Spiritual: ಮದುವೆ ಮುನ್ನಾದಿನ ಅಥವಾ ಎರಡು ದಿನಕ್ಕೂ ಮುನ್ನ ವಧು ವರರಿಗೆ ಅರಿಶಿನ ಹಚ್ಚಿ, ಅರಿಶಿನ ಶಾಸ್ತ್ರವೆಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಶಾಸ್ತ್ರವಾದ ಬಳಿಕ ವಧು- ವರ ಮನೆ ಬಿಟ್ಟು ಹೋಗುವಂತಿಲ್ಲ. ಈ ಕಾರ್ಯಕ್ರಮಕ್ಕೂ ಮುನ್ನವೇ ಇವರಿಬ್ಬರೂ ಹೊರಗಿನ ಕೆಲಸವನ್ನೆಲ್ಲ ಮುಗಿಸಿಬಿಡಬೇಕು. ಯಾಕಂದ್ರೆ ಅರಿಶಿನ ಶಾಸ್ತ್ರ ಮುಗಿದ ಬಳಿಕ ವಧು ವರನ ದೇಹ ಹಸಿಯಾಗಿರುತ್ತದೆ ಅಂತಾ ಹೇಳುತ್ತಾರೆ. ಅಂದ್ರೆ ನಕಾರಾತ್ಮಕ ಶಕ್ತಿಗಳು ಸುಲಭವಾಗಿ ಬಂದು ತಾಕುವಷ್ಟು ನಾಜೂಕಾಗಿರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಅರಿಶಿನ ಶಾಸ್ತ್ರ ಮುಗಿದ ಬಳಿಕ, ವಧು ವರರು ವಿವಾಹವಾಗುವ ತನಕ ಎಲ್ಲಿಯೂ ಹೋಗುವಂತಿಲ್ಲ. ಹಾಾಗಾದ್ರೆ ಈ ಅರಿಶಿನ ಶಾಸ್ತ್ರ ಮಾಡುವುದಾದರೂ ಏಕೆ ಅಂತಾ ತಿಳಿಯೋಣ ಬನ್ನಿ.
ಅರಿಶಿನ ಅಂದ್ರೆ, ಗುರುವಿನ ಬಣ್ಣ. ಅರಿಶಿನಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಅರಿಶಿನವೆಂದರೆ ಮುತ್ತೈದೆಯ ಸಂಕೇತ. ಅಲ್ಲದೇ, ಗುರುವಿನ ಆಶೀರ್ವಾದ ಬೇಕೆಂದರೆ ಹೇಗೆ ಹಳದಿ ಬಣ್ಣದ ಬಟ್ಟೆ ಧರಿಸಬೇಕೋ, ಅದೇ ರೀತಿ ವೈವಾಹಿಕ ಜೀವನದಲ್ಲಿ ನಮಗೆ ನೆಮ್ಮದಿ ಬೇಕು ಅಂದ್ರೆ, ಗುರುವಿನ ಆಶೀರ್ವಾದ ಬೇಕೇ ಬೇಕು. ಹಾಗಾಗಿಯೇ ಅರಿಶಿನ ಶಾಸ್ತ್ರ ಮಾಡಲಾಗುತ್ತದೆ. ಅರಿಶಿನ ಮೈಗಂಟಿದರೆ, ಗುರುವಿನ ಆಶೀರ್ವಾದ ಸಿಕ್ಕಂತೆ ಅನ್ನೋ ನಂಬಿಕೆ ಇದೆ.
ಇನ್ನು ವಿವಾಹವಾದ ಬಳಿಕ ಪತ್ನಿ ಮಾಡುವ ಕೆಲ ಕೆಲಸಗಳಲ್ಲಿ ಪತಿಯ ಗುರು ಬಲ ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ. ಹಾಗಾಗಿಯೇ ಹಿಂದೂ ಧರ್ಮದಲ್ಲಿರುವ ಹಲವು ನಿಯಮಗಳನ್ನು ತಪ್ಪದೇ ಅುಸರಿಸಬೇಕು ಅಂತಾ ಹಿರಿಯರು ಹೇಳುವುದು.