ಜೈಪುರ: ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮಾರ್ಟಿನ್ ಗಪ್ಟಿಲ್ ಹಾಗೂ ಮಾರ್ಕ್ ಚಾಪ್ಮನ್ ಉತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ 6 ವಿಕೆಟ್ ಕಳೆದುಕೊಂಡು. 164 ರನ್ ಬಾರಿಸಿದ್ದು, ಭಾರತಕ್ಕೆ ಗೆಲ್ಲಲು 165 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆರಂಭದಿಂದಲೂ ಅಬ್ಬರಿಸಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಶುಭಾರಂಭ ನೀಡಿದರು. 14 ಬಾಲ್ ಗಳಿಗೆ 15 ರನ್ ಬಾರಿಸಿ ಮಿಚೆಲ್ ಸಂಟ್ ನರ್ ಅವರ ಬೌಲಿಂಗ್ ನಲ್ಲಿ ಮಾರ್ಕ್ ಚಾಪ್ಮನ್ ಗೆ ಕ್ಯಾಚ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಅದ್ಭುತ ಇನಿಂಗ್ಸ್ ಆಡಿದರು. ಸೂರ್ಯಕುಮಾರ್ 40 ಬಾಲ್ ಗಳಿಗೆ 62 ರನ್ ಬಾರಿಸಿ ಹೀರೋ ಆದರು.
ಸೂರ್ಯ ಔಟಾದ ನಂತರ 20 ಬಾಲ್ ಗಳಿಗೆ 22 ರನ್ ಗಳ ಅವಶ್ಯಕತೆ ಇತ್ತು. ಆದರೆ ಕೊನೆಯ ಓವರಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ಕೀವಿಸ್ ಪಡೆ ರನ್ ಗಳಿಕೆಗೆ ಕಡಿವಾಣ ಹಾಕಿತು. ಶ್ರೇಯಸ್ ಅಯ್ಯರ್ 18.6 ಓವರ್ ನಲ್ಲಿ 8 ಬಾಲ್ ಗಳಿಗೆ 5 ರನ್ ಹೊಡೆದು ಟೀಮ್ ಸೌಥಿ ಬೌಲಿಂಗ್ ನಲ್ಲಿ ಟ್ರೆಂಟ್ ಬೋಲ್ಟ್ ಗೆ ಕ್ಯಾಚ್ ಒಪ್ಪಿಸಿದರು. ಪಂದ್ಯ ಕೊನೆಯ ಓವರ್ ಗೆ ಸಾಗಿತು. ಮೊದಲ ಚೆಂಡನ್ನು ಬೌಂಡರಿಗೆ ಅಟ್ಟಿದ ವೆಂಕಟೇಶ ಅಯ್ಯರ್ ಹಾಗೆಯೇ ಔಟಾದರು. ಆದರೆ ಉಳಿದ ರನ್ ಗಳನ್ನು ಗಳಿಸಿಕೊಟ್ಟ ಅಜೇಯ ಪಂತ್ ಭಾರತಕ್ಕೆ ಐದು ವಿಕೆಟ್ ಗಳ ಜಯತಂದಿಟ್ಟರು. ಟಿ 20 ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದು ಲೀಡ್ ಸಾಧಿಸಿದೆ. ಟಿ 20 ವಿಶ್ವಕಪ್ ನಂತರ ನಾಯಕತ್ವ ತ್ಯಜಿಸುತ್ತೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದು ಮೊದಲ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದಾರೆ.