Thursday, October 17, 2024

Latest Posts

Summer Special: ತಂಪಾದ ಆರೋಗ್ಯಕರ ಮತ್ತು ರುಚಿಕರವಾದ ಲಸ್ಸಿ ರೆಸಿಪಿ..

- Advertisement -

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಲಸ್ಸಿ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲಿಗೆ ಲಸ್ಸಿಗೆ ಬೇಕಾಗಿರೋ ಬೇಸ್ ತಯಾರಿಸಬೇಕು. ಒಂದು ಬೌಲ್‌ಗೆ ಎರಡು ಕಪ್ ಮೊಸರು, ಎರಡು ಕಪ್ ನೀರು ಹಾಕಿ ಮಿಕ್ಸ್ ಮಾಡಿ, 5 ನಿಮಿಷ ಮಜ್ಜಿಗೆ ಕಡಿದ ಹಾಗೆ ಕಡಿಯಬೇಕು. ಕೈಯಿಂದಲೇ ಕಡಿದರೆ ಒಳಿತು. ಈ ಕೆಲಸಕ್ಕೆ ಯಾವುದೇ ಕಾರಣಕ್ಕೂ ಮಿಕ್ಸರ್ ಬಳಸಬೇಡಿ. ಈಗ ಕಡಿದಿಟ್ಟುಕೊಂಡ ಮೊಸರಿಗೆ ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ ಸೇರಿಸಿ, ಮತ್ತೆ ಕಡಿಯಿರಿ. ಈಗ ಬೇಸ್ ರೆಡಿ. ಈ ಬೇಸನ್ನ 15 ನಿಮಿಷ ಬದಿಗಿರಿಸಿ, ಲಸ್ಸಿ ತಯಾರಿಸಿಕೊಳ್ಳಲು ಬೇಕಾಗುವ ಪ್ಯೂರಿ ತಯಾರಿಸಿಕೊಳ್ಳಬೇಕು.

ಕೇಸರ್ ಪಿಸ್ತಾ ಲಸ್ಸಿ ತಯಾರಿಸಲು, ಎರಡು ದೊಡ್ಡ ಸ್ಪೂನ್ ಹಾಲನ್ನ ಚೆನ್ನಾಗಿ ಬಿಸಿ, ಮಾಡಿ, ಅದಕ್ಕೆ ಚಿಟಿಕೆ ಕೇಸರಿ ದಳ ಸೇರಿಸಿ. ಕೇಸರಿ ಹಾಲು ತಯಾರಿಸಿ. 10ರಿಂದ 15 ಪಿಸ್ತಾವನ್ನ ಕೊಂಚ ಬೇಯಿಸಿ, ಆ ಪಿಸ್ತಾವನ್ನ ಕೇಸರಿ ಹಾಲಿನೊಂದಿಗೆ ಬೆರೆಸಿ ಜ್ಯೂಸರ್ ಜಾರ್‌ಗೆ ಹಾಕಿ, ತರಿ ತರಿಯಾಗಿ ಪೇಸ್ಟ್ ತಯಾರಿಸಿ. ಒಂದು ಗ್ಲಾಸ್‌ಗೆ ತಯಾರಿಸಿ ಇಟ್ಟುಕೊಂಡ ಲಸ್ಸಿ ಬೇಸ್‌ನಲ್ಲಿ ಎರಡು ಸೌಟ್ ಲಸ್ಸಿಯನ್ನ ಹಾಕಿ, ಅದಕ್ಕೆ ಎರಡು ಸ್ಪೂನ್ ಪಿಸ್ತಾ ಕೇಸರಿ ಹಾಲಿನ ಪೇಸ್ಟ್ ಹಾಕಿ, ಮಿಕ್ಸ್ ಮಾಡಿ. ನಂತರ ಮತ್ತೆ ಸ್ವಲ್ಪ ಲಸ್ಸಿ ಬೇಸ್ ಹಾಕಿ, ಐಸ್‌ ಕ್ಯೂಬ್ಸ್ ಹಾಕಿ ಮಿಕ್ಸ್ ಮಾಡಿದ್ರೆ ಕೇಸರ್‌, ಪಿಸ್ತಾ ಲಸ್ಸಿ ರೆಡಿ.

ಮ್ಯಾಂಗೋ ಲಸ್ಸಿ ಮಾಡಲು, ಅರ್ಧ ಕಪ್ ಮಾವಿನ ಹಣ್ಣಿನ ಹೋಳು ಮತ್ತು ಕೊಂಚ ನೀರು ಸೇರಿಸಿ, ಪೇಸ್ಟ್ ತಯಾರಿಸಿಕೊಳ್ಳಿ. ಒಂದು ಸ್ಪೂನ್ ಮ್ಯಾಂಗೋ ಪ್ಯೂರಿಯನ್ನ ಒಂದು ಗ್ಲಾಸ್‌ಗೆ ಹಾಕಿ, ಲಸ್ಸಿ ಬೇಸ್ ಸೇರಿಸಿ ಮಿಕ್ಸ್ ಮಾಡಿದ್ರೆ ಮ್ಯಾಂಗೋ ಲಸ್ಸಿ ರೆಡಿ. ಇದಕ್ಕೆ ಸಣ್ಣದಾಗಿ ತುಂಡರಿಸಿದ ಮಾವಿನ ಹಣ್ಣಿನ ಹೋಳುಗಳನ್ನ ಸೇರಿಸಿದ್ರೆ, ಟೆಸ್ಟ್ ಇನ್ನೂ ಸಖತ್ ಆಗಿರತ್ತೆ.

ಟೆಂಡರ್ ಕೊಕೊನಟ್ ಅಂದ್ರೆ ಎಳನೀರಿನ ಲಸ್ಸಿ ತಯಾರಿಸಲು, ಒಂದು ಕಪ್ ಎಳನೀರು, ಅದರ ಜೊತೆ ಸಿಗುವ ತೆಂಗಿನ ಕಾಯಿಯ ತುಂಡುಗಳನ್ನ ಸೇರಿಸಿ, ತರಿತರಿಯಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಒಂದು ಗ್ಲಾಸ್‌ಗೆ ಎರಡು ಸ್ಪೂನ್ ತೆಂಗಿನ ಕಾಯಿ ಪೇಸ್ಟ್ ಹಾಕಿ, ಅದಕ್ಕೆ ಲಸ್ಸಿ ಬೇಸ್ ಹಾಕಿ ಮಿಕ್ಸ್ ಮಾಡಿದ್ರೆ, ಟೆಂಡರ್ ಕೊಕೊನಟ್ ಲಸ್ಸಿ ರೆಡಿ. ನಿಮಗೆ ಬೇಕಾದ್ದಲ್ಲಿ, ಇದನ್ನ ಫ್ರಿಜ್‌ನಲ್ಲಿರಿಸಿ, ತಂಪು ತಂಪಾಗಿ ತಯಾರಿಸಿ ಕುಡಿಯಬಹುದು.

- Advertisement -

Latest Posts

Don't Miss