Hassan News: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಭಾರತ ದೇಶ ಸೇರಿದಂತೆ ವಿದೇಶದಲ್ಲೂ ಸಹ ಭಾರತೀಯ ಸಂಸ್ಕೃತಿಯ ಕಲೆಯ ಶಾಸ್ತ್ರೀಯ ನೃತ್ಯಗಳಿಗೆ ವಿಶೇಷ ಸ್ಥಾನಮಾನ ಕೊಡುವ ಮೂಲಕ ನಮ್ಮ ನೃತ್ಯೋತ್ಸವ ಕಾರ್ಯಕ್ರಮವನ್ನು ಗೌರವ ಮತ್ತು ಹೆಮ್ಮೆಯಿಂದ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ಭಾರತದ ಪವಿತ್ರ ಯಾತ್ರಾಸ್ಥಳ ಹಾಗೂ ಪ್ರವಾಸೋದ್ಯಮ ಸ್ಥಳಗಳಲ್ಲಿ ಎಂಟು ವಿಧದ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಇಂಡೋನೇಷ್ಯಾ ದೇಶದಲ್ಲಿ 59ನೇ ಅಂತರಾಷ್ಟ್ರೀಯ ನೃತ್ಯೋತ್ಸವಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ.
ಈ ಸಂದರ್ಭದಲ್ಲಿ ರಾಯಲ್ ಪ್ಯಾಲೇಸ್ ನಲ್ಲಿ ಆಯೋಜನೆ ಮಾಡಿದ ಸಾಧಕರಿಗೆ ಔತಣ ಕೂಟ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಂಡೋನೇಷ್ಯಾದ ಪ್ರಥಮ ಪ್ರಜೆ ರಾಜವಂಶಸ್ಥರ ರಾಜ್ಯಪಾಲರಾದ ರಾಯಲ್ ಹೈನೆಸ್ ಡಾ ಶ್ರೀ ಗುಸ್ತಿ ನ್ಗುರಾ ಆರ್ಯ ವೇದಕರ್ಣ ಮಹೇಂದ್ರದತ್ತ ವೇದಸ್ತೇರಪುತ್ರ ಸುಯಾಸ, ಸೆನೆಟರ್ ರವರು ಚನ್ನರಾಯಪಟ್ಟಣದ ಗಿನ್ನಿಸ್ ದಾಖಲೆ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ .ಸ್ವಾತಿ ಪಿ ಭಾರದ್ವಾಜ್ ರವರ ಸಾಧನೆಯ ಹಾದಿಯನ್ನು ಗುರುತಿಸಿದ್ದಾರೆ.
ಇಂಡೋನೇಷಿಯಾ ಸರ್ಕಾರದ ವತಿಯಿಂದ ರಾಜ್ಯಪಾಲರ ಕಚೇರಿಗೆ ಕರೆಸಿ ಜಮ್ ಆಫ್ ಇಂಡಿಯಾ ಪ್ರಶಸ್ತಿಯನ್ನು ರಾಜ್ಯಪಾಲರ ಸಹಿಯೊಂದಿಗೆ ಪ್ರಶಸ್ತಿ ಫಲಕ ಹಾಗು ಇಂಡೋನೇಷಿಯಾ ಸಂಪ್ರದಾಯಿಕ ಲಕ್ಷ್ಮಿ ಚಿನ್ನದ ಕಾಯಿನ್ ನೀಡಿದ ರಾಜ್ಯಪಾಲರಿಗೆ ಭಾರತದ ಕಲೆ ಇಂಡೋನೇಷಿಯಾ ಸಂಬಂಧ ಹೀಗೆ ಇರಲಿ ಎಂದು ನಮಸ್ಕಾಸಿದ ಡಾ. ಸ್ವಾತಿ ಈ ಸಂದರ್ಭದಲ್ಲಿ ಗ್ಲೋಬಲ್ ಎಕನಾಮಿಕ್ ಫೋರಮ್ ಡಾ.ಹರಿಕೃಷ್ಣ ಮಾರನ್ ಹಾಗು ಇತರರು ಇದ್ದರು.
ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಪ್ರತಿಫಲ: ರ್ಯಾಂಕಿಂಗ್‌ನಲ್ಲಿ 1ರಿಂದ 5ನೇ ಸ್ಥಾನಕ್ಕಿಳಿದ ಭಾರತ
ಅತ್ತೆ ತನ್ನ ಮೇಕಪ್ ಕಿಟ್ ಬಳಸಿದ್ದಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಸೆ