ಮಂಡ್ಯ: ಅಭಿಷೇಕ್ ಅಂಬರೀಶ್ ನಾಯಕ ನಟನೆಯ ‘ಅಮರ್’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ತಾಯಿ ಸುಮಲತಾ ಚಿತ್ರ ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ತಾವು ಸಿನಿಮಾ ನೋಡಿದ್ದು, ಅಂಬರೀಶ್ ಮೇಲೆ ಜನ ಎಷ್ಟು ಪ್ರೀತಿ ಇಟ್ಟಿದ್ದಾರೋ ಅಷ್ಟೇ ಪ್ರೀತಿಯನ್ನು ಜನ ತಮ್ಮ ಪುತ್ರ ಅಭಿ ಮೇಲೆ ತೋರಿಸ್ತಾರೆ ಅನ್ನೋದು ನನ್ನ ನಂಬಿಕೆ.
ಇದು ಅಭಿ ನಟಿಸಿರೋ ಮೊದಲ ಸಿನಿಮಾ ಆದ್ದರಿಂದ ತಾಯಿಯಾಗಿ ನನಗೆ ಢವಢವ ಅನ್ನಿಸ್ತಿದೆ. ಆದ್ರೆ ಈಗ ಅಂಬರೀಶ್ ಇಲ್ಲ. ನಾನೇ ತಂದೆ-ತಾಯಿ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ಮಾಡಿದ್ದೀನಿ. ಜನರೂ ಕೂಡ ಅಭಿಗೆ ಪ್ರೋತ್ಸಾಹ ನೀಡ್ತಾರೆ ಅಂತ ಅಂದುಕೊಂಡಿದ್ದೀನಿ. ಇನ್ನು ಅಂಬಿಗೆ ಒಲವಿನ ಉಡುಗೊರೆ ಸಿನಿಮಾದ ಹಾಡು ಅಂದ್ರೆ ತುಂಬಾ ಇಷ್ಟ. ಅದಕ್ಕಾಗಿಯೇ ಅಮರ್ ಚಿತ್ರದಲ್ಲೂ ಈ ಹಾಡು ಇರಲೇಬೇಕು ಅಂತ ಹಾಕಿಸಿರುವೆ ಅಂತ ಸುಮಲತಾ ಹೇಳಿದ್ರು.
ಇನ್ನು ಸಿನಿಮಾದ ಪ್ರಮೋಷನ್ ಗಾಗಿ ಅಭಿಷೇಕ್ ರಾಜ್ಯ ಪ್ರವಾಸ ಮಾಡ್ತಾರೆ ಅಂತ ಸುಮಲತಾ ಇದೇ ವೇಳೆ ಮಾಹಿತಿ ನೀಡಿದ್ರು.
ಅಮರ್ ಚಿತ್ರ ನೋಡಿ ಪ್ರೇಕ್ಷಕರು ಏನ್ ಹೇಳ್ತಾರೆ…? ಮಿಸ್ ಮಾಡದೇ ಈ ವಿಡಿಯೋ ನೋಡಿ