Hostelನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ..!

ರಾಯಚೂರು : ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರೊಟೆಸ್ಟ್( Students are Protest)ಮಾಡುತ್ತಿರುವ ಘಟನೆ ರಾಯಚೂರಿ(raichur)ನ ನರ್ಸಿಂಗ್ ಹಾಸ್ಟೆಲ್(Nursing Hostel)ನಲ್ಲಿ ನಡೆದಿದೆ. ಇನ್ನು ನಿನ್ನೆ ಬೆಳಗ್ಗೆಯಿಂದ ನೀರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೂ ಬೆಳಗ್ಗೆಯಿಂದ ನೀರಿಲ್ಲದೆ ಊಟ ಬಿಟ್ಟು ಕುಳಿತಿರುವಂತಹ ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿನಿಯರು ಇರುವಂತ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ಮುಂಜಾನೆಯಿಂದ ವಿದ್ಯಾರ್ಥಿನಿಯರು ಊಟ ಬಿಟ್ಟು ಹಾಸ್ಟೆಲ್ ಮುಂದೆ ಪ್ರತಿಭಟನೆಗೆ ಮುಂದಾದರು ಯಾವ ಅಧಿಕಾರಿಯೂ(Officers) ಸಹ ಬಂದಿಲ್ಲ. ಇನ್ನು ನಿನ್ನೆ ರಾತ್ರಿ ಕುಡಿಯಲು ನೀರಿಲ್ಲದೆ ಹಾಗೂ ದಿನಬಳಕೆಗೆ ನೀರಿಲ್ಲದೆ ವಿದ್ಯಾರ್ಥಿನಿಯರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಂದು ಬೆಳಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಂಡಿಲ್ಲ. ನಂತರ ಹಾಸ್ಟೆಲ್ ನ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ಹಾಸ್ಟೆಲ್ ನ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

About The Author