Thursday, January 30, 2025

Latest Posts

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ: ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು..?

- Advertisement -

Uttara Pradesh News: ಉತ್ತರಪ್ರದೇಶದ ಅಲಹಾಬಾದ್‌ನ ದೇವಭೂಮಿ ಪ್ರಯಾಗ್‌ರಾಜ್‌ನಲ್ಲಿ ಕಳೆದ 15 ದಿನಗಳಿಂದ ಮಹಾ ಕುಂಭ ಮೇಳ ನಡೆಯುತ್ತಿದ್ದು, ಕೋಟಿ ಕೋಟಿ ಭಕ್ತರು ಕುಂಭ ಮೇಳಕ್ಕೆ ಬರುತ್ತಿದ್ದಾರೆ. ಅದರಲ್ಲೂ ಇಂದು ಮೌನಿ ಅಮಾವಾಸ್ಯೆ ಇರುವ ಕಾರಣಕ್ಕೆ, ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ.

ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದು, ಗಾಯಾಗಳುಗಳನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಇದರಲ್ಲಿ 8ರಿಂದ 10 ಜನ ಮೃತ ಪಟ್ಟಿದ್ದಾರೆನ್ನಲಾಗಿದೆ. ಇಂದು 10 ಕೋಟಿಗೂ ಹೆಚ್ಚು ಜನ ಅಮೃತಸ್ನಾನಕ್ಕಾಗಿ ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದು, ಇಂದಿನ ಪುಣ್ಯ ಸ್ನಾನ ಮಾಡಿದ್ದಲ್ಲಿ, ಜೀವನದಲ್ಲಿ ಮೋಕ್ಷ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಜನ ಇಂದು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಮಹಾಕುಂಭ ಮೇಳಕ್ಕೆ ಬರುತ್ತಿದ್ದಾರೆ.

ಜನ ಜಂಗುಳಿ ಹೆಚ್ಚಾಗಿರುವ ಕಾರಣ, ಹಲವು ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳಕ್ಕೆ 12ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಬಂದು, ಗಾಯಾಳುಗಳನ್ನು ಮತ್ತು 30ಕ್ಕೂ ಹೆಚ್ಚು ಮಹಿಳೆಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದೆ. ಪುೊಲೀಸರು ಕೂಡ ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಇನ್ನು ಘಟನೆ ಸಂಬಂಧ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಭೆ ಕರೆದಿದ್ದು, ಘಟನೆ ನಿಯಂತ್ರಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿದ್ದಾರೆ. ಅಲ್ಲದೇ ಭಕ್ತರಲ್ಲಿ ಮನವಿ ಮಾಡಿದ್ದು, ತ್ರಿವೇಣಿ ಸಂಗಮಕ್ಕೆ ಬಂದು ಸ್ನಾನ ಮಾಡುವ ಪ್ರಯತ್ನ ಬೇಡ. ಎಲ್ಲೆಡೆ ಸ್ನಾನದ ವ್ಯವಸ್ಥೆ ಇದೆ. ನೀವು ಯಾವ ಸ್ಥಳದಲ್ಲಿ ನದಿಯ ದಡದಲ್ಲಿದ್ದೀರೋ, ಅಲ್ಲೇ ಸ್ನಾನ ಮಾಡುವ ವ್ಯವಸ್ಥೆ ಇದೆ. ಅಲ್ಲೇ ಅಮೃತ ಸ್ನಾನ ಮಾಡಿ. ಎಲ್ಲರೂ ತ್ರಿವೇಣಿ ಸಂಗಮಕ್ಕೆ ಹೋದರೆ, ಇನ್ನಷ್ಟು ಸಾವು ನೋವು ಸಂಭವಿಸಬಹುದು. ಹಾಗಾಗಿ ಇರುವ ಸ್ಥಳದಿಂದಲೇ ಅಮೃತ ಸ್ನಾನ ಮಾಡಲು ಪ್ರಯತ್ನಿಸಿ ಎಂದು ಕರೆ ನೀಡಿದ್ದಾರೆ.

- Advertisement -

Latest Posts

Don't Miss