ಸ್ಟಾರ್ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಸ್ಟಾರ್ ನಟರ ಐದಾರು ಸಿನಿಮಾ ಬಂದರೆ ಹೆಚ್ಚು ಎಂಬಮಾತು ಕೇಳಿಬರುತ್ತಿತ್ತು. ಸುದೀಪ್ ಅವರು ಸಹ ಎರಡು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತು. ಇನ್ನು ಮುಂದೆ ಸುದೀಪ್ ಅವರು ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಲು ನಿರ್ಧರಿಸಿದ್ದಾರೆ. ಹೌದು, ವರ್ಷಕ್ಕೆ ಎರಡು ಸಿನಿಮಾ ಮಾಡಲೇಬೇಕು ಎಂದು ಅವರು ತೀರ್ಮಾನಿಸಿದ್ದು, ಇನ್ನು ಮುಂದೆ ನನ್ನ ಸಿನಿಮಾಗಳು ಲೇಟ್ ಆಗುವುದಿಲ್ಲ ಎಂದಿದ್ದಾರೆ.
ಇನ್ನು, ಸೆಪ್ಟೆಂಬರ್ ೨ ರಂದು ಸುದೀಪ್ ಅವರ ಹುಟ್ಟು ಹಬ್ಬ. ಅಂದು ಸುದೀಪ್ ಅವರ ಹೊಸ ಸಿನಿಮಾಗಳು ಅನೌನ್ಸ್ ಆಗಲಿವೆ. ಮ್ಯಾಕ್ಸ್ ಸಿನಿಮಾದ ಹಾಡು ಕೂಡ ಬರಲಿದೆ. ಅವರೇ ಹೇಳುವಂತೆ, ಬರ್ತ್ ಡೇ ದಿನ ಸಿನಿಮಾ ಅನೌನ್ಸ್ ಮಾಡ್ತೀನಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಸೆ.2ಕ್ಕೆ ಮ್ಯಾಕ್ಸ್ ಅಂತ ಸುದ್ದಿ ಇತ್ತು. ಆದರೆ, ಸಿನಿಮಾ ಲೇಟ್ ಆಗಲಿದೆ. ಇನ್ನು, ಅಂದು ಸಿನಿಮಾದ ಹಾಡು ಹೊರಬರಲಿದೆ. ಉಳಿದಂತೆ ಒಂದಷ್ಟು ಸಿನಿಮಾಗಳ ಬಗ್ಗೆ ಅಪ್ ಡೇಟ್ಸ್ ಸಿಗಲಿದೆ. ಸದ್ಯ ನಾಲ್ಕು ಸಿನಿಮಾ ಒಪ್ಪಿರುವುದಾಗಿ ಹೇಳಿದ್ದಾರೆ ಸುದೀಪ್.