News: ಮೈಸೂರು ಮತ್ತು ಕೊಡಗು ಕ್ಷೇತ್ರಗಳಿಗೆ ಈ ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹಗೆ ಟಿಕೇಟ್ ಸಿಗುವುದಿಲ್ಲ. ಬದಲಾಗಿ ಮೈಸೂರು ಮಹಾರಾಜರಿಗೆ ಟಿಕೇಟ್ ನೀಡಲಾಗುತ್ತದೆ ಎಂಬ ಸುದ್ದಿ ಹರಡಿದೆ. ಈ ಕಾರಣಕ್ಕೆ ಯದುವೀರ್ ಒಡೆಯರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಯುವರಾಜರು ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲಬಾರದು ಎಂದು ಅಭಿಯಾನ ಶುರುಮಾಡಿದ್ದಾರೆ.
ಅಲ್ಲದೇ, ಯುವರಾಜರು ನೀವು ನಿಮ್ಮ ಘನತೆ ಕಾಪಾಡಿಕೊಳ್ಳಬೇಕು. ನೀವು ರಾಜರಾಗಿರಬೇಕೆ ಹೊರತು ಮಂತ್ರಿಯಾಗಬಾರದು ಎಂದು ಅಭಿಮಾನಿಗಳು ಯದುವೀರ್ ಅವರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ, ಪ್ರತಾಪ್ ಸಿಂಹ ಮೈಸೂರಿಗಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ, ಈ ಬಾರಿ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಸಿಕ್ಕಿ, ಗೆದ್ದರೆ, ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆಂದು ಹೇಳಿ, ಪ್ರತಾಪ್ ಸಿಂಹ ಅವರಿಗೇ ಟಿಕೇಟ್ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಯದುವೀರ್ ಒಡೆಯರ್ ಯಾವುದೇ ಪ್ರತಿಕ್ರಿಯೆ ಕೊಡಲೇ ಇಲ್ಲ. ಅವರು ಚುನಾವಣೆಗೆ ನಿಲ್ಲುತ್ತೇನೆ ಅಂತಲೂ ಹೇಳಲೇ ಇಲ್ಲ. ಈ ಮೊದಲು ಚುನಾವಣೆಗೆ ನಿಲ್ಲುವಂತೆ ಕೇಳಿದಾಗ, ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಚುನಾವಣೆಗೆ ನಿಲ್ಲುವುದಿಲ್ಲ ಅಂತ ಯದುವೀರ್ ಹೇಳಿದ್ದರು. ಈಗಲೂ ಇದೇ ನಿಲುವನ್ನು ತಾಳುತ್ತಾರಾ..? ಅಥವಾ ಬಿಜೆಪಿ ಟಿಕೇಟ್ ನೀಡಿದರೆ, ಚುನಾವಣೆಗೆ ನಿಲ್ಲುತ್ತಾರಾ ಅಂತಾ ಕಾದು ನೋಡಬೇಕಿದೆ.
ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್