Panchamasali ಸಮಾಜಕ್ಕೆ 2ಎ ಮೀಸಲಾತಿಗಾಗಿ ವಚನಾನಂದ ಸ್ವಾಮೀಜಿ ಹೇಳಿಕೆ..!





ದಾವಣಗೆರೆ: ಪಂಚಮಸಾಲಿ(Panchamasali) ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ತುಸು ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹರಿಹರದಲ್ಲಿ ವಚನಾನಂದ ಸ್ವಾಮೀಜಿ(vachanananda-swamiji) ಹೇಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು  ತಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಸರ್ಕಾರ ಒಂದು ವೇಳೆ ತರಾತುರಿಯಲ್ಲಿ ಮೀಸಲಾತಿ ಘೋಷಿಸಿದರೆ ಸಮಸ್ಯೆಯಾಗಬಹುದು. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ ಊರ್ಜಿತವಾಗುವಂತಿರಬೇಕು. ಹೀಗಾಗಿ, ವಿಳಂಬವಾದರೂ ಪರವಾಗಿಲ್ಲ. ಸಮರ್ಪಕ ರೀತಿಯಲ್ಲಿ ಮೀಸಲಾತಿ ದೊರೆಯಬೇಕು ಎಂದು ಅವರು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಒದಗಿಸಲು ಸರ್ಕಾರಕ್ಕೆ ನಾವು ಗಡುವು ನೀಡುವುದಿಲ್ಲ. ಬದಲಿಗೆ ಲೈಫ್​​ಲೈನ್​ ನೀಡುತ್ತೇವೆ. ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ನುಡಿದರು.

About The Author