Political News: ಸ್ಯಾಂಡಲ್‌ವುಡ್ ಸೋಪ್ ಮಂಡಳಿಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅವರಿಗೆ ಫೀಸ್ ರೂಪದಲ್ಲಿ ಸಹಾಯಧನವೆಂದು 6ವರೆ ಕೋಟಿ ರೂಪಾಯಿ ನೀಡಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಪ್ರಶ್ನಿಸಿದ್ದು, ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಪ್ರಮುಖ ಇಲಾಖೆ/ಮಂಡಳಿಗಳೆಲ್ಲ ನಷ್ಟ ಅನುಭವಿಸುತ್ತಿರುವ ಸಮಯದಲ್ಲಿ, ಲಾಭದಲ್ಲಿರುವ ರಾಜ್ಯದ ಹೆಮ್ಮೆಯ ಸಂಸ್ಥೆಯಾದ ಮೈಸೂರ್ ಸ್ಯಾಂಡಲ್ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಯ ಮೇಲೆ ಸರ್ಕಾರದ ವಕ್ರ ದೃಷ್ಟಿ ಬಿದ್ದಿದೆ.
ಕೆ.ಎಂ.ಎಫ್. ಹಾಗೂ ಇತರೆ ಸಂಸ್ಥೆಗಳಿಗೆ ಅಪ್ಪು-ಶಿವಣ್ಣ ಅವರಂತಹ ಮೇರು ನಟರನ್ನೇ ರಾಯಭಾರಿಗಳನ್ನಾಗಿ ಮಾಡಿದ್ದು ನಮೆಲ್ಲರ ಹೆಮ್ಮೆ. ಈ ರಾಯಭಾರಿಗಳೆಲ್ಲರೂ ಸರ್ಕಾರದ ಸಂಸ್ಥೆಗಳಿಗಾಗಿ ಉಚಿತವಾಗಿ ಪ್ರಾಯೋಜಿಕತೆಯನ್ನು ನೀಡಿದ್ದು ಕನ್ನಡಿಗರ ಹೃದಯ ವಿಶಾಲತೆಯನ್ನು ತೋರಿಸುತ್ತದೆ.
ಆದರೆ, ಇದೀಗ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಗೆ ರಾಯಭಾರಿಯನ್ನಾಗಿ ಪರಭಾಷಿಕ ನಟಿಯೋರ್ವರನ್ನು 6.5 ಕೋಟಿ ಮೊತ್ತಕ್ಕೆ ನೇಮಕ ಮಾಡಿರುವುದು ಖಂಡನೀಯ. ಕರ್ನಾಟಕದಲ್ಲಿ ರಾಯಭಾರಿಗಳಾಗುವ ಅರ್ಹತೆ ಹೊಂದಿರುವ ಮತ್ಯಾರು ಕನ್ನಡದ ನಟ-ನಟಿಯರು ಸಿಗಲಿಲ್ಲವೇ? ಅಥವಾ D.K.Shivakumar ಅವರ ನಟ್ಟು – ಬೋಲ್ಟು ಧಮ್ಕಿಗೆ ಹೆದರದಿದ್ದಕ್ಕಾಗಿ ಶಿಕ್ಷೆಯೋ? ಎಂದು ನಿಖಿಲ್ ಕುಮಾರ್ ಪ್ರಶ್ನಿಸಿದ್ದಾರೆ.