Saturday, July 27, 2024

Latest Posts

Sumalatha : ಸುಮಲತಾ ಬಿಜೆಪಿ ಸೇರ್ಪಡೆಗೆ ಅದೊಂದೇ ಕಾರಣ..?!

- Advertisement -

Mandya Political News : ಮಂಡ್ಯದ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ. ಸುಮಲತಾ ಅಂಬರೀಷ್ ದಿಟ್ಟ ನಿರ್ಧಾರಕ್ಕೆ ಅಭಿಮಾನಿಗಳು ಕೂಡಾ ಫುಲ್ ಖುಷ್ ಆಗಿದ್ದಾರೆ. ಆದ್ರೆ ಸುಮಲತಾ ಗೆ ಅದೆಷ್ಟೋ ಅವಕಾಶಗಳಿದ್ದವು ಪಕ್ಷೇತರವಾಗಿ ನಿಂತಿದ್ರೂ ಗೆಲುವು ಖಚಿತ ಎಂಬಂತಿತ್ತು. ಆದ್ರೆ ಮಂಡ್ಯ ಗೌಡ್ತಿ ಎಲ್ಲವನ್ನು ಬದಿಗೊತ್ತಿ ಚುನಾವಣೆಯಿಂದ ಹಿಂದೆ ಸರಿದ್ರು. ಹಾಗು ಬಿಜೆಪಿ ಸೇರುವುದಾಗಿಯೂ ಹೇಳಿ ಕೊಂಡ್ರು. ಆದ್ರೆ ಸುಮಲತಾ ಬಿಜೆಪಿ ಸೇರಿದ್ದು ಆ ಒಂದು ಕಾರಣಕ್ಕೆ ಹಾಗಿದ್ರೆ ಏನದು ಕಾರಣ ಸುಮಲತಾ ಕೊಟ್ಟಿರುವ ಆ ಕಾರಣಗಳೇನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್………

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಇಂದು (ಏಪ್ರಿಲ್ 03) ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿಯೇ ಮಾತನಾಡಿದ ಸುಮಲತಾ, ಮಾತಿನ ಉದ್ಧಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಸಾರೆ ಹೊಗಳಿದರು. ಇನ್ನು ಇದೇ ವೇಳೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೆ ಕೆಲ ಕಾರಣಗಳನ್ನು ಸಹ ನೀಡಿದ್ದಾರೆ.

ಹೌದು ಲೋಕ ಸಭೆ ಚುನಾವಣೆಗೆ ಪ್ರತಿ ಕ್ಷೇತ್ರಗಳು ರಂಗೇರುತ್ತಿದ್ದರೂ ಮಂಡ್ಯ ಕ್ಷೇತ್ರ ವಿಭಿನ್ನವಾಗಿಯೇ ಗಮನ ಸೆಳೆಯಿತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್​ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್​ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್​ ಅವರಿಗೆ ಟಿಕೆಟ್​ ತಪ್ಪಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ಜಿಡಿಎಸ್​ ಬಿಟ್ಟುಕೊಂಟ್ಟಿದ್ದು,​ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಟಿಕೆಟ್​ ಕೈತಪ್ಪಿದ್ದರಿಂದ ಸುಮಲತಾ ಅಂಬರೀಶ್​ ಕಳೆದ ಕೆಲವು ದಿನಗಳಿಂದ ಸೈಲೆಂಟ್​ ಆಗಿದ್ದರು. ಇತ್ತೀಚಿಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾ ಅಂಬರೀಶ್​ ಅವರನ್ನು ಭೇಟಿ ಮಾಡಿ, ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಕೂಡ ಸುಮಲತಾ ಅಂಬರೀಶ್​ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಪ್ರಶ್ನೆ ಸಂಸದೆ ಸುಮಲತಾ ಅಂಬರೀಶ್​ ಇಂದು ಮಂಡ್ಯದಲ್ಲಿ ಉತ್ತರ ನೀಡಿದ್ದಾರೆ. ಉತ್ತರದ ಜೊತೆಗೆ ಬಿಜೆಪಿ ಸೇರುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಈಗ ಎಲ್ಲರಲ್ಲಿ ಕಾಡುತ್ತಿರುವ ಪ್ರಶ್ನೆ ಅವರು ಬಿಜೆಪಿಗೆ ಸೇರಿದ್ದು ಯಾಕಿರ ಬಹುದು ಎಂದು ಅದಕ್ಕೂ ಸುಮಲತ ಉತ್ತರ ಕೊಟ್ಟಿದ್ದಾರೆ.

ಬಿಜೆಪಿ ಸೇರಲು ಸುಮಲತಾ ಕೊಟ್ಟಿರುವ ಕಾರಣಗಳು ಯಾವುವೆಂದರೆ :
ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿ ವಿಚಾರದಲ್ಲೂ ನನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
ನಾಲ್ಕು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಮಂಡ್ಯದ ಅಭಿವೃದ್ಧಿಗೆ ಸಹಾಕಾರ ನೀಡಿದೆ.
ಮುಂದಿನ ದಿನಗಳಲ್ಲಿ ಮಂಡ್ಯಕ್ಕೆ ಅಭಿವೃದ್ಧಿ ಆಗುತ್ತೆ.
ಕಾಂಗ್ರೆಸ್​​ನವರೇ ನನ್ನ ಬೇಡ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟ.
ನಾನು ಬಿಜೆಪಿಗೆ ಸೇರಿದರೆ ಮುಂದೆಯೂ ನನ್ನ ಮಾತು ನಡೆಯುತ್ತಿದೆ.
ಬಿಜೆಪಿ ಅಭಿವೃದ್ಧಿ ಕಾರ್ಯಗಳು
ಬಿಜೆಪಿ ಪಕ್ಚದವರು ನಡೆದುಕೊಳ್ಳುವ ನೀತಿ
ಕಾರ್ಯಕರ್ತರ ಭವಿಷ್ಯ
ಎಂಬೀ ಕಾರಣಗಳನ್ನು ನೀಡಿ ಸುಮಲತಾ ಅಂಬರೀಷ್ ಹೇಳಿಕೆ ನೀಡಿದರು. ಮುಂದುವರೆದು ಮೋದಿಯ ಬಗೆಗೂ ಒಂದಷ್ಟು ಮಾತುಗಳನ್ನಾಡಿದರು. ಮೋದಿ ನನಗೆ ಸಾಕಷ್ಟು ಗೌರವವನ್ನು ನೀಡಿದ್ದಾರೆ. ಇಂದು ದೇಶಕ್ಕೆ ಉತ್ತಮ ಪ್ರಧಾನಿ ಸಿಕ್ಕಿದ್ದಾರೆ. ದೇಶ ಸಂಕಷ್ಟದ ಕಾಲದಲ್ಲಿದ್ದಾಗ ಅವರು ಅಧಿಕಾರವನ್ನು ವಹಿಸಿಕೊಂಡರು. ಆರ್ಥಿಕತೆಯಲ್ಲಿ ದೇಶವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ಅವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಂಥವರನ್ನು ನಾವು ಬೆಂಬಲಿಸಬೇಕು. ದೇಶಕ್ಕಾಗಿ ನಾವು ಮೋದಿ ಅವರನ್ನು ಆಯ್ಕೆ ಮಾಡಬೇಕು. ಅಲ್ಲದೆ, ನಾನು ಪಕ್ಷೇತರ ಸಂಸದೆಯಾಗಿದ್ದರೂ ಅವರು ನನಗೆ ಸಾಕಷ್ಟು ಗೌರವವನ್ನು ನೀಡಿದ್ದಾರೆ. ಮಂಡ್ಯದಲ್ಲಿ ಸ್ಪರ್ಧೆ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಟ್ಟರು. ಒಬ್ಬ ಪ್ರಧಾನಿಯೇ ಹೀಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ.

Sumalatha : ಮಂಡ್ಯ ಬಿಟ್ರೆ ರಾಜಕೀಯ ಬೇಡ : ಸುಮಲತಾ ಅಂಬರೀಷ್

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

- Advertisement -

Latest Posts

Don't Miss