ತವರಿನಲ್ಲಿ ವಿಶ್ವಕಪ್ ಗೆದ್ದ ಆಂಗ್ಲ ಪಡೆ, ಕಡೆಗೂ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಸರಿ ಸುಮಾರು ಅರ್ಧ ಶತಮಾನದ ತನ್ನ ಕನಸನ್ನ ನೇರವೇರಿಸಿಕೊಳ್ಳುವಲ್ಲಿ ಇಂಗ್ಲೆಂಡ್ ಯಶಸ್ವಿ ಆಯ್ತು. ಈ ನಡುವೆ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿದ್ದಾದ್ರು ಹೇಗೆ ಅನ್ನೋ ಪ್ರಶ್ನೆ, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಯಾಕಂದ್ರೆ ರೋಚಕ ವಾಗಿದ್ದ ಫೈನಲ್ ಪಂದ್ಯ ಟೈ ಆಯ್ತು.. ನಂತರ ನಡೆದ ಸೂಪರ್ ಓವರ್ ಪಂದ್ಯವೂ ಟೈ ಆಯ್ತು. ಆದ್ರು ಆಂಗ್ಲ ಪಡೆ ವಿಶ್ವ ಚಾಂಪಿಯನ್ ಆಗಿದ್ದು ಹೇಗೆ…
ಯಸ್.. ಈ ಪ್ರಶ್ನೆ ಸಾಕಷ್ಟು ಅಭಿಮಾನಿಗಳನ್ನ ಕಾಡುತ್ತಿದೆ. ಹೌದು ನಿನ್ನೆ ಲಾರ್ಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನತ್ತಿದ ಇಂಗ್ಲೆಂಡ್, 50 ಓವರ್ ಗಳಲ್ಲಿ 241 ರನ್ ಗಳಿಗೆ ಆಲ್ ಔಟ್ ಆಯ್ತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಆಂಗ್ಲ ಪಡೆ, 15 ರನ್ ಗಳಿಸಿತ್ತು. ಉತ್ತರವಾಗಿ ಟಾರ್ಗೆಟ್ ಬೆನ್ನತ್ತಿದ ಕಿವೀಸ್ ಪಡೆ ಗೆಲುವಿಗೆ ಅಂತಿಮ ಎಸೆತದಲ್ಲಿ 2 ರನ್ ಬೇಕಿತ್ತು. ಆದ್ರೆ ಈ ಪ್ರಯತ್ನದಲ್ಲಿ ಗಪ್ಟಿಲ್ ರನ್ ಔಟ್ ಗೆ ಬಲಿಯಾದ್ರು. ಹಾಗಾಗಿ ಸೂಪರ್ ಓವರ್ ಕೂಡ ಟೈ ನಲ್ಲಿ ಅಂತ್ಯ ವಾಯಿತು. ಪರಿಣಾಮವಾಗಿ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನ ವಿಜಯಿ ಎಂದು ಘೋಷಣೆ ಮಾಡಲಾಯಿತು.
ಸೂಪರ್ ಓವರ್ ನಲ್ಲಿ ಗಳಿಸಿದ 2 ಬೌಂಡರಿ ಸೇರಿದಂತೆ, ಒಟ್ಟು ಪಂದ್ಯದಲ್ಲಿ ಇಂಗ್ಲೆಂಡ್, 24 ಬೌಂಡರಿ ಬಾರಿಸಿದ್ರೆ, ನ್ಯೂಜಿಲೆಂಡ್ ಕೇವಲ 14 ಬೌಂಡರಿ ಗಳನ್ನಷ್ಟೇ ಗಳಿಸಿತ್ತು. ಪರಿಣಾಮವಾಗಿ ವಿಶ್ವಕಪ್ ಕಪ್ ಕಿರೀಟ ಇಂಗ್ಲೆಂಡ್ ಮುಡಿಗೇರಿತು. ಐಸಿಸಿ ನಿಯಮದ ಪ್ರಕಾರ ಸೂಪರ್ ಒವರ್ ನಲ್ಲೂ ಫಲಿತಾಂಶ ಟೈ ಆದ್ರೆ, ಸೂಪರ್ ಓವರ್ ನಲ್ಲಿ ಸೇರಿದ ಬೌಂಡರಿ ಗಳು ಸೇರಿದಂತೆ, ಪಂದ್ಯದಲ್ಲಿ ಒಟ್ಟು ಅತಿ ಹೆಚ್ಚು ಬೌಂಡರಿ ಗಳಿಸಿದ್ದ ತಂಡವನ್ನ ವಿಜಯಿ ಎಂದು ಘೋಷಿಸಲಾಗುತ್ತದೆ.