- Advertisement -
ಬೆಂಗಳೂರು: ಎಚ್ ಡಿ ರೇವಣ್ಣ ಅವರ ಪುತ್ರ ಡಾ. ಸೂರಜ್ ರೇವಣ್ಣ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದು ಇಂದು ವಿಧಾನ ಪರಿಷತ್ ನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಹಾಸನ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಡಾ.ಸೂರಜ್ ರೇವಣ್ಣನವರು 18 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ ಹಾಗೂ 45 ಲಕ್ಷ 75 ಸಾವಿರ ಬೆಲೆಬಾಳುವ 1 ಕೆಜಿ ಚಿನ್ನಾಭರಣವನ್ನು ಹೊಂದಿದ್ದಾರೆ. ನನ್ನ ತಾತ ದೇವೇಗೌಡ, ಅಜ್ಜಿ ಚೆನ್ನಮ್ಮ, ಅತ್ತೆಯರು ಹಾಗೂ ಅಪ್ಪ, ಅಮ್ಮನಿಂದ 14 ಕೋಟಿ 97 ಲಕ್ಷ 74 ಸಾವಿರದ 989 ರೂಪಾಯಿಗಳನ್ನು ಸಾಲ ಪಡೆದಿದ್ದೇನೆ ಹಾಗೂ 3 ಕೋಟಿ 53 ಲಕ್ಷದ 16 ಸಾವಿರದ 463 ರೂಪಾಯಿಯಷ್ಟು ಚಿರಾಸ್ತಿಯನ್ನು ಹೊಂದಿದ್ದು, 61 ಕೋಟಿ 68 ಲಕ್ಷದ 22 ಸಾವಿರದ 761 ರೂಪಾಯಿ ಸ್ಥಿರಾಸ್ತಿಯನ್ನು ಹೊಂದಿದ್ದೇನೆ ಎಂದು ಹಾಸನದಲ್ಲಿ ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಆಸ್ತಿಯ ವಿವರವನ್ನು ತಮ್ಮ ತಾಯಿ ತಂದೆ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ.
- Advertisement -