Sports News: ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ನಮನ್ ಓಜಾ ತಂದೆ ವಿನಯ್ ಓಜಾ, ಬ್ಯಾಂಕ್ ಹಣ ದುರುಪಯೋಗಪಡಿಸಿಕೊಂಡ ಕೇಸ್ ಅಡಿಯಲ್ಲಿ, ಶಿಕ್ಷೆ ಪ್ರಕಟಗೊಳಿಸಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಒಂದು ಬ್ರ್ಯಾಂಚ್ ಮಧ್ಯಪ್ರದೇಶದ ಜೋಲಖೇಡ್ ಎಂಬ ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಬ್ಯಾಂಕ್‌ನಲ್ಲಿ ವಿನಯ್ ಓಜಾ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2013ರಲ್ಲಿ ವಿನಯ್ ಓಜಾ ಸೇರಿ 6 ಜನರ ವಿರುದ್ಧ 1ವರೆ ಕೋಟಿ ವಂಚನೆ ಮಾಡಿದ್ದಾರೆಂದು ಆರೋಪಿಸಿ, ದೂರು ದಾಖಲಿಸಲಾಗಿತ್ತು.
11 ವರ್ಷಗಳ ಕಾಲ ವಿಚಾರಣೆ ನಡೆಸಿ, ಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಕೇಸ್‌ನ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಅವರಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 80 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.




