Monday, April 14, 2025

Latest Posts

Sports News: ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕ್ರಿಕೇಟಿಗ ರವೀಂದ್ರ ಜಡೇಜಾ

- Advertisement -

Cricket News: ವರ್ಲ್ಡ್‌ಕಪ್‌ನಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಬಳಿಕ ಕ್ರಿಕೇಟಿಗ ರವೀಂದ್ರ ಜಡೇಜಾ ಮತ್ತು ಕೊಹ್ಲಿ ವರ್ಲ್ಡ್ ಕಪ್ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಜಡ್ಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿಜೆಪಿ ಸದಸ್ಯತ್ವ ಸ್ವೀಕರಿಸಿರುವ ರವೀಂದ್ರ ಜಡೇಜಾ, ರಾಜಕಾರಣಕ್ಕೆ ಬಂದಿದ್ದಾರೆ. ಇವರ ಪತ್ನಿ ಅದಾಗಲೇ ಬಿಜೆಪಿ ಪಕ್ಷದಲ್ಲಿದ್ದು, ಜಾಮ್‌ನಗರದಲ್ಲಿ ಶಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲ ತಿಂಗಳ ಹಿಂದಷ್ಟೇ, ಜಡೇಜಾ ತಂದೆ, ಜಡೇಜಾ ವಿರುದ್ಧ ಆರೋಪ ಮಾಡಿದ್ದು, ಮಗ ತಮ್ಮೊಂದಿಗಿಲ್ಲ, ಪತ್ನಿಯ ಮಾತು ಕೇಳಿ ತಮ್ಮನ್ನು ದೂರ ಮಾಡಿದ್ದಾನೆ ಎಂದು ಆರೋಪಿಸಿದ್ದರು.

ಅದಾದ ಬಳಿಕ ಈ ಆರೋಪಕ್ಕೆ ಉತ್ತರ ಕೊಟ್ಟಿದ್ದ ಜಡೇಜಾ, ನಾನು ಪತ್ನಿ ಮಾತು ಕೇಳಿ ತಂದೆ ತಾಯಿಯನ್ನು ದೂರ ಮಾಡಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಸಪೋರ್ಟ್ ಮಾಡಿ, ತಂಗಿಯ ಬೆಂಬಲಕ್ಕೆ ನಿಂತ ಅಪ್ಪ ಅಮ್ಮ ನಮ್ಮಿಬ್ಬರನ್ನೂ ದೂರ ಮಾಡಿದ್ದಾರೆಂದು ಜಡೇಜಾ ಮತ್ತು ಅವರ ಪತ್ನಿ ಆರೋಪಿಸಿದ್ದರು.

- Advertisement -

Latest Posts

Don't Miss