ನವದೆಹಲಿ : ಆಪರೇಷನ್ ಸಿಂಧೂರದ ಬಳಿಕ ಕುತಂತ್ರಿ ಚೀನಾ ಹಾಗೂ ರಣಹೇಡಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ಬಿಟ್ಟು ಬದುಕುವಂತೆ ಭಾರತ ಎಚ್ಚರಿಕೆ ನೀಡಿದೆ. ಇನ್ನೂ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನಿಲ್ಲಿಸಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಇನ್ನೂ ಈ ಕುರಿತು ಮಾತನಾಡಿರುವ ಅವರು, ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಲು ಮತ್ತು ಭಯೋತ್ಪಾದನಾ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಟರ್ಕಿ ಹಾಗೂ ಪಾಕಿಸ್ತಾನಗಳಿಗೆ ಭಾರತವು ಬಲವಾಗಿ ಒತ್ತಾಯಿಸುತ್ತದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಮತ್ತು ದಶಕಗಳಿಂದ ಅದು ಆಶ್ರಯಿಸಿರುವ ಭಯೋತ್ಪಾದಕ ವ್ಯವಸ್ಥೆಯ ವಿರುದ್ಧ ಗಟ್ಟಿಯಾದ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟರ್ಕಿ ಪಾಕಿಸ್ತಾನವನ್ನು ಬಲವಾಗಿ ಒತ್ತಾಯಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನಾಗರಿಕ ವಿಮಾನಯಾನ ಭದ್ರತೆ ತೆಗೆದುಕೊಂಡಿದೆ..
ಪರಸ್ಪರರ ಕಾಳಜಿಗಳಿಗೆ ಸೂಕ್ಷ್ಮತೆಯ ಆಧಾರದ ಮೇಲೆ ಸಂಬಂಧಗಳನ್ನು ನಿರ್ಮಿಸಲಾಗಿದೆ. 9 ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ನಿರ್ವಹಿಸುವ ಟರ್ಕಿಶ್-ಸ್ಥಾಪಿತ ಸೆಲೆಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ರದ್ದುಗೊಳಿಸಿರುವುದುನ್ನು ಭಾರತದಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸೆಲೆಬಿ ವಿಷಯವನ್ನು ಇಲ್ಲಿನ ಟರ್ಕಿಶ್ ರಾಯಭಾರ ಕಚೇರಿಯೊಂದಿಗೆ ಚರ್ಚಿಸಲಾಗಿದೆ. ಆದರೆ ಈ ನಿರ್ದಿಷ್ಟ ನಿರ್ಧಾರವನ್ನು ನಾಗರಿಕ ವಿಮಾನಯಾನ ಭದ್ರತೆ ತೆಗೆದುಕೊಂಡಿದೆ ಅಂತ ನನಗೆ ಗೊತ್ತಾಗಿದೆ ಎಂದಿದ್ದಾರೆ.
ಭಾರತದ ದೃಢ ನಿಲುವು ತಿಳಿಸಲಾಗಿತ್ತು..
ಅಲ್ಲದೆ ಚೀನಾದ ವಿಚಾರದಲ್ಲಿ ಮೇ 10 ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಮಾತುಕತೆ ನಡೆದಿತ್ತು. ವಿದೇಶಾಂಗ ಸಚಿವರು ಮತ್ತು ಗಡಿ ಸಮಸ್ಯೆಯ ವಿಶೇಷ ಪ್ರತಿನಿಧಿ ವಾಂಗ್ ಯಿ ಅವರು ಮೇ 10, 2025 ರಂದು ಪರಸ್ಪರ ಮಾತನಾಡಿದ್ದರು, ಆಗ ಧೋವಲ್ ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ತಿಳಿಸಿದ್ದರು ಎಂದು ಜೈಸ್ವಾಲ್ ಹೇಳಿದ್ದಾರೆ.
ಉಭಯ ರಾಷ್ಟ್ರಗಳು ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯು ಭಾರತ-ಚೀನಾ ಸಂಬಂಧಗಳ ಆಧಾರವಾಗಿ ಉಳಿದಿದೆ ಎಂದು ಚೀನಾದ ಕಡೆಯವರು ಚೆನ್ನಾಗಿ ತಿಳಿದಿದ್ದಾರೆ. ಚೀನಾದ ಮಾಧ್ಯಮಗಳ ಪ್ರಕಾರ ಅವರ ಸಂಭಾಷಣೆಯ ಸಮಯದಲ್ಲಿ, ಯುದ್ಧವು ಭಾರತದ ಆಯ್ಕೆಯಲ್ಲ ಆದರೆ ಪಹಲ್ಗಾಮ್ ದಾಳಿಯ ನಂತರ ನವದೆಹಲಿ ಭಯೋತ್ಪಾದನಾ ನಿಗ್ರಹ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ದೋವಲ್ ವಾಂಗ್‌ಗೆ ತಿಳಿಸಿದ್ದರು ಅಂತ ಅವರು ತಿಳಿಸಿದ್ದಾರೆ.
ಬಾಯ್ಕಾಟ್ ಟರ್ಕಿ ಅಭಿಯಾನಕ್ಕೆ ಕಂಗಾಲಾದ ಎರ್ಡೊಗನ್..
ಇನ್ನೂ ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ವೇಳೆ ಚೀನಾ ಹಾಗೂ ಟರ್ಕಿ ಪಾಕ್‌ಗೆ ಬೆಂಬಲ ನೀಡಿದ್ದವು. ಟರ್ಕಿಯು ಪಾಕಿಸ್ತಾನಕ್ಕೆ ಯುದ್ಧ ವಿಮಾನ, ಮಿಸೈಲ್ ಹಾಗೂ ಡ್ರೋನ್‌ಗಳನ್ನು ರವಾನಿಸಿತ್ತು. ಅದರಂತೆಯೇ ಚೀನಾ ಕೂಡ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ ಇದಾದ ಬೆನ್ನಲ್ಲೇ ಈ ಎರಡೂ ದೇಶಗಳ ಭಾರತದಲ್ಲಿ ವ್ಯಾಪಕ ಆಕ್ರೋಶ ಹೆಚ್ಚಾಗಿದ್ದು, ಟರ್ಕಿಗೆ ಭಾರತೀಯರು ದೊಡ್ಡ ಮರ್ಮಾಘಾತವನ್ನೇ ನೀಡಿದ್ದಾರೆ. ಟರ್ಕಿಯ ಸೇಬು, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳಿಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದ್ದು, ಇದರಿಂದ ಷಡ್ಯಂತ್ರಿ ಟರ್ಕಿಗೆ ಸಾಕಷ್ಟು ಆರ್ಥಿಕ ಹೊಡೆತ ಬಿದ್ದಿದೆ. ಅಲ್ಲದೆ ಪ್ರವಾಸೋದ್ಯಮವನ್ನೇ ನಂಬಿದ್ದ ಈ ಮುಸ್ಲಿಂ ರಾಷ್ಟ್ರಕ್ಕೆ ಭಾರತೀಯರು ಪ್ರವಾಸವನ್ನೇ ಬಾಯ್ಕಾಟ್ ಮಾಡುವ ಮೂಲಕ ಮುಟ್ಟಿ ನೋಡಿಕೊಳ್ಳುವ ಏಟನ್ನು ಭಾರತ ವಿರೋಧಿ ಅಲ್ಲಿನ ದುರಹಂಕಾರಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ಗೆ ಭಾರತೀಯರು ನೀಡಿದ್ದಾರೆ.