ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೊಲೀಸ್ ಸ್ಟೋರ್ ಅಂಗಡಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಜನತಾ ಬಜಾರನಲ್ಲಿರುವ ಶಿವಪ್ಪ ನಾಯಕ ಎಂಬುವವರಿಗೆ ಸೇರಿದ ಪೊಲೀಸ್ ಸ್ಟೋರ್ ಅಂಗಡಿ ಯಾಗಿದ್ದು ಅಂಗಡಿಯಲ್ಲಿ ಜನರು ಇಲ್ಲದಿರುವ ಸಮಯದಲ್ಲಿ ವಿದ್ಯತ್ ಶಾರ್ಟ್ ಸರ್ಕ್ಯೂಟ್...
ಹುಬ್ಬಳ್ಳಿ: ವಾರಾಣಾಸಿಯಲ್ಲಿ ಮೃತಪಟ್ಟಿದ್ದ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಶಿವಪ್ಪ ಮುಕ್ಕಣ್ಣವರ ಅವರ ಮೃತದೇಹವನ್ನು ಹುಬ್ಬಳ್ಳಿಗೆ ತರಿಸಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಾಶಿಯಾತ್ರೆಗೆ ಹೋಗಿದ್ದ ಶಿವಪ್ಪ ಮುಕ್ಕಣ್ಣವರ ಅವರು ವಾರಣಾಸಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು....
ಹುಬ್ಬಳ್ಳಿ; ನಗರದಲ್ಲಿ ಆಸ್ತಿಗಳ ಮಾರ್ಗಸೂಚಿ ವಿಚಾರವಾಗಿ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಆದರೆ ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಶಾಸಕ ಮಹೇಶ್ ಟೆಂಗಿನಕಾಯಿ ತರಾಟೆಗೆ ತೆಗೆದುಕೊಂಡರು.
ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ಆಸ್ತಿಗಳ ಮಾರ್ಗ ಸೂಚಿ ದರ ಹೆಚ್ಚಳ ಕುರಿತು ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ನಡೆದ ಸಭೆಗೆ ನಾಗರಾಜ ಹಾಗೂ ಕೋಟಿ...
ಧಾರವಾಡ: ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್‍ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಗೀತಾ ಅವರು ನೀಡಿದ್ದ ರೂ. 3,66,000/- ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ...
ಹುಬ್ಬಳ್ಳಿ: ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಕಸಬಾ ಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಬಂಕಾಪೂರ ಚೌಕ್ ಬಳಿ ಆಸೀಫ್ ಹಾಗೂ ದೊಡ್ಡಪ್ಪ ದೊಡ್ಡಮನಿ ಎಂಬುವವರು ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಸಬಾಪೇಟೆ ಠಾಣೆಯ ಪಿ.ಐ ರಾಘವೇಂದ್ರ ಹಳ್ಳೂರ ಹಾಗೂ...
ಧಾರವಾಡ: ಮನೆಯಲ್ಲಿ ಮಾಲೀಕರಿಲ್ಲದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು, ಬಹಳ ದಿನಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಖದೀಮರನ್ನು ಬಂಧಿಸುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ದೇಶಪಾಂಡೆ ಆಸ್ಪತ್ರೆ ಬಳಿಯ ನಿವಾಸಿ 29 ವಯಸ್ಸಿನ ಮಲ್ಲಯ್ಯ ಅಲಿಯಾಸ್ ಬೇವಿನತಪ್ಪಲ ಬಸಯ್ಯ ಮಠಪತಿಎನ್ನುವ ಖದೀಮನನ್ನು...
ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದೆ. ಧಾರವಾಡ ಮಾಹಾನಗರ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ಸಲ್ಲಿಸಿದ್ದಾರೆ. ವಾಟ್ಸಪ್ ಮೂಲಕ ಹು-ಧಾ ಮಾಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಕಪಟಕರ್ ಅವರಿಗೆ ರಾಜೀನಾಮೆ...
ಹುಬ್ಬಳ್ಳಿ: ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಬೆಳೆ ಬೆಳೆಯುವ ರೈತರಿಗೆ ಬರಗಾಲ ಆವರಿಸಿದೆ. ರೈತರ ಕಷ್ಟ ನಿವಾರಿಸಲು ಸರ್ಕಾರ ಕೃತಕವಾಗಿ ಮೋಡ ಬಿತ್ತನೆಗೆ ಅನುಮತಿ ನೀಡಿದ ಬೆನ್ನಲ್ಲೆ ಸರ್ಕಾರ ಮೋಡ ಬಿತ್ತನೆಗೆ ಅಧಿಕೃತವಾಗಿ ಚಾಲನೆ ನೀಡಿತು.
ಈಗಾಗಲೆ ಸರ್ಕಾರದಿಂದ ಕೃತಕ ಮೋಡ ಬಿತ್ತನೆಗೆ ಅನುಮತಿ ಸಿಕ್ಕ ಬೆನ್ನಲ್ಲೆ ಕೃತಕ ಮೋಡ ಬಿತ್ತನೆ ಮಾಡಿ ರೈತರಿಗೆ...
ಹುಬ್ಬಳ್ಳಿ: ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರಿಗೂ ಪಕ್ಷದಿಂದ ಸಾಕಷ್ಟು ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಯಾರೋ ಬರೆದುಕೊಟ್ಟಿರುವ ಪತ್ರವನ್ನು ಬಹಿರಂಗ ಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಬಿಜೆಪಿ ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನನಗೆ ಆಗಿರುವ ಅನ್ಯಾಯದ ಬಗ್ಗೆ ನಿನ್ನೆಯಷ್ಟೇ ನಾನು ಮಾತನಾಡಿದ್ದೇನೆ. ಅಲ್ಲದೇ...
ಧಾರವಾಡ: ಶಾಸಕ ಬಸವರಾಜ್ ರಾಯರೆಡ್ಡಿ ಸಿಡಿದೆದ್ದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ನಮ್ಮ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದ್ದರು. ಆದರೆ, ಇದೀಗ ಬಸವರಾಜ್ ರಾಯರೆಡ್ಡಿ ನಿವಾಸಕ್ಕೆ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಎಂ.ಸಿ ಸುಧಾಕರ್ ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಟಿವಿ ಜೊತೆ ಮಾತಾಡಿದ ಬಸವರಾಜ್ ರಾಯರೆಡ್ಡಿ, ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ....