Friday, December 27, 2024

Latest Posts

ತುಳಸಿ ದೇವಿ ರಾಕ್ಷಸ ಶಂಖ ಚೂಡನನ್ನು ವಿವಾಹವಾಗಲು ಕಾರಣವೇನು..?

- Advertisement -

ವಿಷ್ಣುವಿಗೆ ಪ್ರಿಯಳಾದ ತುಳಸಿ ದೇವಿ, ವಿವಾಹವಾಗಿದ್ದು ರಾಕ್ಷಸನನ್ನು. ಆಕೆ ರಾಕ್ಷಸನನ್ನು ವಿವಾಹವಾದರೂ, ವಿಷ್ಣುವಿನ ಪೂಜೆ ಕೂಡ ಮಾಡುತ್ತಿದ್ದಳು. ಜೊತೆಗೆ ಪಾತಿವೃತ್ಯಾ ಧರ್ಮವನ್ನು ಪಾಲಿಸುತ್ತಿದ್ದಳು. ಹಾಗಾದರೆ ವಿಷ್ಣುವಿನ ಭಕ್ತೆ ರಾಕ್ಷಸನನ್ನು ವಿವಾಹವಾಗಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಧರ್ಮಧ್ವಜನೆಂಬ ಒಬ್ಬ ರಾಜನಿದ್ದ. ಅವನ ಪತ್ನಿ ಮಾಧವಿ. ಅವರಿಗೆ ಜನಿಸಿದ ಮಗಳೇ ತುಳಸಿ. ತುಳಸಿ ನೋಡಲು ಎಷ್ಟು ಸುಂದರವಾಗಿದ್ದಳು ಅಂದರೆ, ಆ ರಾಜ್ಯದಲ್ಲಿ ಆಕೆಯನ್ನು ಬೇರೆಯವರಿಗೆ ಹೋಲಿಸಿ ಮಾತನಾಡುವುದಕ್ಕೆ ಆಗುತ್ತಲೇ ಇರಲಿಲ್ಲ. ಅಂಥ ಸೌಂದರ್ಯವನ್ನು ಹೊಂದಿದ್ದಳು. ದಿನಗಳೆದಂತೆ ಆಕೆಯ ಸೌಂದರ್ಯ ಇಮ್ಮಡಿಯಾಯಿತು. ಒಮ್ಮೆ ಆಕೆ ತಂದೆಯನ್ನು ಕುರಿತು, ನಾನು ತಪ್ಪಸು ಮಾಡಲು ಭದ್ರಿವನಕ್ಕೆ ಹೋಗುತ್ತೇನೆಂದು ಹೇಳುತ್ತಾಳೆ.

ಆಗ ರಾಜ, ಮಗಳೇ ನಿನಗೆ ಯಾವುದರ ಕಡಿಮೆ ಇದೆ. ನೀನು ಯಾರಿಗಾಗಿ ಮತ್ತು ಯಾವುದಕ್ಕಾಗಿ ತಪಸ್ಸು ಮಾಡಲು ಹೊರಟಿರುವೆ..? ಎಂದು ಕೇಳುತ್ತಾನೆ. ಅದಕ್ಕೆ ತುಳಸಿ, ನೀವು ನನಗೇನೂ ಕಡಿಮೆ ಮಾಡಿಲ್ಲ. ನನಗೆ ಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿದೆ. ಆದ್ರೆ, ಮನಶಾಂತಿಗಾಗಿ ನಾನು ತಪಸ್ಸು ಮಾಡಲು ಹೊರಟಿರುವೆ ಎಂದು, ಭದ್ರಿವನಕ್ಕೆ ಹೋಗುತ್ತಾಳೆ.

ಅಲ್ಲಿ ಹೋಗಿ, ದೇವರನ್ನು ಕುರಿತು ತಪಸ್ಸು ಮಾಡುತ್ತಾಳೆ. ಹಲವು ವರ್ಷಗಳ ಬಳಿಕ, ಬ್ರಹ್ಮ ಪ್ರತ್ಯಕ್ಷನಾಗಿ, ಏನು ವರ ಬೇಕೆಂದು ಕೇಳುತ್ತಾನೆ. ಆಗ ತುಳಸಿ, ನಾನು ಕಳೆದ ಜನ್ಮದಲ್ಲಿ ಗೋಪಿಕೆಯರಲ್ಲಿ ಒಬ್ಬಳಾಗಿದ್ದೆ. ಗೋಕುಲ ನನ್ನ ನಿವಾಸವಾಗಿತ್ತು. ಆದ್ರೆ ರಾಧೆ ನನಗೆ ನೀನು ಮುಂದಿನ ಜನ್ಮದಲ್ಲಿ ಮಾನವಳಾಗಿ ಜನಿಸು ಎಂದು ಶಾಪ ನೀಡಿದಳು. ಈ ಕಾರಣಕ್ಕೆ ನಾನು ಈ ಜನ್ಮದಲ್ಲಿ ಮಾನವಳಾಗಿ ಜನಿಸಿದ್ದೇನೆ.

ಆದರೆ ನನಗಿನ್ನೂ ಕೃಷ್ಣನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಈ ಜನ್ಮದಲ್ಲೂ ನಾನು ಕೃಷ್ಣ ಅಂದರೆ ವಿಷ್ಣುವಿನ ಪತ್ನಿಯಾಗಲು ಬಯಸುತ್ತೇನೆ ಎನ್ನುತ್ತಾಳೆ. ಆಗ ಬ್ರಹ್ಮ, ಪೂರ್ವ ಜನ್ಮದಲ್ಲಿ ರಾಧೆಯಿಂದ ಶಾಪಕ್ಕೀಡಾದ ಸುಧಾಮನೆಂಬುವವನು, ಈ ಜನ್ಮದಲ್ಲಿ ಶಂಖಚೂಡನೆಂಬ ರಾಕ್ಷಸನಾಗಿ ಜನಿಸಿದ್ದಾನೆ. ಕೃಷ್ಣನ ಅಂಶವಾಗಿದ್ದಾನೆ. ನೀನು ಅವನನ್ನ ವರಿಸು ಎಂದು ಹೇಳುತ್ತಾರೆ. ಭದ್ರಿ ವನದಲ್ಲಿ ತುಳಸಿ ಮತ್ತು ಶಂಖಚೂಡನ ಭೇಟಿಯಾಗುತ್ತದೆ. ಇಬ್ಬರೂ ಗಂಧರ್ವ ವಿವಾಹವಾಗುತ್ತಾರೆ.

- Advertisement -

Latest Posts

Don't Miss