Tumakuru News: ತುಮಕೂರು: ಇಂದು ತುಮಕೂರಿನಲ್ಲಿ ಕೆಡಿಪಿ ಸಭೆ ನಡೆದಿದ್ದು, ಈ ವೇಳೆ ಎಂಎಲ್ಸಿ ಚಿದಾನಂದಗೌಡ, ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದ ಅಂಗವಿಕಲರ ನಕಲಿ ಕಾಡ್೯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಈ ಸಭೆ ನಡೆದಿದ್ದು, ಈ ವೇಳೆ ಎಂಎಲ್‌ಸಿ ಆರೋಪಕ್ಕೆ ಧ್ವನಿಗೂಡಿಸಿರುವ ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದ ಡಿಎಚ್ ಓ ಚಂದ್ರಶೇಖರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಸಿರುವ ಸಚಿವ ಜಿ.ಪರಮೇಶ್ವರ್, ಈಗಾಗಲೇ ಪ್ರಕರಣ ವಿರುದ್ದ ಎಫ್‌ಐ ಆರ್ ಆಗಿದೆ ತನಿಖೆ ಬಳಿಕ ಕ್ರಮ ಆಗಲಿದೆ. ಈಗಾಗಲೇ ತನಿಖೆ ಆರಂಭಗೊಂಡಿದೆ ಈ ಪ್ರಕರಣದಲ್ಲಿ 26 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. ಅಲ್ಲದೇ ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯ ವೈಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ.

