Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೆಹಲಿಯಲ್ಲಿ ಬಿಜೆಪಿ ಆಡಳಿತ ಶುರುವಾಗುತ್ತಿದೆ. 27 ವರ್ಷದ ನಂತರ ದೆಹಲಿಯಲ್ಲಿ ಬಿಜೆಪಿ ಆಡಳಿತ ಆರಂಭವಾಗುತ್ತಿದೆ. ರೇಖಾ ಗುಪ್ತಾ ಅವರು ವಿಚಾರ ಪರಿವಾರದಲ್ಲಿ ಹಲವು ವರ್ಷಗಳಕಾಲ ಸೇವೆ ಸಲ್ಲಿಸಿದ್ದಾರೆ. ಈಗ ಸಿಎಂ ಆಗಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ.
ಮುಡಾ ಪ್ರಕರಣದ ಲೋಕಾಯುಕ್ತ ಕ್ಲೀನ್ ಚಿಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕಾಯುಕ್ತದಲ್ಲಿ ಅಧಿಕಾರಿಗಳನ್ನ ಪೋಸ್ಟಿಂಗ್ ಮಾಡುವುದು ಸಿಎಂ ಕೈಯಲ್ಲೇ ಇರುತ್ತದೆ. ಇದನ್ನ ಲೋಕಾಯುಕ್ತ ಪೊಲೀಸರಿಂದ ತನಿಖೆ ಮಾಡಿದ್ರೆ ಇದನ್ನ ಮುಚ್ಚಿ ಹಾಕ್ತಾರೆ ಅಂತ ಈ ಹೇಳಿದ್ದೆ. ಇಂದು ಅದೇ ಪರಿಸ್ಥಿತಿ ಆಗಿದೆ. ರಾತ್ರೋ ರಾತ್ರಿ ಅಧಿಕಾರಿಗಳನ್ನ ಯಾರೆಲ್ಲ ಭೇಟಿಯಾಗಿ ಬಂದಿದ್ದಾರೆ ಅನ್ನೋದು ಎಲ್ಲವೂ ಗೊತ್ತಿದೆ. ಇದೇನೂ ಆಶ್ಚರ್ಯಕರ ಸಂಗತಿ ಏನೂ ಅಲ್ಲ. ನಿಷ್ಪಕ್ಷಪಾತ ತನಿಖೆಯಾಗಬೇಕಾದ್ರೆ ನೇರವಾಗಿ ಸಿಬಿಐ ತನುಖೆ ಮಾಡಿಸಬೇಕು. ಆವಾಗ ಸತ್ಯಾಸತ್ಯತೆ ಗೊತ್ತಾಗಲಿದೆ.
ಪಡಿತರ ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರದವರಿಗೆ ಈಗ ಜ್ಞಾನೋದಯವಾಗಿದೆ. ನಾವು ಅಕ್ಕಿ ಕೊಡುತ್ತೇವೆ ಅಂದಾಗ ಇವ್ರು ತಗೋಳೋಕೆ ಮುಂದೆ ಬರಲಿಲ್ಲ. ಈಗ ಈ ಬಗ್ಗೆ ಚರ್ಚೆ ಗಂಭೀರವಾದಾಗ ಸಿಎಂ ಅವರಿಗೆ ಬುದ್ದಿ ಬಂದಿದೆ. ಇದೀಗ ಅನಿವಾರ್ಯವಾಗಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ ಎಂದು ಜೋಶಿ ಹೇಳಿದರು.
ಗಂಗಾನದಿ ನೀರಿನ ವಿಚಾರವಾಗಿ ಎನ್ ಜಿಟಿ ವರದಿ ಹಿನ್ನೆಲೆ ಪ್ರತಿಕ್ರಿಯಿಸಿರುವ ಜೋಶಿ, ನಾನೂ ಕೂಎ ಅಲ್ಲಿ ಸ್ನಾನ ಮಾಡಿ ಬಂದಿದ್ದೇನೆ. ಎನ್ ಜಿಟಿ ಯಾಕೆ ವರದಿ ಕೊಟ್ಟಿದೆಯೋ ಗೊತ್ತಿಲ್ಲ. ಅಲ್ಲಿ ಏನಾದ್ರೂ ಸಮಸ್ಯೆ ಇದ್ದಲ್ಲಿ ಸಿಎಂ ಯೋಗಿಯವರು ಗಮನಹರಿಸುತ್ತಾರೆ ಎಂದು ಜೋಶಿ ಹೇಳಿದ್ದಾರೆ.