- Advertisement -
ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಅತಿಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನೇ ಹಿಂದಿಕ್ಕಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಎಸ್‌ಇಎಮ್ ರಶ್ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಫೇಸ್ ಬುಕ್ ನಲ್ಲಿ 4.3 ಕೋಟಿ, ಟ್ವಿಟ್ಟರ್ ನಲ್ಲಿ 4.7ಕೋಟಿ ಹಾಗೂ ಇನ್ ಸ್ಚಾಗ್ರಾಂ ನಲ್ಲಿ 2 ಕೋಟಿ ಫಾಲೋವರ್ಸ್ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಒಟ್ಟು 11 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಟ್ರಂಪ್ ಗೆ ಒಟ್ಟು 9.6 ಕೋಟಿ ಫಾಲೋವರ್ಸ್ ಇದ್ದಾರೆ. ಅಂದಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ ಹೊಂದಿರೋ ಕೀರ್ತಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರದ್ದು. ಒಬಾಮಾಗೆ ಒಟ್ಟು 18.2ಕೋಟಿ ಫಾಲೋವರ್ಸ್ ಇದ್ದಾರೆ.
- Advertisement -