Monday, June 16, 2025

Latest Posts

ಕಾಲ್ತುಳಿತ ದುರಂತ, ಮ್ಯಾಜಿಸ್ಟ್ರೇಟ್ ತನಿಖೆ : ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ: ಸಿಎಂ ಘೋಷಣೆ

- Advertisement -

Political News: ಅನಿರೀಕ್ಷಿತ ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ನಡೆದಿದೆ. ಆದರೆ ಕ್ರಿಕೆಟ್ ಅಸೋಸಿಯೇಷನ್ ಹಾಗೂ ನಾವೂ ಕೂಡ ಈ ಘಟನೆ ನಿರೀಕ್ಷೆ ಮಾಡಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವಿದೆ. ಆದರೆ 2 ರಿಂದ 3 ಲಕ್ಷ ಜನರು ಸೇರಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೂ ಘಟನೆಯ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ನಮಗೆ ಮಾಹಿತಿ ಬಂತು, ಹೀಗಾಗಿ ಯಾರೂ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರಲಿಲ್ಲ. ಹೆಚ್ಚಾಗಿ ಯುವಕರು, ಯುವತಿಯರು ಮೃತರಾಗಿದ್ದಾರೆ. ಮೃತ ಕುಟುಂಬಗಳಿಗೆ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲು ಈಗಾಗಲೇ ಸೂಚಿಸಿದ್ದೇನೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 33 ಜನರು ಗಾಯಾಳುಗಳಾಗಿದ್ದಾರೆ. ಕೆಲವರು ಸಣ್ಣ ಪುಟ್ಟ ಗಾಯಾಳುಗಳಾಗಿದ್ದಾರೆ. ಒಟ್ಟು 47 ಜನರು ಇದರಲ್ಲಿ ಸಿಲುಕಿದ್ದಾರೆ. ವೈದ್ಯರ ಮಾಹಿತಿಯ ಪ್ರಕಾರ ಗಾಯಾಳು ಗಳಿಗೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಗಾಯಾಳುಗಳಿಗೆ ಎಲ್ಲ ವ್ಯವಸ್ಥೆಗಳನ್ನು ಸರ್ಕಾರವೇ ಮಾಡಲಿದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ‌ಸರ್ಕಾರ ಪ್ರಾರ್ಥನೆ ಸಲ್ಲಿಸುತ್ತದೆ. ಮೃತರಲ್ಲಿ ಕೆಲವರು ವಿದ್ಯಾರ್ಥಿಗಳೂ ಇದ್ದಾರೆ. ಅವರ ಪೋಷಕರಿಗೂ ಸಾವಿನ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಷಾದಿಸಿದ್ದಾರೆ.

ಈ ಘಟನೆ ಕುರಿತು ಜಿಲ್ಲಾಧಿಕಾರಿಗಳಿಂದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಇದೊಂದು ಅನಿರೀಕ್ಷಿತವಾಗಿ ಜನರು ಸೇರಿದ್ದರು ಎಂದು ತಿಳಿಸಿದ್ದಾರೆ.

ಇದರಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಭದ್ರತಾ ವೈಫಲ್ಯ ಇರಲಿ ಏನಾದರಾಗಲಿ ಅದರ ಬಗ್ಗೆ ಜಿಲ್ಲಾಧಿಕಾರಿಗಳಿಂದ 15 ದಿನಗಳಲ್ಲಿ ತನಿಖೆ ಮಾಡಿಸುತ್ತೇವೆ. ಈ ಘಟನೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ದುರಂತ ನಡೆಯಬಾರದಿತ್ತು‌, ಇದಕ್ಕೆ ನಾವು ದುಃಖಿಸುತ್ತೇವೆ. ನಾವು ಕೇವಲ ಭದ್ರತೆಯನ್ನು ಒದಗಿಸಿದ್ದೇವೆ. ಕ್ರಿಕೆಟ್ ಅಸೋಸಿಯೇಷನ್ ದವರು ಕಾರ್ಯಕ್ರಮ ಮಾಡಿದ್ದಾರೆ. ಸರ್ಕಾರ ಗಾಯಾಳುಗಳು, ಮೃತರ ಕುಟುಂಬಸ್ಥರ ಜೊತೆಗಿದೆ ಎಂದು ಅವರು ಹೇಳಿದ್ದಾರೆ.

- Advertisement -

Latest Posts

Don't Miss