www.karnatakatv : ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಮಠದಲ್ಲಿನ ಯತಿಗಳ ಬೃಂದಾವನ ದರ್ಶನ ಮಾಡಿ, ನೂತನವಾಗಿ ಲೋಕಾರ್ಪಣೆಯಾಗಿರುವ ವೇದಾಂತ ಹಾಗೂ ರಾಯರ ಜೀವನದರ್ಶನ ಕುರಿತ ಮಾಹಿತಿ ನೀಡೋ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿದ್ರು. ಈ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮ್ಯೂಸಿಯಂನ ವಿಶೇಷತೆ ಬಗ್ಗೆ ಸುಧಾಮೂರ್ತಿಯವರಿಗೆ ಮಾಹಿತಿ ನೀಡಿದ್ರು. ಮಠದ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.ಬಳಿಕ ಶ್ರೀಗಳು ಫಲಪುಷ್ಪ ಮಂತ್ರಾಕ್ಷತೆಯೊಂದಿಗೆ ಸುಧಾಮೂರ್ತಿಯವರಿಗೆ ಆಶೀರ್ವಾದ ಮಾಡಿದ್ರು.
ಇನ್ನು ರಾಯಾರ ಪರಮ ಭಕ್ತರಾಗಿರುವ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮಠಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ನಡೆದ ರಾಯರ 350 ನೇ ಆರಾಧನಾ ಮಹೋತ್ಸವಕ್ಕೆ ರಾಯರ ಮಠಕ್ಕೆ ಒಂದು ಲಾರಿಯಷ್ಟು ದಿನಸಿ ಪದಾರ್ಥಗಳನ್ನು ಕಾಣಿಕೆಯಾಗಿ ನೀಡಿದ್ದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು