Thursday, July 25, 2024

Latest Posts

ಧಾರವಾಡದ ಬ್ಯಾಲ್ಯಾಳ ಗ್ರಾಮದಲ್ಲಿ ಅರ್ಥ ಪೂರ್ಣವಾಗಿ ನಡೆದ ಶ್ರೀರಾಮೋತ್ಸವ

- Advertisement -

Hubballi News: ಐತಿಹಾಸಿಕ ಅಯೋಧ್ಯಯಲ್ಲಿ ಇಂದು ಶ್ರೀ ರಾಮನ ಬಾಲಾರಾಮನ ಮೂರ್ತಿ ಪ್ರತಿಷ್ಠಾನ ಹಿನ್ನಲೆಯಲ್ಲಿ, ಧಾರವಾಡದ ಗ್ರಾಮೀಣ ಭಾಗದಲ್ಲಿಯೂ ಸಂಭ್ರಮ ಸಡಗರ ಮನೆ ಮಾಡಿತ್ತು.

ಧಾರವಾಡದ ಬ್ಯಾಲ್ಯಾಳ ಗ್ರಾಮದ ಗ್ರಾಮಸ್ಥರೆಲ್ಲರೂ ಮಹಿಳೆಯರು, ಮಕ್ಕಳು ಸೇರಿದಂತೆ ಗುರು ಹಿರಿಯರು ಒಟ್ಟುಗೂಡಿ ಶ್ರೀರಾಮೋತ್ಸವ ಮಾಡಿದರು. ಗ್ರಾಮದ ಶ್ರೀ ರಾಮನ ಬಂಟ ಅಂಜನೇಯ ದೇವಸ್ಥಾನದಲ್ಲಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಗಣಪತಿ ಯುವಕ ಮಂಡಳಿ ಹಾಗೂ ಶ್ರೀ ಅಂಜನೇಯ ದೇವಸ್ಥಾನ ಮಂಡಳಿಯ ಸದಸ್ಯರ ನೇತೃತ್ವದಲ್ಲಿ ಗ್ರಾಮದಲ್ಲಿ ಶ್ರೀರಾಮ ಮತ್ತು ಶ್ರೀ ಅಂಜನೇಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ಮನೆಗೆ ಬಾಗಿಲಿಗೆ ಬರುತ್ತಿದಂತೆ,‌ಮಹಿಳೆಯರು ಅಂಗಳವನ್ನು ಸ್ವಚ್ಚಗೊಳ್ಳಿ ಶ್ರೀರಾಮೋತ್ಸ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ಸ್ವಾಗತಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.‌ ಯುವಕರು ಚಿಕ್ಕ ಮಕ್ಕಳು, ಡಿಜೆ ಹಾಡಿಗೆ ಹೆಜ್ಜೆ ಹಾಕಿ, ಮುಗಿಲ್ಲೆತ್ತರಕ್ಕೆ ಪಟಾಕಿ ಸಿಡಿ‌ಸಿ ಸಂಭ್ರಮಿಸಿ. ಜೈ ಶ್ರೀ ರಾಮ ಘೋಷಣೆ ಕೂಗಿ ಶ್ರೀರಾಮೋತ್ಸ ಮಾಡಿ ದೇವರ ಕೃಪೆಗೆ ಪಾತ್ರರಾದರು.

ಅಮೆರಿಕದ ಚಿಕಾಗೋದಲ್ಲಿ ಗುಂಡಿನ ದಾಳಿ: 8 ಮಂದಿ ಸಾವು

ಕಾಂಗ್ರೆಸ್‌ನವರು ಏನೇನೋ ಕುಡಿದು ಹೇಗಿದ್ದಾರೆಂದು ಆಶ್ಚರ್ಯವಾಗಿದೆ: ಬೆಲ್ಲದ್ ವ್ಯಂಗ್ಯ

https://karnatakatv.net/dont-become-electoral-hindu-siddaramaiah-basanagowda-patil-yatnal/ ‌

 

- Advertisement -

Latest Posts

Don't Miss