Sports News: ಭಾರತೀಯ ಕ್ರಿಕೇಟಿಗ ರಿಂಕು ಸಿಂಗ್, ಇನ್ನು ಕೆಲ ತಿಂಗಳಲ್ಲೇ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗಲಿದ್ದಾರೆ. ಹೀಗಾಗಿ ಅವರ ಆಸೆಯಂತೆ ರಿಂಕು ಸಿಂಗ್ ಐಷಾರಾಮಿ ಮನೆಯೊಂದರನ್ನು ಖರೀದಿಸಿದ್ದಾರೆ.
ರಿಂಕು ಮತ್ತು ಪ್ರಿಯಾ ಒಂದು ವರ್‌ಷದಿಂದ ಪ್ರೀತಿಸಿ, ಮನೆಯಲ್ಲಿ ಒಪ್ಪಿಸಿದ್ದಾರೆ. ಇನ್ನು ಕೆಲ ತಿಂಗಳಿಲ್ಲೇ ಇವರಿಬ್ಬರ ಮದುವೆ ನಡೆಯಲಿದೆ. ಹೀಗಾಗಿ ಮುಂದೆ ಸಂಸಾರ ನಡೆಸಲು, ಅಲಿಘಡದಲ್ಲಿ ಮನೆ ಖರೀದಿಸಿದ್ದಾರೆ. ಈ ಮನೆಯ ಬೆಲೆ 3.5 ಕೋಟಿ ಇದೆ. ಈ ಮನೆ ಖರೀದಿಸಿ, ರಿಂಕು ಅವರ ಕುಟುಂಬ ಅಲ್ಲಿಗೆ ಶಿಫ್ಟ್ ಆಗಿದೆ. ಈ ಮನೆಯನ್ನು ಪ್ರಿಯಾ ಅವರೇ ಸೆಲೆಕ್ಟ್ ಮಾಡಿದ್ದಾರಂತೆ.
ಮನೆ ಖರೀದಿ ಬಗ್ಗೆ ರಿಂಕು ಸಿಂಗ್ ಕನ್‌ಫ್ಯೂಸ್ ಆಗಿದ್ದ ಕಾರಣ, ಪ್ರಿಯಾ ಅವರೇ ಈ ಮನೆಯನ್ನು ಖರೀದಿಸಲು ಸಲಹೆ ಕೊಟ್ಟಿದ್ದಾರೆ. ಅಲ್ಲದೇ ಪ್ರಿಯಾ ಅವರು ಹೇಳಿದಂತೆ, ಮನೆಯ ಒಳಾಂಗಣವನ್ನು ಬದಲಿಸಲಾಗಿದೆ. ರಿಂಕು ಮತ್ತು ಪ್ರಿಯಾ ಎಂಗೇಜ್‌ಮೆಂಟ್ ಡೇಟ್ ಕೂಡ ಫಿಕ್ಸ್ ಆಗಿದ್ದು, ಲಕ್ನೋದಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ.