Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಚಿಗರಿ ಸೇವೆ ವರವಾಗಿದೆಯೋ ಅಥವಾ ಶಾಪವಾಗಿದೆಯೋ ಗೊತ್ತಿಲ್ಲ. ಆದರೆ ಜನರು ಮಾತ್ರ ಚಿಗರಿ ಸೇವೆ ಪಡೆಯುವುದಕ್ಕಿಂತ ಅವ್ಯವಸ್ಥೆಯಿಂದಲೇ ಹೈರಾಣಾಗಿದ್ದಾರೆ.
ಓವರ್ ಸ್ಪೀಡ್ ಡ್ರೈವಿಂಗ್ ಹಾಗೂ ಎಲ್ಲೆಂದರಲ್ಲಿ ಅವ್ಯವಸ್ಥೆಯಿಂದ ಇತರೇ ವಾಹನ ಸವಾರರಿಗೆ ಆತಂಕವನ್ನುಂಟು ಮಾಡಿರುವ ಚಿಗರಿ ಬಸ್, ಈಗ ಆಯಕಟ್ಟಿನ ಜಾಗೆಯಲ್ಲಿಯೇ ಕೆಟ್ಟುನಿಂತು, ಸುಮಾರು ಮೂರು...
Udupi News: ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪ್ರವೀಣ್ ಚೌಗಲೆ(39)ಯನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.
ಉಡುಪಿಯ ನೇಜಾರಿನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಆರೋಪಿ ಪ್ರವೀಣ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶ ನೀಡಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದ ಪ್ರವೀಣ್ ಚೌಗಲೆ, ಈ ಕೊಲೆಯ...
Political News: ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಇಂದು ಪದಗ್ರಹಣ ಕಾರ್ಯಕ್ರಮವೂ ನಡೆಯಿತು. ಈ ಬಗ್ಗೆ ವಿಜಯೇಂದ್ರ ಟ್ವೀಟ್ ಮಾಡಿದ್ದು, ಬಿಜೆಪಿಯ ಎಲ್ಲ ಹಿರಿಯ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ಮತ್ತೊಮ್ಮೆ ಮೋದಿಯವರನ್ನು ಭಾರತದ ಪ್ರಧಾನಿ ಮಾಡುವುದಾಗಿ, ಭರವಸೆ ನೀಡಿದ್ದಾರೆ.
ಮಾನ್ಯ ನಳೀನ್ ಕುಮಾರ್ ಕಟೀಲ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ...
Political News: ಇಂದು ಜೆಡಿಎಸ್ ಕಾರ್ಯಕರ್ತರಾದ ಗೌರಿಶಂಕರ್ ಮತ್ತಿ ಮಂಜುನಾಥ್ ಎಂಬುವವರು, ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು, ಇವರಿಬ್ಬರನ್ನು ಸ್ವಾಗತಿಸಿದರು. ಗೌರಿಶಂಕರ್ ಮತ್ತು ಮಂಜುನಾಥ್ ಜೊತೆ ಇನ್ನು ಹಲವು ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್‌ಗೆ ಬರುತ್ತಿರುವುದು ವಿಶೇಷ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇಬ್ಬರನ್ನೂ...
Bengaluru News: ಬೆಂಗಳೂರು : ಅಕ್ಕಿ ಕಳ್ಳಸಾಗಣೆ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ ವೇಳೆ ಅಕ್ಕಿ, ರಾಗಿ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಅಕ್ಕಿ ಸಾಗಾಣಿಕೆ ವೇಳೆ ವಾಹನ ಸಮೇತ ಸೀಜ್ ಮಾಡಿದ್ದಾರೆ. ಎರಡೂವರೆ ಟನ್ ಅಕ್ಕಿ ಮತ್ತು ರಾಗಿ ಪಡಿತರ ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಹೊಸಕೆರೆಹಳ್ಳಿ ಕೆ.ಇ.ಬಿ ಜಂಕ್ಷನ್ ಬಳಿ...
Bengaluru Political News: ಬೆಂಗಳೂರು: ವಿದ್ಯುತ್ ಕಳವು ಆರೋಪದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವುದು ಕಂಡುಬಂದಿದೆ.
ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ಮಾಜಿ ಸಿಎಂ...
Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಲವಾರು ಸಮಾರಂಭಗಳನ್ನು ಉದ್ಘಾಟಿಸಿದರು. ಜವಹರ್ ಲಾಲ್ ನೆಹರುರವರ ಹುಟ್ಟುಹಬ್ಬದ ಅಂಗವಾಗಿ, ಕಾಂಗ್ರೆಸ್ ಸರ್ಕಾರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಒಂದು ಮೊಹಬ್ಬತ್ ಕಿ ದುಕಾನ್ ಉದ್ಘಾಟನಾ ಸಮಾರಂಭ.
ಈ ಸಮಾರಂಭವನ್ನು ಟೇಪ್ ಕತ್ತರಿಸುವ ಮೂಲಕ ಡಿಕೆಶಿ ಉದ್ಘಾಟಿಸಿದ್ದು, ಈ ಬಗ್ಗೆ ಡಿಕೆಶಿ ಟ್ವೀಟ್ ಕೂಡ ಮಾಡಿದ್ದರು. ಭಾರತ್ ಜೋಡೋ...
International News: ಗಾಜಾದಲ್ಲಿ ಕಾರ್ಯಾಚರಣೆ ಮುಂದುವರಿಸಿದ ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದೆ. ಅಲ್ಲದೇ ಹಲವು ಉಗ್ರರು ಗಾಜಾದಿಂದ ಕಾಲ್ಕಿತ್ತಿದ್ದು, ಇನ್ನು ಗಾಜಾ ಇಸ್ರೇಲ್ ವಶದಲ್ಲಿರುತ್ತದೆ ಎಂದು, ಇಸ್ರೇಲ್ ಸೇನೆ ಸ್ಪಷ್ಟನೆ ನೀಡಿದೆ.
16 ವರ್ಷದಿಂದ ಹಮಾಸ್ ಉಗ್ರರು ಗಾಜಾದಲ್ಲಿದ್ದರು. ಆದರೆ ಇದೀಗ ದೊಡ್ಡ ಯುದ್ಧ ನಡೆದಿದ್ದು ಸುಮಾರು 40 ದಿನದ ಈ...
Political News: ಇಂದು ನೆಹರುರವರ ಜನ್ಮದಿನವಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೆಲ್ಲ ಸೇರಿ, ನೆಹರುರವರ ಜನ್ಮ ದಿನಾಚರಣೆ ಆಚರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ, ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ನೆಹರುರವರು ಯಾವ ರೀತಿ, ಭಾರತವನ್ನನು ಕಟ್ಟಿದರು ಎಂಬ ಬಗ್ಗೆ...
International News: ಗಾಜಾದ ಆಸ್ಪತ್ರೆ, ಶಾಲಾ ಕಟ್ಟಡಗಳನ್ನೇ ತಮ್ಮ ನೆಲೆಯಾಗಿಸಿಕೊಂಡಿರುವ ಹಮಾಸ್ ಉಗ್ರರು, ಅಲ್ಲೇ ಸುರಂಗ ಮಾರ್ಗವನ್ನು ಸಹ ನಿರ್ಮಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆ ವೀಡಿಯೋ ಮಾಡಿ, ಟ್ವೀಟ್ ಮೂಲಕ ರಿಲೀಸ್ ಮಾಡಿದೆ.
ಈ ಮೊದಲು ಇಸ್ರೇಲ್ ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ದಾಳಿ ಮಾಡುತ್ತಿದೆ ಎಂದು ಹಮಾಸ್ ಸುದ್ದಿ ಹರಡಿಸಿತ್ತು. ಆದರೆ...