ಬೆಂಗಳೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ ನ ಉಪಾಧ್ಯಕ್ಷರಾಗಿ ಸುನೀಲ್ ಸಿರಸಂಗಿ ಅವರು ಆಯ್ಕೆಯಾಗಿದ್ದಾರೆ. ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ಅವರಣದಲ್ಲಿ ಕೆ ಎಸ್ ಡಿ ಎಂ ಎಫ್ ಅಸ್ತಿತ್ವಕ್ಕೆ ಬಂದಿದ್ದು ಇದರ ಉಪಾಧ್ಯಕ್ಷರಾಗಿ ಸುನಿಲ್ ಸಿರ್ಸಂಗಿ ಆಯ್ಕೆಯಾಗಿದ್ದು, ಮಾತನಾಡಿದ ಅವರು ಪ್ರಿಂಟ್ ಮೀಡಿಯಾ ಎಲೆಕ್ಟ್ರಾನಿಕ್ ಮೀಡಿಯಾ ಜನಪ್ರಿಯತೆ ಕೆಳಗಿಳಿಯುತ್ತಿದೆ. ಹಾಗೂ ದಿನದಿಂದ ದಿನಕ್ಕೆ ಡಿಜಿಟಲ್ ಮೀಡಿಯಾ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಜನರನ್ನು ತಲುಪುವ ಮಟ್ಟ ಹೆಚ್ಚಿದೆ. ಜೊತೆಗೆ ಒಂದು ಸಾಂಸ್ಥಿಕ ರೂಪ ಇರಲಿಲ್ಲ, ಈಗಾಗಲೇ ದೇಶದಲ್ಲಿ ಅಂತಹ ಸಂಘಟನೆಗಳಾಗಿವೆ ಆದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೆ ಎಸ್ ಡಿ ಎಂ ಎಫ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಸಂತೆ ಕಟ್ಟಿದರೆ ಸಾಲದು ಅದಕ್ಕಿರುವ ಸವಾಲುಗಳನ್ನು ನಿಭಾಯಿಸುವ, ವೃತ್ತಿಪರತೆ ಉಳಿಸಿಕೊಳ್ಳುವ ಹಾಗೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸವಾಲಿನ ಜೊತೆಗೆ ಈ ಸಂಸ್ಥೆ ಸಾಗುತ್ತದೆ ಎಂದು ಹೇಳಿದರು.