Spiritual: ಇದೇ ತಿಂಗಳ 29ನೇ ತಾರೀಕು ಅಂದ್ರೆ ನಾಳೆ ಗುರು ಪೂರ್ಣಿಮೆ ಸಂಭ್ರಮ. ಹಾಗಾಗಿ ಇಂದು ವೆಂಕಟರಾಮ ಶಾಸ್ತ್ರಿ ಅವರು ಗುರು ಪೂರ್ಣಿಮೆಯ ಮಹತ್ವ ಹೇಳಲಿದ್ದಾರೆ.
ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಅಂತಲೂ ಕರೆಯುತ್ತಾರೆ. ಏಕೆಂದರೆ ಇಂದು ವ್ಯಾಸ ಮುನಿಗಳು ಜನಿಸಿದ ದಿನ. ಹಾಗಾಗಿ ಇದನ್ನು ವ್ಯಾಸ ಪೂರ್ಣಿಮೆ ಅಂತಲೂ ಕರೆಯುತ್ತಾರೆ. ಗುರು ಎಂಬುದರ ಅರ್ಥವೇನೆಂದರೆ ಅಂಧಕಾರದಿಂದ ನಮ್ಮನ್ನು ಮುಕ್ತಿ ಮಾಡುವವನೇ ಗುರು. ಅಂಧಕಾರ ಎಂದರೆ ಅಜ್ಞಾನ. ಈ ಅಜ್ಞಾನವೆಂಬ ಅಂಧಕಾರದಿಂದ ಆಚೆ ತಂದು ನಮಗೆ ಜ್ಞಾನವೆಂಬ ಬೆಳಕು ನೀಡುವವರೇ ಗುರು.
ದೇವರು ಮತ್ತು ಗುರುಗಳು ಬಂದಾಗ ಪ್ರಥಮವಾಗಿ ಯಾರಿಗೆ ನಮಸ್ಕಾರ ಮಾಡಬೇಕು ಎಂದರೆ, ಗುರುವಿಗೇ ನಮಸ್ಕಾರ ಮಾಡಬೇಕಂತೆ. ಏಕೆಂದರೆ, ಹರ ಮುನಿದರೂ, ಗುರು ಕಾಪಾಡುತ್ತಾನಂತೆ. ಅಲ್ಲದೇ ಗುರುವಿನ ಪ್ರೀತಿ ಎಷ್ಟು ಹಿತವೋ, ಗುರುವಿನ ಆಗ್ರಹ ಅಷ್ಟೇ ಅಪಾಯ. ಹೀಗಾಗಿ ಕರ್ಣ ಗುರುವಿನ ಬಳಿ ಸುಳ್ಳು ಹೇಳಿ ವಿದ್ಯೆ ಕಲಿತ ಬಳಿಕ ಏನಾಗುತ್ತದೆ ಅನ್ನೋದೇ ಇದಕ್ಕೆ ಸ್ಪಷ್ಟ ಉದಾಹರಣೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




