ಸುಧಾ ಚಂದ್ರನ್ ದೇಶದ ಖ್ಯಾತ ನೃತ್ಯಗಾರ್ತಿ ಹಾಗೂ ಖ್ಯಾತ ನಟಿ. ತಮ್ಮ ಸೌಂದರ್ಯ ಹಾಗೂ ಕಲಾ ಸರಸ್ವತಿಯ ಪ್ರತಿರೂಪದಂತಿರೋ ಈ ಕಲಾವಿದೆ. ಇಂಥಹ ಕಲಾವಿದೆಗೆ ಮೇಲೆ ಅದ್ಯಾರ ಕೆ್ಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅಪಘಾತವೊಂದರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡ್ರು. ಆದ್ರೆ ನೃತ್ಯವನ್ನೇ ದೈವ ಅಂತ ನಂಬಿದ್ದ ಈಕೆ ಛಲ ಬಿಡದೇ ಕೃತಕ ಕಾಲುಗಳ ಮೂಲಕವೇ ನೃತ್ಯಾಭ್ಯಾಸ ಮಾಡಿ ನೃತ್ಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ.
ಇನ್ನು ಸುಧಾರಿಗೆ ತಮ್ಮ ಕಾಲು ಕಳೆದುಕೊಂಡಿದ್ದರ ಬಗ್ಗೆ ಅಷ್ಟೇನೂ ಚಿಂತೆಯಿಲ್ಲ. ಕೃತಕ ಕಾಲಿನ ನೆರವಿನಿಂದ ಆರಾಮಾಗಿ ಜೀವನ ನಡೆಸ್ತಿದ್ದಾರೆ. ಆದ್ರೆ ಸದ್ಯ ಈ ಕೃತಕ ಕಾಲು ಪ್ರತಿ ಬಾರಿ ತಾವು ವಿಮಾನ ಪ್ರಯಾಣ ಮಾಡುವಾಗ ಅವಮಾನವಾಗುವಂತೆ ಮಾಡ್ತಿದೆ.
ಹೌದು, ಕಾಲು ಕಳೆದುಕೊಂಡಿದ್ರೂ ಕೂಡ ನವಿಲಿನಂತೆ ನಾಟ್ಯಮಾಡೋ ದೇಶದ ಶ್ರೇಷ್ಟ ಕಲಾವಿದೆಯರಲ್ಲಿ ಒಬ್ಬರು. ಕೇವಲ ನೃತ್ಯವಷ್ಟೇ ಅಲ್ಲದೆ ಸುಧಾ ತಮ್ಮದೆ ಜೀವನಾಧಾರಿತ ರಾಷ್ಟ್ರಪ್ರಶಸ್ತಿ ವಿಜೇತ ‘ಮಯೂರಿ’ ಚಿತ್ರದಲ್ಲಿ ನಟಿಸಿದ್ದಾರೆ. 1988ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್ ನಟನೆಯ ಕನ್ನಡದ ‘ಒಲವಿನ ಆಸರೆ’ ಚಿತ್ರದಲ್ಲಿಯೂ ಸುಧಾ ಚಂದ್ರನ್ ಕಾಣಿಸಿಕೊಂಡಿದ್ದರು.
ಇನ್ನು ಇಂಥಹ ಸುಧಾ ಚಂದ್ರನ್ ರಿಗೆ ತಮ್ಮ ಕೃತ ಕಾಲು ದೈನಂದಿನ ಕೆಲಸ ಮಾಡೋದಕ್ಕಾಗ್ಲೀ ನಾಟ್ಯಮಾಡೋದಕ್ಕಾಗಲೀ ಯಾವುದೇ ಅಡ್ಡಿಯಾಗಿಲ್ಲ. ಅಷ್ಟೇ ಅಲ್ಲ
ಆದ್ರೆ ವಿಮಾನ ಪ್ರಯಾಣ ಮಾಡೋವಾಗ ಸಿಕ್ಕಾಪಟ್ಟೆ ತೊಂದರೆಯಾಗ್ತಿದೆ. ಹಾಗಂತ ಈ ಕಾಲಿನಲ್ಲಿ ಸಮಸ್ಯೆ ಇದೇ ಅಂತಲ್ಲ. ಬದಲಾಗಿ ಏರ್ಪೋರ್ಟ್ ನ ಭದ್ರತಾ ಅಧಿಕಾರಿಗಳಿಂದಾಗಿ ಸುಧಾ ಚಂದ್ರನ್ ರಿಗೆ ತೀವ್ರ ಸಮಸ್ಯೆ ಆಗ್ತಿದೆ. ಯೆಸ್, ಹೌದು, ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಖುದ್ದು ಸುಧಾ ಚಂದ್ರನ್ ಹೇಳಿಕೊಂಡಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ವೇಳೆ ಸೆಕ್ಯುರಿಟಿ ಯಂತ್ರಗಳು ಸುಧಾರ ಲೋಹದ ಕಾಲಿನ ಬಗ್ಗೆ ಎಚ್ಚರಿಸುತ್ತವೆ. ಹೀಗಾಗಿ ಸೆಕ್ಯೂರಿಟಿ ಅಧಿಕಾರಿಗಳು ಪ್ರತಿ ಬಾರಿ ಕಾಲನ್ನು ಬಿಚ್ಚಿ ತೋರಿಸಲು ಹೇಳುತ್ತಾರೆ. ಇದು ನನಗೆ ಬಹಳ ನೋವುಂಟು ಮಾಡುತ್ತೆ ಅಂತ 56 ವರ್ಷದ ಈ ಕಲಾವಿದೆ ಅಳಲುತೋಡಿಕೊಂಡಿದ್ದಾರೆ. ಅಲ್ಲದೆ ತಾವು ಕೆಲಸ ನಿಮಿತ್ತ ಪ್ರತಿ ಬಾರಿ ವಿಮಾನ ನಿಲ್ದಾಣಗಳಿಗೆ ತೆರಳಿದಾಗಲೂ ನಾನು ನನ್ನ ಈ ಕೃತಕ ಕಾಲನ್ನು ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಮುಖಾಂತರ ಪರಿಶೀಲಿಸಿ ಅಂತ ಮನವಿ ಮಾಡಿಕೊಂಡ್ರೂ ಕೂಡ ಕೃತಕ ಕಾಲನ್ನು ತೆಗೆಸಿ ಪರಿಶೀಲಿಸುತ್ತಾರೆ. ಇದಿರಿಂದ ನನಗೆ ಪ್ರತಿ ಬಾರಿ ಏರ್ಪೋರ್ಟ್ ಗೆ ಹೋದಾಗಲೆಲ್ಲಾ ಬಂಧನಕ್ಕೊಳಗಾಗಿರುವಂತೆ ನನಗೆ ಎನಿಸುತ್ತಿದೆ ಅಂತ ಸುಧಾ ಚಂದ್ರನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ರೀತಿ ಮಾಡೋದು ಮನುಷ್ಯರಿಗೆ ಸಾಧ್ಯವಾ..ಇದೇನಾ ನಮ್ಮ ದೇಶದಲ್ಲಿ ಓರ್ವ ಮಹಿಳೆಗೆ ಮತ್ತೋರ್ವ ಮಹಿಳೆ ತೋರುವ ಗೌರವ..? ಅಂತ ಪ್ರಧಾನಿ ಮೋದಿಯವರಿಗೆ ಸುಧಾ ಚಂದ್ರನ್ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ನಮ್ಮಂತಹವರಿಗಾಗಿಯೇ ಪ್ರತ್ಯೇಕವಾಗಿ ಹಿರಿಯ ನಾಗರೀಕರ ಕಾರ್ಡ್ ವಿತರಿಸಿ ಅಂತ ಸುಧಾ ಚಂದ್ರನ್ ಪ್ರಧಾನಿ ಮೋದಿಯವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಹೀಗೆ ಈ ವಿಶ್ವ ವಿಖ್ಯಾತ ಕಲಾವಿದೆ ಸದ್ಯ ತಮಗಾಗುತ್ತಿರೋ ಸಮಸ್ಯೆಯನ್ನು ಪ್ರಧಾನಿ ಮೋದಿಯವರಿಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನುಇಂತಹ ಅನಿವಾರ್ಯ ಸಂದರ್ಭಗಲ್ಲಿ ಪ್ರತ್ಯೇಕ ನಿಯಮ ಜಾರಿಗೊಳಿಸಿ ಅನ್ನೋ ಈ ಕಲಾವಿದೆಯ ಅಭಿಪ್ರಾಯಕ್ಕೆ ಪ್ರಧಾನಿ ಮೋದಿ ಯಾವ ರೀತಿ ಸ್ಪಂದಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.
ಬ್ಯೂರೋ ರಿಪೋರ್ಟ್- ಕರ್ನಾಟಕ ಟಿವಿ