ಬೆಂಗಳೂರು: ನಿನ್ನೆಯಷ್ಟೇ ಮಂಡ್ಯದಲ್ಲಿ ಜನರ ಮೇಲೆ ಎಗರಾಡಿದ್ದ ಸಚಿವ ಡಿ.ಸಿ ತಮ್ಮಣ್ಣಾಗೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡೋ ಮೂಲಕ ನೀತಿ ಪಾಠ ಹೇಳಿದ್ದಾರೆ.
ಮಂಡ್ಯದಲ್ಲಿ ನಿನ್ನೆ ರಸ್ತೆ ಹಾಗೂ ಚರಂಡಿ ಕಾಮಗಾರಿ ಕುರಿತಾಗಿ ಮನವಿ ಮಾಡಿಕೊಂಡಿದ್ದ ಜನರನ್ನೇ ತರಾಟೆಗೆ ತೆಗೆದುಕೊಂಡಿದ್ದ ಸಚಿವ ತಮ್ಮಣ್ಣಗೆ ಸಿಎಂ ಕುಮಾರಸ್ವಾಮಿ ಬುದ್ಧಿವಾದ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿಎಂ-'...
ಮಂಡ್ಯ: ವಧುವಿಗೆ ವರ ತಾಳಿ ಕಟ್ಟೋದು ಸಂಪ್ರದಾಯ. ಆದ್ರೆ ಕೆಲವರು ಈ ಶಾಸ್ತ್ರ ಸಂಪ್ರದಾಯ ಮೀರಿ ವರನಿಗೆ ವಧುವೇ ತಾಳಿ ಕಟ್ಟಿರೋ ಅದೆಷ್ಟೋ ನಿದರ್ಶನಗಳನ್ನ ನೋಡಿದ್ದೇವೆ. ಆದ್ರೆ ಇಲ್ಲಿ ಗೊಂದಲಗೊಂಡ ಪುರೋಹಿತರೇ ವಧುವಿನ ಕೈಗೆ ತಾಳಿ ಕೊಟ್ಟು ವರನಿಗೆ ಕಟ್ಟವಂತೆ ಹೇಳಿರೋ ಪ್ರಸಂಗ ನಡೆದಿದೆ.
ಮಂಡ್ಯದಲ್ಲಿ ಈ ಘಟನೆ ನಡೆದಿದ್ದು ತಾಳಿ ಕಟ್ಟೋ ಶಾಸ್ತ್ರಕ್ಕೂ...
ದೆಹಲಿ: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ಈ ಕುರಿತು ದೆಹಲಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಾಧಿಕಾರ, ರಾಜ್ಯದ ಜಲಾಶಯದಲ್ಲಿ ಒಳಹರಿವು ಹೆಚ್ಚಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯಕ್ಕೆ ಸದ್ಯದ ಮಟ್ಟಿಗೆ...
ಮಂಡ್ಯ: ನಿಂತಿದ್ದ ಲಾರಿಗೆ ಕಾರು
ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿ ವೇಗವಾಗಿ ಚಲಿಸುತ್ತಿದ್ದ ಸ್ವಿಫ್ಟ್ ಕಾರು ಅಲ್ಲಿಯೇ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಕಿರಣ್ ಅಶೋಕ್, ಜಯದೇವ್ ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೃತರೆಲ್ಲರೂ ಕೇರಳ ಮೂಲದವರು ಎಂದು ತಿಳಿದು ಬಂದಿದೆ.ಮದ್ದೂರು...