Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಹಬ್ಬ ಬರಲಿದೆ. ಈ ಹಬ್ಬವನ್ನು ಯಾವ ರೀತಿ ಆಚರಿಸಬೇಕು..? ಇದರ ವಿಶೇಷತೆ ಏನು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ವಿವರಿಸಿದ್ದಾರೆ.
ಶಿವ ಅಗ್ನಿಕಾರಕ. ಹಾಗಾಗಿಯೇ ಶಿವರಾತ್ರಿ ಮುಗಿದ ಬಳಿಕ ಬೇಸಿಗೆ ಶುರುವಾಗಿ, ಬಿಸಿಲ ಧಗೆ ಹೆಚ್ಚಾಗುತ್ತದೆ. ಇಂಥ ಬಿಸಿಲ ಧಗೆ, ಬೇಸಿಗೆಯ ಬಿರು ಬಿಸಿಲಿನಲ್ಲೇ ಬರೀಗಾಲಿನಲ್ಲಿ ಎಷ್ಟೋ ಜನ, ಶಿವನ ಪುಣ್ಯಸ್ಥಾನಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಶಿವರಾತ್ರಿ ಸಮಯ ಬರುತ್ತಿದ್ದಂತೆ, ಶಿವನ ದೇವಸ್ಥಾನಕ್ಕೆ ಹೋಗಿ ತಲುಪುತ್ತಾರೆ.
ಶಿವರಾತ್ರಿಯನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಈ ಹಬ್ಬದ ನಿಯಮವೆಂದರೆ, ಉಪವಾಸ, ಶಿವ ನಾಮಸ್ಮರಣೆ, ಜಾಗರಣೆ, ಅಭಿಷೇಕ, ಬಿಲ್ವಾರ್ಪಣೆ. ಇವಿಷ್ಟು ಮಾಡಿದರೆ, ಶಿವರಾತ್ರಿ ಹಬ್ಬ ಸಂಪೂರ್ಣವೆಂದರ್ಥ. ಈ ಹಬ್ಬದ ಬಗ್ಗೆ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಅವರು ಇನ್ನಷ್ಟು ವಿವರಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.