Movie News: ಸಿನಿಮಾ ಇಂಡಸ್ಟ್ರಿ ಅಂದ್ರೆ ಹಾಗೆ. ಇಲ್ಲಿ ಹಲವರು ಬಂದು, ಖ್ಯಾತಿ ಗಳಿಸಿ, ಹಣವನ್ನೂ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವರು ಆಸೆಯಿಂದ ಬಂದು ನಿರಾಸೆಯಿಂದ ಹೋಗುತ್ತಾರೆ.
ಅದೇ ರೀತಿ ಎಷ್ಟೋ ಘಟನೆಗಳು ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದಿದೆ. ಸಿನಿಮಾ ಮಾಡಲು ಬಂದ ನಿರ್ದೇಶಕರು ಸಾಲ ಮಾಡಿ, ಮನೆ ಮಾರಿಕೊಳ್ಳುವುದು. ನಟಿಸಬೇಕು ಎಂದು ಬಂದು, ಕಾಸ್ಟಿಂಗ್ ಕೌಚ್‌ಗೆ ಹೆದರಿ, ಮರ್ಯಾದಸ್ಥರು ಮನೆ ಸೇರಿಕೊಳ್ಳುವುದು, ತುಂಬಾ ಸಿನಿಮಾಗಳಲ್ಲಿ ಸಹಾಯ ಮಾಡಿದ್ದರೂ ಕೂಡ, ಪೇಮೆಂಟ್ ಸಿಗದೇ, ನಿರಾಸೆಯಿಂದ ದೂರ ಹೋಗಿಬಿಡುವ ಎಷ್ಟೋ ಕಲಾವಿದರಿದ್ದಾರೆ.
ಅಂಥ ಉತ್ತಮ ಪ್ರಭೆಗಳಲ್ಲಿ ಗಾಯಕ ಶಂಕರ್ ಶಾನುಭಾಗ್ ಕೂಡ ಒಬ್ಬರು. ಶಂಕರ್ ಶಾನುಭಾಗ್ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಹಲವು ಕೋರಸ್‌ಗಳಿಗಂ ಕಂಠದಾನ ಮಾಡಿದ್ದರೂ ಕೂಡ, ಅವರಿಗೆ ಸರಿಯಾಗಿ ಪೇಮೆಂಟ್ ಮಾಡಲಿಲ್ಲವೆಂದು ಆರೋಪಿಸಿದ್ದಾರೆ.
ಯುಟ್ಯೂಬ್ ಒಂದಕ್ಕೆ ಸಂದರ್ಶನ ನೀಡಿದ್ದ ಶಂಕರ್ ಶಾನುಭಾಗ್, ನಾನು ಬೆಂಗಳೂರಿನ ಶಂಕರಮಠದ ಬಳಿ ವಾಸವಿದ್ದೆ. ಹಂಸಲೇಖ ಅವರ 8ರಿಂದ 10 ಹಾಡಿಗೆ ಕೋರಸ್ ಹಾಡಿದ್ದೇನೆ. ಪೇಮೆಂಟ್ ನೀಡಲೇ ಇಲ್ಲ. ನನ್ನ ಮೂವರು ತಂಗಿಯರ ಮದುವೆ ಮಾಡಬೇಕಿತ್ತು. ಜೀವನದಲ್ಲಿ ಕಷ್ಟವಿತ್ತು. ಪೇಮೆಂಟ್ ಕೇಳಿದಾಗ, ಕೋಡೋಣ ಬಿಡೋ ಎಂದು ಹೇಳುತ್ತಿದ್ದರು. ಐದಾರು ಬಾರಿ ಕೇಳಿದರೂ ಹೀಗೆ ಹೇಳಿದರು.
ಬಳಿಕ ಕೊನೆಯ ಬಾರಿ ಕೇಳಿದಾಗ, ಸಿಟ್ಟಿನಿಂದ ನಿನಗೆಷ್ಟು ಕೋಟಿ ಕೊಡಬೇಕು ಹೇಳು ಎಂದು ಗದರಿದರು. ಆಗ ನಾನು ಕೈ ಮುಗಿದು, ಸರಿ ಸರ್ ಎಂದು ಹೇಳಿ ಬಂದವನು, ಇನ್ನೆಂದೂ ವಾಪಸ್ ಹೋಗಲಿಲ್ಲ ಎಂದು ಶಂಕರ್ ಶಾನುಭಾಗ್ ಹೇಳಿದ್ದಾರೆ. ಅಲ್ಲದೇ ನಾದಬ್ರಹ್ಮ ಎಂದರೆ ವಿಠ್ಠಲ ಮಾತ್ರ, ಆ ಬಿರುದು ಹಂಸಲೇಖಾಗೆ ಹೊಂದುವುದಿಲ್ಲವೆಂದು ಶಾನುಭಾಗ್ ಅಸಮಾಧಾನ ಹೊರಹಾಕಿದ್ದಾರೆ.