Friday, September 20, 2024

Latest Posts

ವಯಸ್ಸಿನ ಬಗ್ಗೆ ಚಿಂತಿಸುವುದು ಬಿಡಿ, ನಿಮ್ಮ ಗುರಿಯ ಕಡೆ ಗಮನ ಕೊಡಿ..

- Advertisement -

Business Tips: ವಯಸ್ಸು ಅನ್ನೋದು ಒಂದು ಸಂಖ್ಯೆ ಅಂತಾ ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವರ ಸೌಂದರ್ಯ ನೋಡಿ, ಈ ರೀತಿ ಹೇಳಲಾಗುತ್ತದೆ. ಕೆಲವರ ಟ್ಯಾಲೆಂಟ್ ನೋಡಿ ಈ ರೀತಿ ಹೇಳಲಾಗುತ್ತದೆ. ಯಾಕಂದ್ರೆ ವಯಸ್ಸು 50 ದಾಟಿದ ಬಳಿಕವೂ, ಹಲವರು ಪ್ರಸಿದ್ಧತೆ ಪಡೆದಿರುವುದನ್ನು ನೀವು ಕಂಡಿರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಕಥೆ ಹೇಳಲಿದ್ದೇವೆ.

ವಯಸ್ಸು ಅನ್ನೋದು ಒಂದು ನಂಬರ್ ಮಾತ್ರ ಅಂತಾ ಹೇಳೋದ್ಯಾಕೆ ಅಂದ್ರೆ, ಎಷ್ಟೋ ಉದ್ಯಮಿಗಳು ತಮ್ಮ ಉದ್ಯಮವನ್ನು ನಲವತ್ತು ವರ್ಷ ದಾಟಿದ ಬಳಿಕ ಮಾಡುತ್ತಾರೆ. ನಟ ನಟಿಯರಿಗೆ 35ರಿಂದ 45 ವರ್ಷ ಮೀರಿದ ಬಳಿಕ, ಒಳ್ಳೆ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಗುತ್ತದೆ. ಆಗಲೂ ಅವರು ಪೋಷಕ ಪಾತ್ರದಲ್ಲಿ ಮಿಂಚಿ, ಎಲ್ಲರ ಮನೆ ಮಾತಾಗುತ್ತಾರೆ. ಹೀಗೆ ಎಷ್ಟೋ ಜನ ವಯಸ್ಸಾಯಿತು ಎಂದು ಕೈಚೆಲ್ಲಿ ಕುಳಿತುಕೊಳ್ಳದೇ, ತಮ್ಮ ಪ್ರಯತ್ನ ಮಾಡಿ ಸಫಲರಾಗಿದ್ದಾರೆ.

ಎಷ್ಟೋ ಯುವಕ ಯುವತಿಯರು 30 ವರ್ಷ ದಾಟಿದ ಬಳಿಕ, ತಾವು ಮುದುಕರಾದ ಹಾಗೆ, ತಮ್ಮ ಜೀವನವೇ ಮುಗಿಯಿತು ಎನ್ನುವ ಹಾಗೆ, ಜೀವನದ ಜಂಜಾಟ ಹೊತ್ತು ಕುಳಿತುಕೊಳ್ಳುತ್ತಾರೆ. ಯುವಕರು, ಇಎಂಐ, ಮನೆ ಜವಾಬ್ದಾರಿ ಎಂದು ಕುಳಿತರೆ, ಯುವತಿಯರು ಪತಿ, ಮಕ್ಕಳು, ಅತ್ತೆ ಮಾವ ಎಂದು ನೆಪ ಹೇಳಿ, ಮೂಲೆಗುಂಪಾಗಿ ಬಿಡುತ್ತಾರೆ. ಆದರೆ ನೀವು ಹೀಗೆ ಮಾಡಿದಾಗ, ನಿಮ್ಮನ್ನು ಯಾರೂ ಗುರುತಿಸುವುದಿಲ್ಲ. ಒಂದೊಂದು ರೂಪಾಯಿಗೂ ನೀವು ಮನೆ ಮಂದಿ ಬಳಿ ಕೈ ಚಾಚಬೇಕಾಗುತ್ತದೆ. ಹಾಗಾಗಿ ಮನೆಯಿಂದಲೇ ಮಾಡಬಹುದಾದ ಕೆಲಸ ಹುಡುಕಿ. ಎರಡು ಗಂಟೆ ನಿಮಗಾಗಿ ಮೀಸಲಿಡಿ. ಮತ್ತು ನಿಮ್ಮ ಖರ್ಚಿಗೆ ಬೇಕಾಗುವಷ್ಟಾದರೂ ನೀವು ದುಡಿಯಿರಿ.

ಇನ್ನು ಮನೆಯ ಖರ್ಚನ್ನು ಬಿಟ್ಟು, ಕೊಂಚವಾದರೂ ಉಳಿತಾಯ ಮಾಡುವ ಯೋಗ್ಯತೆ ಎಲ್ಲರ ಬಳಿ ಇರುತ್ತದೆ. ಅದಕ್ಕೆ ಬುದ್ಧಿವಂತಿಕೆ ಉಪಯೋಗಿಸಬೇಕಷ್ಟೇ. ಇನ್ವೆಸ್ಟ್‌ಮೆಂಟ್ ಮಾಡುವುದು, ಎಫ್‌ಡಿ ಇಡುವುದು, ಆರ್ಡಿ ಕಟ್ಟುವುದು. ಹೀಗೆ ಬಡ್ಡಿ ಬರುವ ರೀತಿ, ದುಡ್ಡನ್ನು ಉಳಿತಾಯ ಮಾಡಿದರೆ, ಲಾಭ ಗಳಿಸಬಹುದು. ಇದೇ ದುಡ್ಡಿಂದ ಒಂದು ಉದ್ಯಮ ಶುರು ಮಾಡಿ, ನಿಮ್ಮ ಕನಸನ್ನು ಕೂಡ ನನಸು ಮಾಡಬಹುದು. ಹಾಗಾಗಿ ಹಲವು ಉದ್ಯಮಿಗಳು ಹೇಳುವ ಕಿವಿ ಮಾತೆಂದರೆ, ವಯಸ್ಸಾಯಿತೆಂದು ಧೃತಿಗೆಡದೇ, ನಿಮ್ಮ ಕೆಲಸವನ್ನು ನೀವು ಮಾಡಿ ಎನ್ನುತ್ತಾರೆ.

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

- Advertisement -

Latest Posts

Don't Miss