- Advertisement -
ಸರ್ಕಾರದ ಮುಂದೆ ಯಾವುದೇ ರೀತಿಯ ಲಾಕ್‌ಡೌನ್ ಪ್ರಸ್ಥಾವನೆಯಿಲ್ಲ. ಲಾಕ್‌ಡೌನ್ ಬಗ್ಗೆ ವದಂತಿ, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಹಾಗೂ ಕಳೆದ ವರ್ಷದ ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ ಮಾಡಿದ್ದು ಕಂಡುಬAದರೆ ಅಂತವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇನ್ನೂ ಹೊಸ ಮಾದರಿಯ ಸೋಂಕು ಪತ್ತೆಯಾಗಿಲ್ಲ. ಆದ್ರೆ, ವೇಗವಾಗಿ ಹರಡಿದ್ರೂ ಪರಿಣಾಮ ಕಡಿಮೆ ಅಂತ ಸುಧಾಕರ್ ತಿಳಿಸಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವಾಂತಿ, ನೆಗಡಿ, ಜ್ವರ, ಸುಸ್ತು ಕಂಡುಬರುತ್ತೆ. ಡೆಲ್ಟಾ ರೀತಿ ವಾಸನೆ ಕಳೆದುಕೊಳ್ಳುವ ಲಕ್ಷಣ ಇಲ್ಲ. ಇದು ಭೀಕರ ಅಲ್ಲ ಅಂತ ಸಚಿವರು ಹೇಳಿದ್ದಾರೆ.
- Advertisement -