ಪಿಡಿಓ ಗಳು ನರೇಗಾದಲ್ಲಿ(Narega) ಭ್ರಷ್ಟಾಚಾರ (Corruption) ಮಾಡಿ ಸಿಕ್ಕಿ ಹಾಕಿಕೊಂಡಿರೋ ಸ್ಟೋರಿ. ಹೌದು ಇದು ರಾಯಚೂರು (raichur) ಜಿಲ್ಲೆಯೊಂದರಲ್ಲೇ 2010 ರಿಂದ ಇದುವರೆಗು ಬರೋಬ್ಬರಿ 1 ಕೋಟಿ 60 ಲಕ್ಷ ನುಂಗಿ ನೀರು ಕುಡಿದಿರೋ ಪಿಡಿಓಗಳು ಜಿಲ್ಲೆಯ ಒಟ್ಟು 36 ಪಂಚಾಯ್ತಿಯ ಪಿಡಿಓಗಳ ಭ್ರಷ್ಟಾಚಾರ ಬಯಲು (corruption of the PDOs is open) ಆಗಿದೆ. ಇನ್ನೂ ಜಿಲ್ಲಾ ಪಂಚಾಯ್ತಿಯ ಒಂಬುಡ್ಸಮನ್ ಸಮಿತಿ (Ombudsman Committee) ನೀಡಿದ ವರದಿಯಲ್ಲಿ ಕೆಲ ಪಿಡಿಓಗಳ ಅಸಲಿಮುಖವಾಡ ಬಯಲು ಮಾಡಲಾಗಿದೆ. ಇನ್ನೂ 2010 ರಿಂದ ಇದುವರೆಗೂ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಹಣ ರಿಕವರಿ ಆಗಿಲ್ಲ , 1 ಕೋಟಿ 60 ಲಕ್ಷ ಹಣ ರಿಕವರಿಗೆ ಆದೇಶ ಮಾಡಿರುವ ಜಿಲ್ಲಾ ಪಂಚಾಯ್ತಿ ಒಂಬುಡ್ಸಮನ್ ಸಮಿತಿ ಮಾಡಿರುವಂತದ್ದು. ಇನ್ನೂ ಭ್ರಷ್ಟಾಚಾರ ಸಾಭೀತಾಗಿ ರಿಕವರಿಗೆ ಆದೇಶ ಇದ್ರೂ ರಿಕವರಿ ಆಗದ ಭ್ರಷ್ಟಾಚಾರದ ಪಾಲಿನ ಹಣ ಇತ್ತೀಚೆಗೆ ಲಂಚಕ್ಕೆ ಬೇಡಿಕೆ ಇಟ್ಟು, ಸುದ್ದಿಯಾಗಿದ್ದ ಮರ್ಚಟ್ಟಾಳ ಗ್ರಾಮ ಪಂಚಾಯ್ತಿ ಪಿಡಿಓ ಸಹಿತ ಭ್ರಷ್ಟಾಚಾರದಲ್ಲಿ ಭಾಗಿ ಯಾಗಿದ್ದಾರೆ. ಮರ್ಚಟ್ಟಾಳ ಗ್ರಾಮ ಪಂಚಾಯ್ತಿ ಪಿಡಿಓ ಶ್ವೇತಾ ಕುಲಕರ್ಣಿ (PDO Shweta Kulkarni) ಅವರಿಂದಲೂ 5 ಲಕ್ಷ ಹಣ ರಿಕವರಿಗೆ ಆದೇಶ ಮಾಡಲಾಗಿದೆ. ಕಾಮಗಾರಿ ಮಾಡಿಸದೇ ಹಣ ಲಪಾಟಿಸಿದ್ದ 36 ಗ್ರಾಮ ಪಂಚಾಯ್ತಿಗಳ ಪಿಡಿಓಗಳು ಉದ್ಯೋಗಖಾತ್ರಿ ಕಾಮಗಾರಿಯಲ್ಲಿ ಹೆಚ್ಚುವರಿ ಬಿಲ್ ಹಾಕಿದ್ದು, ಕಾಮಗಾರಿ ಮಾಡಿಸದೇ ಬಿಲ್ ಎತ್ತುವಳಿ ಮಾಡಿದ್ದರ ತನಿಖಾ ವರದಿ ನೀಡಿದ್ದ ಒಂಬುಡ್ಸಮನ್ ಸಮಿತಿ. ಭ್ರಷ್ಟಾಚಾರದ ಆರೋಪ ಸಾಬೀತಾಗಿದ್ರೂ ಪಿಡಿಓ ಗಳ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳು, ಭ್ರಷ್ಟಾಚಾರ ಮಾಡಿ, ಸಿಕ್ಕಿ ಹಾಕಿಕೊಂಡಿರೋ ಪಿಡಿಓಗಳು ಮೂಲ ಪಂಚಾಯ್ತಿಗಳಲ್ಲೇ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.