- Advertisement -
Recipe: ಇಂದು ನಾವು ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಅಂತಾ ತಿಳಿಯೋಣ.
ಬೇಕಾಗುವ ಸಾಮಗ್ರಿ: 4ರಿಂದ 5 ಚಿಕ್ಕ ಚಿಕ್ಕ ಮಾವಿನ ಹಣ್ಣು(ಕಾಟು ಮಾವಿನ ಹಣ್ಣು), ಒಂದು ಕಪ್ ಕೊಬ್ಬರಿ ತುರಿ, ಉಪ್ಪುು, ಕೊಂಚ ಬೆಲ್ಲ, ಸಾಸಿವೆ, 2ರಿಂದ 3 ಒಣಮೆಣಸು, ಎಣ್ಣೆ ಇವಿಷ್ಟು ಮಾವಿನ ಹಣ್ಣಿನ ಸಾಸಿವೆ ಮಾಡಲು ಬೇಕಾಗುವ ಸಾಮಗ್ರಿ.
ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, 1 ಸ್ಪೂನ್ ಸಾಸಿವೆ, ಒಣಮೆಣಸು, ಹಾಕಿ ಮಸಾಲೆ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕೊಂಚ ಮ್ಯಾಶ್ ಮಾಡಿಕೊಳ್ಳಿ, ಇದಕ್ಕೆ ಅವಶ್ಯಕತೆ ಇದ್ದಷ್ಟು ಉಪ್ಪು, ರುಬ್ಬಿಕೊಂಡ ಮಸಾಲೆ, ಒಗ್ಗರಣೆ ಹಾಕಿದರೆ, ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ ರೆಡಿ.
- Advertisement -