ತುಮಕೂರು: ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿ ಕುರುಬರಹಳ್ಳಿಯಲ್ಲಿ ಬರ್ಬರವಾಗಿ ಮಹಿಳೆ ಕೊಲೆಗಾಗಿದ್ದಾಳೆ. ಆಶಾ(29) ಕೊಲೆಯಾದ ಮಹಿಳೆ. ಕುರುಬರಹಳ್ಳಿ ಗ್ರಾಮದ ರವಿಕುಮಾರ್ ಎಂಬುವರನ್ನು ಇತ್ತೆಚೆಗೆ ಆಶಾ ವಿವಾಹವಾಗಿದ್ದಳು. ಪಕ್ಕದ ತೋಟದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಶಾ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನ ಶಿವರ ಪೋಲಿಸರು ಭೇಟಿ...
ಕಲಬುರಗಿ: ಕಲಬುರಗಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಭಿಯಾನ ಪ್ರಾರಂಭಿಸಿದ್ದು, ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆಂದು ಅವರ ಫೋಟೋ ಇರುವ ಪೋಸ್ಟ್ ರನ್ನುಕಲಬುರಗಿ ಜಿಲ್ಲೆಯ ಚಿತ್ತಾಪುರದ ಹಲವೆಡೆ ಅಂಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ “ಪೇ ಸಿಎಂ” “ಸೇ ಸಿಎಂ” ಎಂದು ಅಭಿಯಾನ ಪ್ರಾರಂಭಿಸಿತ್ತು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಡಿಕೆ ಶಿವುಕುಮಾರ್ ರಾಜ್ಯವನ್ನು ಲೂಟಿ ಮಾಡಿದ...
ರಾಮನಗರ: ಉತ್ಪನ್ನಗಳ ಬೇಡಿಕೆ ಕುಸಿತ ಹಿನ್ನೆಲೆ, ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಡದಿಯಲ್ಲಿರುವ ಉತ್ಪದನಾ ಘಟಕದ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ ಗಳ ಉತ್ಪಾದನೆ ಸ್ಥಗಿತಗೊಳಿಸಿದೆ.
ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದರಿಂದ ಕಂಪನಿ ಈ ಕ್ರಮ ಕೈಗೊಂಡಿದ್ದು,ಕಾರ್ಖಾನೆಯಲ್ಲಿರುವ ತನ್ನ 6 ಕಾರ್ಮಿಕರನ್ನು ನವೆಂಬರ್ 5ರಿಂದ ಸೇವೆಯಿಂದ ತೆಗೆದಿದೆ. ಕಂಪನಿಯಲ್ಲಿ ಕೆಲೆಸ ಮಾಡುತ್ತಿದ್ದ ಕೆಲಸಗಾರರಿಗೆ ...
ಮಂಗಳೂರು: ಖಾಸಗಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಅವರಿಗೆ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನೀಡಿರುವ ಹೇಳಿಕೆ ಹಿನ್ನೆಲೆ ಕೆಲವರು ಸಾಮಾಜಿಕ ಜಾಲತಾಣಲ್ಲಿ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಅವರ ಸಂಬಂಧಿಕರು ದೂರು ದಾಖಲಿಸಿದ್ದಾರೆ ಎಂದು ನಗರ...
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ಕೃಷ್ಣ ಕುಮಾರ್ ಪಾಂಡೆಯವರು ಮೆರವಣಿಗೆ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇವರು ಮಹಾರಾಷ್ಟ್ರದ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕೃಷ್ಣ ಕುಮಾರ್ ಪಾಂಡೆಯವರು ರಾಷ್ಟ್ರಧ್ವಜವನ್ನು ಹಿಡಿದು ಮೆರಣಿಗೆಯಲ್ಲಿ ನಡೆಯುತ್ತಿದ್ದರು, ನಂತರ ಧ್ವಜವನ್ನು ಸಹೋದ್ಯೋಗಿಗೆ ಕೊಟ್ಟು ಅಲ್ಲಿಂದ ಹಿಂದೆ ಸರಿಯುತ್ತಿಂದತೆಯೇ ಕುಸಿದುಬಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದರು ಅವರು ಬದುಕುಳಿಯಲಿಲ್ಲ ಎಲ್ಲಾ...
ಹಾಸನ : ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಶಕಗಳಿಂದಲೂ ಜನರು ಸರ್ಕಾರವನ್ನು ಒತ್ತಾಯಿಸುತ್ತಿದೆ. ಕೊನೆಗೆ ಜನರ ಕೂಗಿಗೆ ಮಣಿದ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿದೆ. ಈಗಾಗಲೇ ಅಧ್ಯಯನ ಆರಂಭವಾಗಿದ್ದು, ನಾಳೆ ಮುಕ್ತಾಯವಾಗಲಿದೆ. ಎಂಟು ಜನರ ತಂಡ ಅಧ್ಯಯನ ನಡೆಸುತ್ತಿದ್ದಾರೆ.
ಕಳೆದ 2 ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದ್ದು,...
ಕೊಪ್ಪಳ: ಹುಲಿಹೈದರ್ ಗುಂಪು ಘರ್ಷಣೆ ವೇಳೆ ಗ್ರಾಮ ತೊರೆದಿದ್ದ ನಾಗರಾಜ (25) ಎಂಬ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಗಾವತಿ ನಗರ ಪೋಲಿಸರು ಸ್ಥಳಕ್ಕ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಘರ್ಷಣೆ ನಂತರ ನಾಗರಾಜ ಬಸವಣ್ಣ ವೃತ್ತದ ಬಳಿಯ ಸಂಬಂಧಿಕರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೊಹರಂ ಹಬ್ಬದ ಮಾರನೇ ದಿನ ಹುಲಿಹೈದರ್ ಗ್ರಾಮದಲ್ಲಿ ವಾಲ್ಮೀಕಿ...
ಬೆಂಗಳೂರು: 16 ವರ್ಷ ದಾಟಿದ ಬಾಲಕಿಯರ ಪ್ರೇಮ ಪ್ರಕರಣಗಳು ಹೆಚ್ಚುತ್ತಿದ್ದು, ಬಾಲಕಿಯರ ಲೈಂಗಿಕ ಸಂಪರ್ಕದ ವಯೋಮಿತಿ ಕುರಿತು ಮರು ಪರಿಶೀಲಸಬೇಕು ಎಂದು ಹೈಕೋರ್ಟ್ ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿದೆ.
ಪೋಕ್ಸೊ ಕಾಯ್ದೆ ಅನುಸಾರ ಲೈಂಗಿಕ ಸಂಪರ್ಕ ಹೊಂದಲು 18 ವರ್ಷ ತುಂಬಿರಬೇಕು. ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದಲೇ ಭಾರತೀಯ ದಂಡ ಸಂಹಿತೆ 1860(ಐಪಿಸಿ) ಹಾಗೂ ಪೋಕ್ಸೊ...
ರಾಯಚೂರು: ವಿದ್ಯುತ್ ಉತ್ಪಾದನಾ ವೇಳೆ ಕಲ್ಲಿದ್ದಲು ಸಾಗಿಸುವ ಕೋಲ್ ಬೆಲ್ಟ್ ಹೊತ್ತಿ ಉರಿದಿದೆ. ಆರ್ ಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಕೇಂದ್ರದಲ್ಲಿ ಈ ಅವಘಡ ನಡೆದಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸುವುದರ ಜೊತೆಗೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿತು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ...
ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ. 2013ರಲ್ಲಿ ಮುಜಾಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಕ್ರಮ್ ಸೈನಿ ಅವರನ್ನು ಜನಪ್ರತಿನಿಧಿನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮುಜಾಫರ್ ನಗರ ಶಾಸಕ ಜನಪ್ರತಿನಿಧಿ ನ್ಯಾಯಾಲಯ ವಿಕ್ರಂಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅ.11ರಿಂದ...