Sunday, December 1, 2024

Latest Posts

Spiritual: ದೇವರಿಗೆ ಪ್ರದಕ್ಷಿಣೆ ಹಾಕುವುದು ಯಾಕೆ..? ಈ ಪದ್ಧತಿ ಇರುವುದಾದರೂ ಯಾಕೆ..?

- Advertisement -

Spiritual: ದೇವಸ್ಥಾನಕ್ಕೆ ಹೋದಾಗ, ನಾವು ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ. ಮನೆಯಲ್ಲಿ ಪೂಜೆಯಾದರೆ, ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತೇವೆ. ಹಾಗಾದರೆ, ಪ್ರದಕ್ಷಿಣೆ ಅನ್ನೋ ಪದ್ಧತಿ ಬರಲು ಕಾರಣವಾದ್ರೂ ಏನು..? ಪ್ರದಕ್ಷಿಣೆ ಏಕೆ ಹಾಕಬೇಕು ಅಂತಾ ತಿಳಿಯೋಣ ಬನ್ನಿ..

ಯಾವುದೇ ದೇವಸ್ಥಾನದಲ್ಲಿರುವ ದೇವರಿಗೆ, ದೇವರ ಕೋಣೆಯಲ್ಲಿರುವ ದೇವರಿಗೆ ಅಥವಾ ಪೂಜೆಯ ಸಂದರ್ಭದಲ್ಲಿ ಪೂಜಿಸಲ್ಪಡುವ ದೇವರ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ಮುನ್ನ, ಅದು ಕೇವಲ ವಿಗ್ರಹವಾಗಿರುತ್ತದೆ. ಆದರೆ ಮಂತ್ರಗಳನ್ನು ಹೇಳಿ, ಅದನ್ನು ಪ್ರಾಣ ಪ್ರತಿಷ್ಠೆ ಮಾಡಿದ ಬಳಿಕ, ಅದರಲ್ಲಿ ದೇವರ ಆಗಮನವಾಗುತ್ತದೆ. ಹಾಗಾಗಿಯೇ ದೇವರ ಪ್ರಾಣಪ್ರತಿಷ್ಠೆಯಾದ ಬಳಿಕ, ಅದಕ್ಕೆ ಬೇಕಾದ ರೀತಿ, ಪೂಜೆ, ನೈವೇದ್ಯ, ಅಭಿಷೇಕ ನಡೆಯುತ್ತದೆ.

ಉದಾಹರಣೆಗೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಾಗುವ ಮುನ್ನ ದೇವರ ಮೂರ್ತಿಯಲ್ಲಿ ಕಳೆ ಇರಲಿಲ್ಲ. ಇದನ್ನು ಆ ವಿಗ್ರಹ ಕೆತ್ತಿರುವ ಅರರುಣ್ ಯೋಗಿರಾಜ್ ಅವರೇ ಹೇಳಿದ್ದಾರೆ. ಆದರೆ ಪ್ರಾಣಪ್ರತಿಷ್ಠೆಯಾದ ಬಳಿಕ, ಆ ವಿಗ್ರಹಕ್ಕೆ ಕಳೆ ಬಂದಿತ್ತು. ಪ್ರಾಣಪ್ರತಿಷ್ಠೆಗೂ ಮುನ್ನ ದೇವರ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಪ್ರಾಣಪ್ರತಿಷ್ಠೆಯ ಬಳಿಕ, ಕಣ್ಣಿಗೆ ಕಟ್ಟಿರುವ ಪಟ್ಟಿ ತೆಗೆಯಲಾಗುತ್ತದೆ. ಈ ವೇಳೆ ಎದುರಿಗೆ ಕನ್ನಡಿ ಇರಿಸಲಾಗುತ್ತದೆ.

ಹೀಗೆ ದೇವರ ವಿಗ್ರಹದ ಮುಂದೆ ಇರಿಸಿದ ಕನ್ನಡಿ ತಂತಾನೆ ಒಡೆದು ಹೋಗುತ್ತದೆ. ಇದಕ್ಕೆ ಕಾರಣವೇ, ಆ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆಯಾಗಿ, ಆ ನಿರ್ಜೀವ ಮೂರ್ತಿಯಲ್ಲಿ ಶಕ್ತಿ ತುಂಬಿರುತ್ತದೆ. ಹೀಗೆ ಪ್ರಾಣಪ್ರತಿಷ್ಠೆಯಾಗಿ, ಶಕ್ತಿ ತುಂಬಿರುವ ದೇವರ ವಿಗ್ರಹವಿರುವ ಜಾಗದಲ್ಲಿ ನಾವು ಪ್ರದಕ್ಷಿಣೆ ಹಾಕುವುದರಿಂದ ನಮ್ಮ ದೇಹದಲ್ಲಿರುವ ಸಪ್ತ ಚಕ್ರಗಳೂ ಆಕ್ಟಿವೇಟ್ ಆಗುತ್ತದೆ. ಇದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.

- Advertisement -

Latest Posts

Don't Miss