ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಭಾನುವಾರವಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳಿಗೆ ತರಬೇತಿ ಪ್ರಾರಂಭವಾಗುತ್ತಿದೆ. ಈಗಾಗಲೇ ಬಹಳಷ್ಟು ಜನರು ಗಜಪಡೆ ನೋಡಲು ಅರಮನೆಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ ಸಂಜೆ ಆನೆಗಳಿಗೆ ಜಂಬೂ ಸವಾರಿ ಹೋಗುವ ರಸ್ತೆಗಳಲ್ಲಿ ವಾಕಿಂಗ್ ಕೂಡ ಮಾಡಿಸಲಾಗುತ್ತಿದೆ.
ಮೈಸೂರಿಗೆ ಬಂದ ದಸರಾ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು ಸಂಸ್ಕರಣೆಗೆ ಒಂದಿಂಚೂ ಜಾಗವಿಲ್ಲ.
ಪ್ರತಿ ಕೈಗಾರಿಕಾ ಪ್ರದೇಶದಲ್ಲಿಯೂ ಒಂದು ತ್ಯಾಜ್ಯ ವಸ್ತು ಸಂಸ್ಕರಣಾ ಘಟಕಕ್ಕೆ ಸ್ಥಳ ನೊಗದಿ ಮಾಡಬೇಕೆಂಬ ನಿಯಮವಿದ್ದರೂ ಅನುಷ್ಠಾನಗೊಳ್ಳದ ಪರಿಣಾಮ ಮೈಸೂರಿನಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿ...
ಒಕ್ಕಲಿಗ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಜಿ.ವಿ.ಸೀತಾರಾಮು ಅವರನ್ನು 15 ದಿನದ ಒಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಸಮುದಾಯದಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಯನಗರ ನೇಗಿಲಯೋಗಿ ಸಮಾಜಸೇಚಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಒಕ್ಕಲಿಗ ಅಭಿವೃದ್ಧಿಯ ಹಿತಚಿಂತಕರು ಹೆಸರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸೀತಾರಾಮು ವಿರುದ್ಧ ಸಾಮಾಜಿಕ...
ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಪ್ರಾರಂಭವಾಗಿದೆ. ನಾಡಹಬ್ಬದ ಪ್ರಮುಖ ಆಕರ್ಷಣೆ ಗಜಪಯಣ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದ್ದು, ಆಗಸ್ಟ್ ೪ ರಂದು ೧೪ ಆನೆಗಳು ಅರಮನೆಗೆ ಎಂಟ್ರಿ ಕೊಡಲಿವೆ.
ನಾಗರಹೊಳೆ ವೀರನಹೊಸಹಳ್ಳಿ ಗ್ರಾಮದ ಬಳಿ ದಸರಾ ಗಜಪಯಣಕ್ಕೆ ಸಕಲ ಸಿದ್ಧತೆ ವೀಕ್ಷಿಸಿ ಮಾತನಾಡಿದರುವ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಐ.ಬಿ. ಅವರು,...
ಸಾಂಸ್ಕೃತಿಕ ನಗರಿ, ಶಿಕ್ಷಣಕ್ಕೆ, ಸಂಸ್ಕೃತಿಗೆ ಹೆಸರವಾಗಿಯಾಗಿರುವ ಮೈಸೂರು, ಇತ್ತೀಚಿಗೆ ಮಾದಕ ದ್ರವ್ಯ ವಸ್ತುಗಳ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿದ್ದ ಕಾರಣದಿಂದಾಗಿ ಅಪಖ್ಯಾತಿಗೆ ಒಳಗಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಮುಂದಾಗಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿರುವ ಅವರು, ಮೈಸೂರಿನಲ್ಲಿ ₹390...
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ, ಭಾರೀ ಚರ್ಚೆಗೆ ಕಾರಣವಾಗಿದೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಯತೀಂದ್ರ ಹೇಳಿಕೆಯನ್ನು ಖಂಡಿಸಿ JDS ನಗರ ಸಮಿತಿ ಸದಸ್ಯರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ವಿವೇಕಕಾನಂದ ಮಾತನಾಡಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರೀತಿ ಯಾರೂ...
ಮೈಸೂರಿನ ಬನ್ನಿಮಂಟಪದಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಅದಕ್ಕೆ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಕಟ್ಟಡದ ಮುಂಭಾಗದ ಹೊರಮೇಲ್ಮ ಅರಮನೆಯಂತೆ ಕಾಣುವಂತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಎರಡು ವರ್ಷಗಳಲ್ಲಿ ನಗರದಲ್ಲಿ ಮತ್ತೊಂದು ಬಸ್ ನಿಲ್ದಾಣ ತಲೆ ಎತ್ತಲಿದ್ದು, ಅಂಬಾವಿಲಾಸ ಅರಮನೆಯ ಪ್ರತಿರೂಪದಂತೆ ಮೈದಳೆಯಲಿದೆ. ಅಲ್ಲಿರುವ ಕೆಎಸ್‌ಆರ್‌ಟಿಸಿಗೆ...
2015, 2016ರಲ್ಲಿ ಕೇಂದ್ರ ಸರ್ಕಾರವು ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಸತತ 2 ಬಾರಿ ಅಗ್ರಸ್ಥಾನ ಪಡೆದಿತ್ತು, ನಂತರ ರ್ಯಾಂಕಿಂಗ್‌ನಲ್ಲಿ ಕುಸಿತವನ್ನೇ ಕಂಡಿತ್ತು. ಆದರೆ ದಶಕದ ಬಳಿಕ 2024-25ನೇ ಸಾಲಿನ ಸೂಪರ್ ಸ್ವಚ್ಛ ನಗರ ಲೀಗ್ ನಲ್ಲಿ 'ಸ್ವಚ್ಛ ನಗರಿ' ಶ್ರೇಯಕ್ಕೆ ಮೈಸೂರು ಮತ್ತೆ ಪಾತ್ರವಾಗಿದೆ. ಇದು ಮೈಸೂರಿಗರಿಗೆ ಹೆಮ್ಮೆ ಮತ್ತು ಸಂತೋಷ ತಂದಿದೆ...
ಪ್ರತಿ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಪ್ರತಿ ಶುಕ್ರವಾರವೂ ತಾಯಿ ಚಾಮುಂಡೇಶ್ವರಿ ವಿವಿಧ ಅಲಂಕಾರದಲ್ಲಿ ಕಂಗೂಳಿಸುತ್ತಾಳೆ. ಆಷಾಡದ ವಿಶೇಷವಾಗಿ ಶಕ್ತಿದೇವತೆ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿಯನ್ನು ಇರಿಸಿ ದೇಗುಲದ ಸುತ್ತ ಮೆರವಣಿಗೆ ಮಾಡಲಾಯಿತು. ಅಪಾರ ಸಂಖ್ಯೆಯ...
ಕೇಂದ್ರ ಸರ್ಕಾರವು ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮಹಾನಗರಪಾಲಿಕೆಯು ಪ್ರಶಸ್ತಿ ಹೊಸ್ತಿಲಲ್ಲಿದೆ. ಸಾಂಸ್ಕೃತಿಕ ನಗರಿಯು ಯಾವ ಪ್ರಶಸ್ತಿಗಳಿಸಿದೆ ಎಂಬುದು ಜುಲೈ 17 ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಕಟಗೊಳ್ಳಲಿದೆ. ಸರ್ಕಾರದ ಆಹ್ವಾನದ ಮೇರೆಗೆ ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ನೀರ್ ಆಸೀಫ್ ನವದೆಹಲಿಗೆ ತೆರಳಿದ್ದಾರೆ. ಮೈಸೂರು ಮತ್ತೊಮ್ಮೆ ದೇಶದಾದ್ಯಂತ ಹೆಸರು ಗಳಿಸುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಈ...