತ್ತಾರೆ: ಇಂದಿನ ಕಾಲದ ಹಲವು ಫೀಲ್ಡ್‌ಗಳಲ್ಲಿ ಹೆಣ್ಣು ಮಕ್ಕಳು ಕಾಂಪ್ರಮೈಸ್ ಆದರೆ ಮಾತ್ರ ಕೆಲಸ ನೀಡಲಾಗುತ್ತಿದೆ. ಈ ಕಾರಣದಿಂದ ಅಂಥ ಫೀಲ್ಡ್‌ಗೆ ನಿಯತ್ತಿನಿಂದ ಹೋದ ಹೆಣ್ಣು ಮಕ್ಕಳಿಗೂ ಗೌರವವಿಲ್ಲದಂತಾಗಿದೆ. ಕೆಲವೆಡೆ ಕೆಲಸ ಅರಸಿ ಹೋಗುವ ಹೆಣ್ಣನ್ನು ಭೋಗದ ವಸ್ತುಗಳಂತೆ ನೋಡುತ್ತಿರುವುದು ಸುಳ್ಳಲ್ಲ.
ಸ್ತ್ರೀಗೇ ಸ್ತ್ರೀಯೇ ಶತ್ರುಗಳಾಗುತ್ತಾರೆ: ಇದು ಸಹ ಸತ್ಯ. ಇಂದಿನ ಕಾಲದ ಕೆಲ ಸ್ತ್ರೀಯರಿಗೆ, ಆಕೆಯೂ ತನ್ನ ಹಾಗೆ ಸ್ತ್ರೀ ಎಂದು ತಿಳಿದು ಆಕೆಗೆ ಸಹಾಯ ಮಾಡುವ ಮನಸ್ಥಿತಿ ಇಲ್ಲ. ಬದಲಾಗಿ, ಆಕೆ ತನಗಿಂತ ಕೀಳು, ತನಗಿಂತ ಕೆಳಹಂತದವಳು ಅನ್ನೋದನ್ನು ಪ್ರೂವ್ ಮಾಡಲು ಕೆಲ ಸ್ತ್ರೀಯರು ಯತ್ನಿಸುತ್ತಿದ್ದಾರೆ. 1 ಮನೆಯಲ್ಲಿಯೇ ಇಬ್ಬರು ಹೆಂಗಸರಿದ್ದರೆ, ಅವರ ಮಧ್ಯೆಯೇ ಮನುಷ್ಯತ್‌ವವಿಲ್ಲದ ಪೈಪೋಟಿ ಏರ್ಪಡುತ್ತಿದೆ.
ತಂದೆ ಮಗ ಎಂಬ ಸಂಬಂಧ ಅರ್ಥ ಕಳೆದುಕ“ಳ್ಳುತ್ತದೆ: ಇದು ಸಹ ಸತ್ಯವಾಗಿದೆ, ಸತ್ಯವಾಗುತ್ತಿದೆ. ತಂದೆ-ಮಕ್ಕಳ ಮಧ್ಯೆ ಬಾಂಧವ್ಯ ಕ್ಷೀಣಿಸುತ್ತ ಹೋಗುತ್ತಿದೆ. ಮಗನಿಗೆ ತಂದೆಯ ಮೇಲಿನ ಪ್ರೀತಿ, ಕಾಳಜಿ, ಗೌರವ ಕಡಿಮೆಯಾಗುತ್ತಿದೆ. ತನ್ನ ಜೀವನ ಮಾತ್ರ ಅವನಿಗೆ ಮುಖ್ಯವಾಗಿದೆ. ಇನ್ನು ಕೆಲವು ಕಡೆ ಆಸ್ತಿ, ಹಣಕ್ಕಾಗಿ ತಂದೆ-ಮಕ್ಕಳು ಜಗಳವಾಡಿ, ಆ ಜಗಳ ಹತ್ಯೆ ಮಾಡುವ ಹಂತಕ್ಕೆ ತಲುಪುತ್ತಿದೆ.

