Wednesday, October 21, 2026

]karnataka tv

ಸಿದ್ದು ನಂತರ ಜಾರಕಿಹೊಳಿಗೆ ನಾಯಕತ್ವ : ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್

ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆಯ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್‌ ದೇವಸ್ಥಾನ ಭೇಟಿಗಳಲ್ಲಿ ತೊಡಗಿಕೊಂಡಿರುವಾಗ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಸ್ಫೋಟಕ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ರಾಜಕೀಯ ಬದುಕಿನ ಕೊನೆ ಹಂತದಲ್ಲಿ ಇದ್ದಾರೆ ಎಂಬ ಹೇಳಿಕೆಯಿಂದ ರಾಜಕೀಯ ತಾಪಮಾನ ಏರಿದೆ. ಯತೀಂದ್ರ ಅವರು ಬೆಳಗಾವಿ ಜಿಲ್ಲೆಯ ಕಪ್ಪಲಗುದ್ದಿಯಲ್ಲಿ...

ದಶಕಗಳ ಬಳಿಕ ಮೇಲುಕೋಟೆಯಲ್ಲಿ ರಾಜಮುಡಿಯಂದೇ ‘ಅಷ್ಟ ತೀರ್ಥೋತ್ಸವ’

ಅನೇಕ ದಶಕಗಳ ಬಳಿಕ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಕ್ಟೋಬರ್‌ 31ರಂದು ರಾಜಮುಡಿ ಉತ್ಸವ ಮತ್ತು ಅಷ್ಟತೀರ್ಥೋತ್ಸವ ಒಂದೇ ದಿನ ನಡೆಯಲಿದ್ದು, ಭಕ್ತರಿಗೆ ಅಪರೂಪದ ಧಾರ್ಮಿಕ ಕ್ಷಣವಾಗಲಿದೆ. ಸಾಮಾನ್ಯವಾಗಿ ಅಷ್ಟತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ನಡೆಯುತ್ತಿತ್ತು. ನಂತರ ಆರನೇ ತಿರುನಾಳ ದಿನ ಅಷ್ಟತೀರ್ಥೋತ್ಸವ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ನಕ್ಷತ್ರದ ಸಂಯೋಗದಿಂದ ಎರಡೂ ಉತ್ಸವಗಳು ಒಂದೇ...

3,108 ಮೆಟ್ಟಿಲುಗಳನ್ನು ಏರಿದ ಸಂಸದ ಯದುವೀರ್ ಒಡೆಯರ್!

ಮೈಸೂರು – ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಮೊದಲ ಬಾರಿಗೆ ಕಾಲ್ನಡಿಗೆಯಲ್ಲಿ ಏರಿ ದೇವರ ದರ್ಶನ ಪಡೆದರು. ಒಟ್ಟು 3,108 ಮೆಟ್ಟಿಲುಗಳಿರುವ ಈ ಪವಿತ್ರ ಬೆಟ್ಟ, ನೈಸರ್ಗಿಕ ಸೌಂದರ್ಯ ಮತ್ತು ಭಕ್ತಿಭಾವದ ಮಿಶ್ರಣವಾಗಿದ್ದು, ಮುಂಜಾನೆ ಮಂಜುಮೋಡದಿಂದ ಆವರಿತವಾಗಿತ್ತು. ಸಂಸದರು ಬೆಳಗ್ಗಿನ ಜಾವವೇ ಆಗಮಿಸಿ, ಸ್ಥಳೀಯ ಭಕ್ತರೊಂದಿಗೆ...

ನಾನು ಪ್ರಾಯೋಜಕ ಹೌದು… RSS ಹಣದ ಮೂಲ ತೋರಲಿ – ಖರ್ಗೆ ಸವಾಲು

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ದಲಿತ ಸಂಘಟನೆಗಳಿಗೆ ನಾನು ಪ್ರಾಯೋಜಕನೆಂದುಕೊಳ್ಳಿ, ಆದರೆ ಆರ್‌ಎಸ್‌ಎಸ್‌ಗೆ ಯಾರಿದ್ದಾರೆ? ಅವರಿಗೆ ಹಣ ಎಲ್ಲಿಂದ ಬರುತ್ತದೆ? ಎಂದು ಸವಾಲು ಹಾಕಿದರು. ನೋಂದಣಿ ಇಲ್ಲದ ಸಂಸ್ಥೆಯಾಗಿರುವ ಆರ್‌ಎಸ್‌ಎಸ್‌ ತನ್ನ ಹಣದ ಮೂಲವನ್ನು ಸಾರ್ವಜನಿಕವಾಗಿ ಹೇಳಲಿ ಎಂದು ಅವರು ಒತ್ತಾಯಿಸಿದರು. ಕಲ್ಲು ತೂರಾಟ ಪ್ರಕರಣ ವಾಪಸ್‌ ಪಡೆದ ಬಗ್ಗೆ...

ನಾನು ಹೆಮ್ಮೆಯ ಕನ್ನಡಿಗಳು : ಮಜುಂದಾರ್‌ ಶಾ ತಿರುಗೇಟು

ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ರಾಶಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉದ್ಯಮಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಸರ್ಕಾರ–ಐಟಿ ವಲಯದ ನಡುವಿನ ಟ್ವೀಟ್‌ ವಾರಿಗೆ ಕಾರಣವಾಯಿತು. ನಾನೇ ಬೆಂಗಳೂರಿನ 10ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂಬ ಅವರ ಟ್ವೀಟ್ ನಂತರ, ಅವರು ಕನ್ನಡದವರಲ್ಲ ಎಂಬ ಚರ್ಚೆಯೂ...

ಚುನಾವಣೆ ಮುನ್ನ ಮೈತ್ರಿ ಬಲ : ಕಾಂಗ್ರೆಸ್‌ಗೆ BJP-JDS ಸವಾಲು!

ಹೊಸದಾಗಿ ರಚನೆಯಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷಗಳು ಸಮನ್ವಯ ಸಮಿತಿಗಳನ್ನು ರಚಿಸಲು ನಿರ್ಧರಿಸಿವೆ. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೇಟಿ ಮಾಡಿ, ಚುನಾವಣಾ ತಯಾರಿ ಕುರಿತು ಚರ್ಚಿಸಿದರು. ಮುಂದಿನ ಎಂಟು ದಿನಗಳಲ್ಲಿ ಸಮಿತಿ ಸದಸ್ಯರ ಹೆಸರುಗಳನ್ನು...

K.R ಪೇಟೆ ತಾಲೂಕಿನಲ್ಲಿ ಕಳ್ಳರ ಹಾವಳಿ : ದೇಗುಲ–ಮನೆ–ಅಂಗಡಿ ಎಲ್ಲೆಡೆ ಕಳ್ಳತನ!

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ, ಇತ್ತೀಚೆಗೆ ನಡೆದ ಸರಣಿ ಕಳ್ಳತನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೇಗುಲಗಳು, ಅಂಗಡಿಗಳು, ಹಾಗೂ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳಿಂದ ಸ್ಥಳೀಯರು ನಿದ್ದೆ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದೊಳಗೆ ನಾಲ್ಕು-ಐದು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಇತ್ತೀಚಿನ ಘಟನೆಯಾಗಿ, ತಾಲೂಕಿನ ಗಂಜೀಗೆರೆ...

ದುರಂತಕ್ಕೆ ತಿರುಗಿದ ದೀಪಾವಳಿ : ಮೂರು ಜೀವಗಳು ನೀರುಪಾಲು

ಮೈಸೂರಿನ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ಸಂಭವಿಸಿದ ದಾರುಣ ಘಟನೆದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿಯ ನಿವಾಸಿಗಳಾದ 16 ವರ್ಷದ ಅಯಾನ್‌, 13 ವರ್ಷದ ಆಜಾನ್‌ ಹಾಗೂ 14 ವರ್ಷದ ಲುಕ್ಮಾನ್‌ ಮೃತಪಟ್ಟಿದ್ದಾರೆ. ಅಯಾನ್‌ ಮತ್ತು ಆಜಾನ್‌ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ನಿಮಿತ್ತ...

ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು!

ಬಿಹಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳ ಮೂಲಕ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸಂಸದ ಬಿ.ವೈ. ರಾಘವೇಂದ್ರ ಅವರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಯಡಿಯೂರಪ್ಪ ಮತ್ತು...

HDK ಭೇಟಿಯಾಗಿದ್ದೇಕೆ BYV? ಮೈತ್ರಿಗಾಗಿ ಹೊಸ ಸೂತ್ರ!

ದೀಪಾವಳಿ ಹಬ್ಬದ ದಿನದಲ್ಲೇ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಹತ್ವದ ಸಭೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವನ್ನು ಬಲಪಡಿಸಲು ಎರಡು ಪಕ್ಷಗಳ ಸಂಯುಕ್ತ ಸಮನ್ವಯ ಸಮಿತಿ ರಚಿಸುವ ಯೋಜನೆ ರೂಪಿಸಲಾಗಿದೆ. ಸಭೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಪಕ್ಷದ ನಾಯಕರೊಂದಿಗೆ ಚರ್ಚಿಸಿ ಸಮಿತಿಯನ್ನು...
- Advertisement -spot_img

Latest News

ಬರದ ಆತಂಕ ದೂರವಾಗುತ್ತಾ? ಅಚ್ಚರಿ ಭವಿಷ್ಯ ನುಡಿದ ಕೋಡಿಶ್ರೀ!

ಪ್ರಸಕ್ತ ವರ್ಷದ ಹಿಂಗಾರು ಬೆಳೆ ಅತ್ಯಂತ ಸುಭಿಕ್ಷವಾಗಿರಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...
- Advertisement -spot_img