ಬೇಲೂರು: ಮೂಡಿಗೆರೆ ಚೀಕನಹಳ್ಳಿ ಮುಖ್ಯರಸ್ತೆಯ ಶಾಲೆಯ ಪಕ್ಕದಲ್ಲಿ ಇದ್ದಂತ ರಸ್ತೆ ಉಬ್ಬುಗಳನ್ನುತೆರವುಗೊಳಿಸಿರುವುದರಿಂದ ತೊಂದರೆಯಾಗುತ್ತಿದೆ ಎಂದು ಪೋಷಕರು ಹಾಗೂ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಪ್ರತಿಭಟಿಸಿದರು.
7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಭರವಸೆ : ಎರಡು ದಿನದಲ್ಲಿ ಆದೇಶ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರಾದ ಸೌಮ್ಯ ಆನಂದ್ ಮೂಡಿಗೆರೆ ಮುಖ್ಯರಸ್ತೆಯಲ್ಲಿ ಸಾವಿರಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತದೆ. ಈ ಭಾಗದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣಪ್ರಜ್ಞ, ಶಾಂತಳಾ ವಿದ್ಯಾಸಂಸ್ಥೆ,ಮೌಂಟ್ ಕಾರ್ಮೆಲ್ ಹಾಗೂ ಯುನೈಟೆಡ್ ಶಾಲೆಗಳಿಗೆ ಬರುತ್ತಾರೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಇಲ್ಲಿ ಅಪಘಾತ ಹೆಚ್ಚಾಗುತ್ತದೆ ಎಂದು ರಸ್ತೆಗೆ ಉಬ್ಬುಗಳನ್ನು ನಿರ್ಮಿಸಿದ್ದರು. ಒಂದು ವಾರದ ಹಿಂದೆ ರಸ್ತೆಗೆ ಡಾಂಬಾರ್ ಹಾಕುವಾಗ ಇದ್ದಂತ ಉಬ್ಬುಗಳನ್ನು ಈಗ ತೆರವು ಮಾಡಿದ್ದು ಅವು ಎಲ್ಲಿ ಹಾಕಿದ್ದರೂ ಅಲ್ಲೇ ಹಾಕುವಂತೆ ಮನವಿ ಮಾಡಿದರು ಇಲ್ಲದಿದ್ದರೆ ಸ್ಥಳೀಯರೊಂದಿಗೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಶಾಂತಳಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹರೀಶ್ ಮಾತನಾಡಿ ಈ ರಸ್ತೆಯಲ್ಲಿ ನಾಲ್ಕು ಶಾಲೆಗಳು ಇರುವುದರಿಂದ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಭಯದಿಂದ ಶಾಲೆಗೆ ಬರುವ ಸ್ಥಿತಿ ಉಂಟಾಗಿದೆ. ಪೋಷಕರೂ ಸಹ ಈಗಾಗಲೇ ನಾವೂ ಸಹ ನಿಮ್ಮ ಜೊತೆ ಕೈಜೋಡಿಸುವುದಾಗಿ ತಿಳಿಸಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಉಬ್ಬಗಳನ್ನು ನಿರ್ಮಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಮಂಜುನಾಥ್ ಗೌಡ ಹಲ್ಲೆ ನಡೆಸಿರೋ ವೀಡಿಯೋ ವೈರಲ್..
ಪುರಸಭೆ ಮಾಜಿ ಅಧ್ಯಕ್ಷೆ ಭಾರತೀ ಅರುಣ್ ಹಾಗೂ ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ ಸರಿಯಾಗಿದ್ದಂತ ರಸ್ತೆಯನ್ನು ಕಾಟಾಚಾರಕ್ಕೆ ಡಾಂಬರೀಕರಣ ಮಾಡಿದ್ದು ರಸ್ತೆ ಅಕ್ಕಪಕ್ಕದಲ್ಲಿ ಎರಡೂ ಅಡಿಗಳಿಗಷ್ಟು ಗುಂಡಿ ಬಿದ್ದಿದ್ದು ರಸ್ತೆಯ ಪಕ್ಕಕ್ಕೆ ಮಣ್ಣು ಹಾಕದೆ ಹಾಗೆ ಬಿಟ್ಟಿರುವುದರಿಂದ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿರುವ ನಿದರ್ಶನ ಇದೆ. ಹಮ್ಸ್ ತೆರವುಗೊಳಿಸಿದ ಎರಡು ದಿನಗಳ ಹಿಂದಷ್ಟೇ ನಿವೃತ್ತ ಶಿಕ್ಷಕರಿಗೆ ಅಪಘಾತವಾಗಿದ್ದು ತೀವ್ರ ತರವಾದ ಪೆಟ್ಟಾಗಿದೆ ಕೂಡಲೇ ಪೆಟ್ರೋಲ್ ಬಂಕ್ ಬಳಿ,ಜೆಪಿನಗರ ಹಾಗೂ ಶಾಲಾ ಮುಂಭಾಗದಲ್ಲಿ ಹಮ್ಸ್ ಗಳನ್ನು ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಬ್ಬೀಡು ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಪೂರ್ಣಪ್ರಜ್ಞ ಪ್ರಾಂಶುಪಾಲ ಪ್ರಶಾಂತ್ ಹಾಗೂ ನಾಲ್ಕು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.