Hubballi News: ಹುಬ್ಬಳ್ಳಿ: ಇಂದು ರೊಟ್ಟಿಗವಾಡ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಡೊಳ್ಳಿನ ಮೆರವಣಿಗೆ ಮೂಲಕ ಶ್ರೀ ರಾಮೋತ್ಸವವನ್ನು ಆಚರಿಸಲಾಯಿತು.
ಶ್ರೀರಾಮ ಭಜನೆಯನ್ನು ದ್ಯಾಮಣ್ಣ ಮಡಿವಾಳರ, ವರುಣ ಮಂಜುನಾಥ್ ಮಡಿವಾಳರ, ರೇವಪ್ಪ ಅಂಗಡಿ, ಗಂಗಾಧರ ಕಭ್ಭೇರಳ್ಳಿ, ನಾರಾಯಣ್ ವೈಕುಂಟಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಹನುಮಾನ್ ಚಾಲೀಸ್ ಪಠಣವನ್ನು ಶ್ರೀ ಗಜಾನನ ಟ್ಯೂಷನ್ ಕ್ಲಾಸ್ ಅವರು ನೆರವೇರಿಸಿದರು. ಮಾರುತಿ ದೇವಸ್ಥಾನದ ಸೇವಾ ಸಮಿತಿಯಿಂದ ಪ್ರಸಾದ ಸೇವೆ ನಡೆಯಿತು.
ರಾಮೋತ್ಸವದಲ್ಲಿ ನಿಂಗಪ್ಪ ಗುಡ್ಡದ, ಮಲ್ಲಿಕಾರ್ಜುನ ಕಬ್ಬನೂರ, ಶಿವಪ್ಪ ಕಲಬಾರ, ದೇವಿಂದ್ರಪ್ಪ ಸಣ್ಣಪ್ಪನವರ, ಬಸಪ್ಪ ಮಡಿವಾಳರ, ಬಸಪ್ಪ ರೋಣದ, ಅಡಿವೆಪ್ಪ ಭೂತರೆಡ್ಡಿ, ಮಂಜುನಾಥ್ ಕಮ್ಮಾರ, ಗಂಗಾಧರ್ ಕಬ್ಬೆರಳ್ಳಿ, ರೇವಪ್ಪ ಅಂಗಡಿ, ಮಂಜುನಾಥ್ ಮಡಿವಾಳರ, ದ್ಯಾಮಣ್ಣ ಮಡಿವಾಳ, ವರುಣ ನಾರಾಯಣ ವೈಕುಂಟಿ, ಕಲ್ಲಪ್ಪ ಪಟೇದ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’